6 ಜನರೊಂದಿಗೆ ಡೇಟಿಂಗ್: ಯುವತಿಗೆ ಬಿಸಿ ಮುಟ್ಟಿಸಿದ ಪ್ರಿಯಕರರು ವಿಡಿಯೋ ವೈರಲ್ | Big Shock For A Young Woman Who Was Dating 6 People Video Viral Mrq

6 ಜನರೊಂದಿಗೆ ಡೇಟಿಂಗ್: ಯುವತಿಗೆ ಬಿಸಿ ಮುಟ್ಟಿಸಿದ ಪ್ರಿಯಕರರು ವಿಡಿಯೋ ವೈರಲ್ | Big Shock For A Young Woman Who Was Dating 6 People Video Viral Mrq



ಹೋಟೆಲ್‌ನಲ್ಲಿ ಪ್ರಿಯಕರನೊಂದಿಗೆ ಅಪ್ಪಿಕೊಂಡು ಕಾಲ ಕಳೆಯುತ್ತಿದ್ದ ಯುವತಿಗೆ ಆಕೆಯ ಉಳಿದ ಐವರು ಪ್ರಿಯಕರರು ಸೇರಿ ಶಾಕ್ ನೀಡಿದ್ದಾರೆ. 

ಏಕಕಾಲದಲ್ಲಿ 6 ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಯುವತಿಗೆ ಚಳಿ ಬಿಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂದಿನ ಯುವ ಸಮುದಾಯದಲ್ಲಿ ಡೇಟಿಂಗ್ ಅನ್ನೋದು ಸಾಮನ್ಯದ ಸಂಗತಿಯಾಗಿದೆ. ಕೆಲವರು ಇಂತಹ ರಿಲೇಶನ್‌ಶಿಪ್‌ಗಳನ್ನು ಸಹಜವಾಗಿ ಸ್ವೀಕರಿಸಿದ್ರೆ, ಮತ್ತೊಂದಿಷ್ಟು ಮಂದಿ ತುಂಬಾನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದರು. ಹುಡುಗರು ಹಲವು ಹುಡುಗಿಯರ ಜೊತೆ ರಿಲೇಶನ್‌ಶಿಪ್ ಹೊಂದಿರುತ್ತಾರೆ ಎಂಬ ಅಪವಾದವಿತ್ತು. ಇದೀಗ ಹುಡುಗಿಯೊಬ್ಬಳು ಆರು ಯುವಕರೊಂದಿಗೆ ಡೇಟಿಂಗ್ ಮಾಡಿ ತಗ್ಲಾಕೊಂಡಿದ್ದಾಳೆ. ತಮ್ಮನ್ನು ಮೋಸ ಮಾಡಿದ ಯುವತಿಗೆ ಆಕೆಯ ಪ್ರಿಯಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಬಾಂಗ್ಲಾದೇಶದ್ದು ಎಂದು ಹೇಳಲಾಗಿದೆ. ಯುವತಿಯೊಬ್ಬಳು ಹೋಟೆಲ್‌ನಲ್ಲಿ ಯುವಕನ ಜೊತೆ ಕಾಲ ಕಳೆಯುತ್ತಿರುತ್ತಾಳೆ. ಈ ವೇಳೆ ಅಲ್ಲಿಗೆ ಯುವತಿಯ ಉಳಿದ ಐವರು ಪ್ರಿಯಕರು ಆಗಮಿಸುತ್ತಾರೆ. ತನ್ನ ಎಲ್ಲಾ ಪ್ರಿಯಕರನ್ನು ನೋಡಿ ಯುವತಿ ಶಾಕ್ ಆಗುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಯುವಕ ಮತ್ತು ಯುವತಿ ಹೋಟೆಲ್‌ನಲ್ಲಿ ಅಪ್ಪಿಕೊಂಡು ಮುದ್ದಾಡುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಒಬ್ಬರಾದ ಒಬ್ಬರಂತೆ ಐವರು ಯುವಕರು ಅಲ್ಲಿಗೆ ಬರುತ್ತಾರೆ. ಐವರು ಜೋಡಿಯನ್ನು ಸುತ್ತುವರಿಯುತ್ತಾರೆ. ಎಲ್ಲರನ್ನೂ ನೋಡುತ್ತಿದ್ದಂತೆ ಯುವತಿ ಜೊತೆಯಲ್ಲಿದ್ದ ಯುವಕ ಅಲ್ಲಿಂದ ಹೊರಡುತ್ತಾನೆ. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ತನ್ನೆಲ್ಲಾ ಗೆಳೆಯರನ್ನು ನೋಡಿ ಶಾಕ್ ಆದ ಯುವತಿ ಕಣ್ಣೀರು ಹಾಕುತ್ತಾಳೆ.

ಈ ವಿಡಿಯೋವನ್ನು ಆಕಾಂಕ್ಷ ಹೆಸರಿನ ಥ್ರೆಡ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಬಾಂಗ್ಲಾದೇಶದ ಯುವತಿ ಮೇಲೆ ಏಕಕಾಲದಲ್ಲಿ ಆರು ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವಿಷಯ ಆರು ಜನರಲ್ಲಿ ಒಬ್ಬನಿಗೆ ಗೊತ್ತಾಗಿದೆ. ಆತ ಎಲ್ಲರನ್ನು ಡಾಕಾದ ರೆಸ್ಟೋರೆಂಟ್‌ಗೆ ಆಹ್ವಾನಿಸಿ ಯುವತಿಗೆ ಶಾಕ್ ನೀಡಿದ್ದಾರೆ. ಒಂದೇ ಸ್ಥಳದಲ್ಲಿ ಎಲ್ಲರನ್ನು ನೋಡಿ ಏನನ್ನು ಹೇಳದೇ ದಿಗ್ಭ್ರಮೆಗೊಂಡು ಕಣ್ಣೀರು ಹಾಕಿದ್ದಾಳೆ ಎಂದು ಬರೆಯಲಾಗಿದೆ.

ಕಣ್ಣೀರು ಯಾಕೆ?

ಈ ವಿಡಿಯೋಗೆ ಥ್ರೆಡ್‌ನಲ್ಲಿ 1 ಸಾವಿರಕ್ಕೂ ಅಧಿಕ ಬಾರಿ ಶೇರ್ ಜೊತೆ 6 ನೂರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರು, ಆಕೆ ಅಳುತ್ತಿರೋದ್ಯಾಕೆ? ಇದುವೇ ಡೇಟಿಂಗ್. ಒಬ್ಬರ ಜೊತೆಯಲ್ಲಿ ಬರೋದನ್ನು ಡೇಟಿಂಗ್ ಅಂತ ಕರೆಯಲ್ಲ. ಸದ್ಯ ಇದುವೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿದೆ, ವಿಡಿಯೋ ಮಾಡಿದ ಕ್ಯಾಮೆರಾ ಕ್ವಾಲಿಟಿ ಸರಿಯಾಗಿಲ್ಲ ಎಂದಿದ್ದಾರೆ.

 

 



Source link

Leave a Reply

Your email address will not be published. Required fields are marked *