ಬೆಂಗಳೂರು: ದೇಶಾದಾದ್ಯಂತ ಕನ್ನಡದ ಸಿನಿಮಾ ಕಾಂತಾರ ಚಾಪ್ಟರ್-1 ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್-1 ಸಿನಿಮಾದಲ್ಲೂ ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕನ್ನಡದ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.

ಇನ್ನು ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ಸಾಕಷ್ಟು ಒಲವಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಇನ್ನು ಕಳೆದ ಬಾರಿ ರಿಷಬ್ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಆರ್ಸಿಬಿ ಮ್ಯಾಚ್ ಕಣ್ತುಂಬಿಕೊಂಡಿದ್ದರು. ಕ್ರಿಸ್ ಗೇಲ್ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.

ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ರಿಷಬ್ ಶೆಟ್ಟಿ ಅವರ ಕಾರ್ನಲ್ಲಿ ಕ್ರಿಕೆಟ್ ಕಿಟ್ ಇರುತ್ತದೆ. ಸಿನಿಮಾ ಶೂಟಿಂಗ್ನಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಕ್ರಿಕೆಟ್ ಆಡುತ್ತಾರಂತೆ.

ಇನ್ನು ಸಂದರ್ಶನವೊಂದರಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ರಿಷಬ್ ಶೆಟ್ಟಿ, ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಹೆಸರು ಹೇಳಿದ್ದಾರೆ. ಗಂಗೂಲಿ ಕೇವಲ ಆಟಗಾರನಾಗಿ ಮಾತ್ರವಲ್ಲ, ವೈಯುಕ್ತಿಕ ಹೀರೋ ಆಗಿಯೂ ತಮಗಿಷ್ಟ ಎಂದು ರಿಷಭ್ ಶೆಟ್ಟಿ ಹೇಳಿದ್ದಾರೆ.

ಸೌರವ್ ಗಂಗೂಲಿಯವರ ನಾಯಕತ್ವ ಹಾಗೂ ಆಕ್ರಮಣಕಾರಿ ಮನೋಭಾವ ನನಗೆ ತುಂಬಾ ಇಷ್ಟ. ಇದರಿಂದಲೇ ಭಾರತ ಕ್ರಿಕೆಟ್ ತಂಡದ ದಿಕ್ಕು ಬದಲಾಯಿತು ಎಂದು ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಸೌರವ್ ಗಂಗೂಲಿ ಅವರ ವೃತ್ತಿಬದುಕು ಹಾಗೂ ನೋಡಿಯೇ ತಾವು ಶಿಸ್ತು, ಕೆಲಸದ ಮೇಲಿನ ಬದ್ದತೆ, ಕಠಿಣ ಪರಿಶ್ರಮ ಪಡಲು ಸ್ಪೂರ್ತಿಯಾಯಿತು ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ದಿಗ್ಗಜ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ರಿಷಬ್ ಪಂತ್, ಸೌರವ್ ಗಂಗೂಲಿ ಅಭಿಮಾನಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿರಲಿಲ್ಲ.

Source link
ಕಾಂತಾರ ಹೀರೋ ರಿಷಬ್ ಶೆಟ್ಟಿ ಫೇವರೇಟ್ ಕ್ರಿಕೆಟಿಗ ಯಾರು? ಗೆಸ್ ಮಾಡಿ