
ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ ಮಹಿಳಾ ತಂಡ, ನೋ ಹ್ಯಾಂಡ್‌ಶೇಕ್, ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಕೆಲವೆ ದಿನಗಳ ಅಂತರದಲ್ಲಿ ಪಾಕಿಸ್ತಾನ ಭಾರಿ ಮುಖಭಂಗ ಅನುಭವಿಸಿದೆ.
ಕೊಲೊಂಬೋ (ಅ.05) ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಎಡವಿದ ಪಾಕಿಸ್ತಾನ 159 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 88 ರನ್ ಗೆಲುವು ದಾಖಲಿಸಿದೆ. ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮುಗ್ಗರಿಸಿದೆ. ಈ ಮೂಲಕ ಏಕದಿನದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ.
43 ಓವರ್‌ಗೆ ಪಾಕಿಸ್ತಾನ ಆಲೌಟ್
ಭಾರತ 248ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನದ ಸಾದಿರ್ ಅಮೀನ್ ದಿಟ್ಟ ಹೋರಾಟ ನೀಡಿದ್ದರು. 81 ರನ್ ಸಿಡಿಸಿ ಅಬ್ಬರಿಸಿದ್ದರು. ಅಮೀನ್ ಅಬ್ಬರ ಭಾರತಕ್ಕೆ ತೆಲನೋವಾಗಿತ್ತು. ಆದರೆ ಸಾದಿರ್ ಅಮೀನ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತ್ತು. ಹೀಗಾಗಿ 43 ಓವರ್‌ಗಳಲ್ಲಿ ಪಾಕಿಸ್ತಾನ ಆಲೌಟ್ ಆಗಿತ್ತು. 159 ರನ್ ಸಿಡಿಸಿ ಪಾಕಿಸ್ತಾನ ಸೋಲೋಪ್ಪಿಕೊಂಡಿತು.
ಪಾಕ್ ಏಕದಿನದಲ್ಲಿ ಭಾರತ ಸೋಲಿಲ್ಲದ ಸರದಾರ
ಪಾಕಿಸ್ತಾನ ವಿರುದ್ದ ಭಾರತ ಮಹಿಳಾ ತಂಡ ಏಕದಿನ ಮಾದರಿಯಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲು ಕಂಡಿಲ್ಲ. 12 ಏಕದಿನ ಪಂದ್ಯ ಆಡಿದ್ದು, 12ರಲ್ಲೂ ಪಾಕಿಸ್ತಾನ ವಿರುದ್ದ ಭಾರತ ಗೆಲುವು ದಾಖಲಿಸಿದೆ