ಮೊಹಮ್ಮದ್ ಶಮಿ ಲಕ್ಸುರಿ ಲೈಫ್‌ಸ್ಟೈಲ್‌ಗೆ ಹೋಲಿಸಿದರೆ ಈ ಮೊತ್ತ ಭಾರಿ ಕಡಿಮೆ ಆಯ್ತು ಅವರು ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಶಮಿ ಪತ್ನಿ ಹಸೀನಾ ಜಹಾನ್ ಹೇಳಿದ್ದಾರೆ.
ಕೋಲ್ಕತ್ತಾ: ತಮ್ಮ ವಿಚ್ಛೇದಿತ ಪತ್ನಿ ಹಾಗೂ ಮಗಳಿಗೆ ತಿಂಗಳಿಗೆ 4 ಲಕ್ಷ ಮೊತ್ತದ ದುಬಾರಿ ನಿರ್ವಹಣಾ ವೆಚ್ಚವನ್ನು ನೀಡುವಂತೆ ನಿನ್ನೆ ಕಲ್ಕತ್ತಾ ಹೈಕೋರ್ಟ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಆದೇಶ ನೀಡಿತ್ತು. ಆದರೆ ಮೊಹಮ್ಮದ್ ಶಮಿ ಲಕ್ಸುರಿ ಲೈಫ್‌ಸ್ಟೈಲ್‌ಗೆ ಹೋಲಿಸಿದರೆ ಈ ಮೊತ್ತ ಭಾರಿ ಕಡಿಮೆ ಆಯ್ತು ಅವರು ಕನಿಷ್ಠ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಶಮಿ ಪತ್ನಿ ಹಸೀನಾ ಜಹಾನ್ ಹೇಳಿದ್ದಾರೆ. ಜುಲೈ 1ರಂದು ಕಲ್ಕತ್ತಾ ಹೈಕೋರ್ಟ್ ಅವರಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚ ನೀಡುವಂತೆ ಆದೇಶ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹಸೀನಾ ಜಹಾನ್ ಇದನ್ನು ತಮ್ಮ ಪಾಲಿಗೆ ಸಿಕ್ಕ ದೊಡ್ಡ ಗೆಲುವು ಎಂದು ಹೇಳಿದ್ದಾರೆ. ಜೊತೆಗೆ ಈ ತೀರ್ಪಿಗೆ ಪ್ರತಿಯಾಗಿ ತಾನು ಕೇವಿಯಟ್ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಜುಲೈ 1 ರಂದು ಹಸೀನಾ ಜಹಾನ್ ಅವರಿಗೆ 1.5 ಲಕ್ಷ ಹಾಗೂ ಅವರ ಪುತ್ರಿಗೆ 2.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶದ ಬಳಿಕ ಮಾತನಾಡಿದ ಹಸೀನಾ ಹೈಕೋರ್ಟ್ ಈ ತೀರ್ಪು ತನಗೆ ಸಿಕ್ಕ ಬಹಳ ದೊಡ್ಡ ಗೆಲುವು. ಆದರೆ ತಾನು ತಿಂಗಳಿಗೆ 10 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಏಕೆಂದರೆ ಜೀವನ ವೆಚ್ಚ (cost of living)ಈಗ ಹೆಚ್ಚಾಗಿದೆ. ಹಾಗೇಯೇ ಶಮಿ ಜೀವನ ಶೈಲಿ ಲಕ್ಸುರಿಯಾಗಿದೆ. ಮೊಹಮ್ಮದ್ ಶಮಿಯ ಒತ್ತಾಯದ ಮೇರೆಗೆ ತಾನು ಮಾಡೆಲಿಂಗ್ ಹಾಗೂ ನಟನಾ ವೃತ್ತಿಯನ್ನು ಬಿಟ್ಟು ಬಿಡಬೇಕಾಯ್ತು. ಹೀಗಾಗಿ ನನಗೆ ನನ್ನದೇ ಆದ ಯಾವುದೇ ಆದಾಯದ ಮೂಲಗಳಿಲ್ಲ ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ತಿಂಗಳಿಗೆ 4 ಲಕ್ಷ ಪರಿಹಾರ ನೀಡುವ ಆದೇಶ ನೀಡಿದ ಬಗ್ಗೆ ನ್ಯಾಯಾಧೀಶರು ಸ್ಪಷ್ಟನೆ ನೀಡಿದ್ದು, ಮೊಹಮ್ಮದ್ ಶಮಿ ಅವರ ಆದಾಯ ಹಾಗೂ ಹಸೀನಾ ಜಹಾನ್ ಅವರ ಜೀವಶೈಲಿ ಎರಡನ್ನೂ ಲೆಕ್ಕಾಚಾರ ಮಾಡಿ ಈ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
2014ರ ಏಪ್ರಿಲ್‌ನಲ್ಲಿ ಕ್ರಿಕೆಟಿಗ ಭಾರತ ತಂಡದ ಖ್ಯಾತ ಬೌಲರ್ ಮೊಹಮ್ಮದ್ ಶಮಿ ಹಾಗೂ ಮಾಡೆಲ್ ಹಸೀನಾ ಜಹಾನ್ ಅವರು ಮದುವೆಯಾಗಿದ್ದರು. ಮದುವೆಯಾದ 4 ವರ್ಷಗಳ ನಂತರ ಇವರ ದಾಂಪತ್ಯದಲ್ಲಿ ವಿರಸ ಕಂಡು ಬಂದಿದ್ದು, 2018ರ ಮಾರ್ಚ್‌ನಲ್ಲಿ ಹಸೀನಾ ಅವರು ಮೊಹಮ್ಮದ್ ಶಮಿ ಹಾಗೂ ಅವರ ಕುಟುಂಬದವರ ವಿರುದ್ಧ ದೈಹಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ಮಾಡಿ ಕೇಸ್ ದಾಖಲಿಸಿದ್ದರು. ಮೊಹಮ್ಮದ್ ಶಮಿ ವಿರುದ್ಧ ಹಸೀನಾ ಕೌಟುಂಬಿಕ ಹಿಂಸೆ, ಮೋಸ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿದ್ದರು. ಜೊತೆಗ ಶಮಿ ಇತರ ಮಹಿಳೆಯ ಜೊತೆ ಆತ್ಮೀಯವಾಗಿದ್ದಾರೆ ಎಂಬ ಆರೋಪ ಮಾಡಿದ್ದರು.
ಈ ವಿಚ್ಚೇದನ ಪರಿಹಾರ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ತೀರ್ಪಿನಂತೆ ಮೊಹಮ್ಮದ್ ಶಮಿ ತಮ್ಮ ವಿಚ್ಚೇದಿತ ಪತ್ನಿ ಹಾಗೂ ಪುತ್ರಿಗಾಗಿ ಪ್ರತಿ ತಿಂಗಳು 4 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚ ನೀಡಬೇಕಾಗಿದೆ.
Scroll to load tweet…