Tridevi Ponnakka Birthday: ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರ ಮಗಳು ತ್ರಿದೇವಿ ಪೊನ್ನಕ್ಕ ಅವರ ಜನ್ಮದಿನವನ್ನು ಗ್ರ್ಯಾಂಡ್ ಆಗಿ ಆಚರಿಸಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯರು, ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು.

ಅಕ್ಟೋಬರ್ 4ರಂದು ಹರ್ಷಿಕಾ ಪೂಣಚ್ಛ, ಭುವನ್ ಪೊನ್ನಣ್ಣ ಅವರ ಮಗಳು ತ್ರಿದೇವಿ ಪೊನ್ನಕ್ಕ ಅವರ ಜನ್ಮದಿನ ಆಚರಣೆ ಮಾಡಲಾಯ್ತು.

ತ್ರಿದೇವಿಗೆ ಈಗ ಒಂದು ವರ್ಷದ ಸಂಭ್ರಮ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಮುಖಂಡರು, ಕ್ರೀಡಾ ತಾರೆಗಳು ಕೂಡ ಈ ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಗಣೇಶ ಮಹಾದೇವ್ ಸ್ಟುಡಿಯೊಸ್ ನಿರ್ಮಾಣ ಸಂಸ್ಥೆಯು ಭುವನ್ ಪೊನ್ನಣ್ಣ ಅವರಿಗೆ ಹೊಸ ಸಿನಿಮಾ ಘೋಷಣೆ ಮಾಡಿದೆ. Bully ಸಿನಿಮಾದ ಮುಂಗಡ ಚೆಕ್ ನೀಡಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಜಯಮಾಲಾ, ಪ್ರಣೀತಾ, ಶ್ರುತಿ, ಸುಧಾರಾಣಿ, ಮಲಾಶ್ರೀ, ತಾರಾ ಕುಟುಂಬ ಕೂಡ ಇಲ್ಲಿ ಹಾಜರಿ ಹಾಕಿತ್ತು.

ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ವೆಂಕಟ್ ನಾರಾಯಣ್ (KVN), ಡಾ ರಾಯ್, ಅರವಿಂದ್ ರೆಡ್ಡಿ, ವಿಜಯ್ ಟಾಟಾ & ಅಮೃತಾ ಟಾಟಾ, ಗಣೇಶ ಮಹಾದೇವ್ ಕೂಡ ಭಾಗಿಯಾಗಿದ್ದರು.

ರಮೇಶ್ ಅರವಿಂದ್ ಮಗಳು ಹಾಗೂ ಪತ್ನಿ ಕೂಡ ಭಾಗಿಯಾಗಿದ್ದರು.

ಡಾ. ಅಶ್ವತ್ಥನಾರಾಯಣ್, ಎಎಸ್ ಪೊನ್ನಣ್ಣ, ಎನ್ ಎ ಹ್ಯಾರಿಸ್, ರೋಷನ್ ಬೇಗ್, ಭಾರತೀಯ ಹಾಕಿ ನಾಯಕ ಅರ್ಜುನ್ ಹಲಪ್ಪ, ಕೊಡವ ಸಮಾಜ ಅಧ್ಯಕ್ಷ ಚಿರಿಯಾಪಾಂಡ ಸುರೇಶ್ ಕೂಡ ಭಾಗಿಯಾಗಿದ್ದರು.

ನಟಿ ತಾರಾ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಅವರು ಕೂಡ ಭಾಗಿಯಾಗಿದ್ದರು.

ಕನ್ನಡ ಚಿತ್ರರಂಗದ ಗಣ್ಯರು ಒಂದೇ ಫ್ರೇಮ್‌ನಲ್ಲಿ ಕಂಡಾಗ..

ನಟಿ ಪ್ರಣೀತಾ, ರಮೇಶ್ ಅರವಿಂದ್, ಶ್ರುತಿ ಕುಟುಂಬಸ್ಥರು

ನಟ ರಮೇಶ್ ಅರವಿಂದ್, ಶ್ರುತಿ, ಮಾಲಾಶ್ರೀ ಮಕ್ಕಳು

ತ್ರಿದೇವಿ ಪೊನ್ನಕ್ಕ ಅವರ ಮೊದಲ ಜನ್ಮದಿನದ ಸಂಭ್ರಮ. ನವರಾತ್ರಿ ಸಮಯದಲ್ಲಿ ತ್ರಿದೇವಿ ಜನಿಸಿದ್ದರು. ಹೀಗಾಗಿ ತ್ರಿದೇವಿ ಎಂದು ಹೆಸರು ಇಡಲಾಗಿದೆ.

ಕೆವಿಎನ್ ನಿರ್ಮಾಪಕ ವೆಂಕಟೇಶ್ ರೆಡ್ಡಿ ಈಗ ಟಾಕ್ಸಿಕ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಇನ್ನೂ ಕೆಲ ನಟ-ನಟಿಯರ ಸಿನಿಮಾಕ್ಕೆ ಹಣ ಹೂಡಿದ್ದಾರೆ.

Source link
Photos: ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಮಗಳ ಜನ್ಮದಿನದಲ್ಲಿ ಗಣ್ಯಾತಿಗಣ್ಯರು; ಭರ್ಜರಿ ಉಡುಗೊರೆ, ಸರ್ಪ್ರೈಸ್