ರಾಜ್ಯದ ಮಹಿಳಾ ಮುಖ್ಯ ಕಾರ್ಯದರ್ಶಿ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ರವಿಕುಮಾರ್, ಸಭಾಪತಿಗೆ ದೂರು | Bjp Mlc N Ravi Kumar Remarks Against Chief Secretary Shalini Rajneesh Gow

ರಾಜ್ಯದ ಮಹಿಳಾ ಮುಖ್ಯ ಕಾರ್ಯದರ್ಶಿ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ರವಿಕುಮಾರ್, ಸಭಾಪತಿಗೆ ದೂರು | Bjp Mlc N Ravi Kumar Remarks Against Chief Secretary Shalini Rajneesh Gow



ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರು ಅಸಂಸದೀಯ ಪದ ಬಳಸಿದ್ದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರವಿಕುಮಾರ್ ಅವರನ್ನು ಅಮಾನತು ಮಾಡುವಂತೆ ಮತ್ತು ವಿಧಾನ ಪರಿಷತ್ ಸದಸ್ಯತ್ವ ರದ್ದುಪಡಿಸುವಂತೆ ಕಾಂಗ್ರೆಸ್‌ನಿಂದ ದೂರು ದಾಖಲಾಗಿದೆ.  

ಕರ್ನಾಟಕ ಬಿಜೆಪಿ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ (Ravikumar) ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿರುವುದರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಸಂಬಂಧ ವಿಧಾನ ಪರಿಷತ್ ಸಭಾಪತಿಗೆ ಕಾಂಗ್ರೆಸ್ ದೂರು ಸಲ್ಲಿಸಿದೆ. ಎನ್. ರವಿಕುಮಾರ್ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಆಗ್ರಹಿಸಿದೆ. ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಸಭಾಪತಿಗೆ ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು ಎಂದು ಇಂಡಿಯಾ ಟುಡೆ ಸೇರಿ ರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿ ಮಾಡಿದೆ. ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸುತ್ತಿರುವ ವೇಳೆ ವಿಧಾನಸೌಧ ಭದ್ರತೆಯ ಉಪ ಪೊಲೀಸ್​ ಆಯುಕ್ತ ಎಂ ಎನ್​ ಕರಿಬಸವನಗೌಡ ಅವರೊಂದಿಗೆ ಚರ್ಚೆ ನಡೆಸುತ್ತಿರುವಾಗ ರವಿಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಎಮ್‌ಎಲ್‌ಸಿ ಬಲ್ಕೀಶ್ ಬಾನು ಅವರ ಹೇಳಿಕೆ

“ಸಿಎಂ ವಿರುದ್ಧ ಬಿಜೆಪಿ ಎಮ್‌ಎಲ್‌ಸಿ ಎನ್. ರವಿಕುಮಾರ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡನೀಯವಾಗಿದೆ. ಹೆಣ್ಣುಮಕ್ಕಳ ಬಗ್ಗೆ ಅವರ ಭಾಷ್ಯ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಮತ್ತೆ ಮತ್ತೆ ಬಿಜೆಪಿಯವರಿಂದಲೇ ಇಂತಹ ಸಂದರ್ಭಗಳು ನಡೆಯುತ್ತಿವೆ ಎಂಬುದನ್ನು ಅವರು ಸಾಬೀತುಪಡಿಸುತ್ತಿದ್ದಾರೆ.

ರವಿಕುಮಾರ್ ಅವರನ್ನು ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಬೇಕು. ಸಿಎಸ್ ಶಾಲಿನಿ ರಜನೀಶ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಂತಹ ಯಶಸ್ವಿ ಮಹಿಳಾ ಅಧಿಕಾರಿಯ ಕುರಿತು ಆಕ್ಷೇಪಾರ್ಹವಾಗಿ ಮಾತನಾಡುವುದು ಖಂಡನೀಯ. ಕಲಬುರಗಿ ಡಿಸಿ ವಿರುದ್ಧವೂ ಇಂತಹದೇ ರೀತಿಯಲ್ಲಿ ಅವರು ಮಾತನಾಡಿದ್ದರು.

ಅವರು ಮಾನಸಿಕ ಅಸ್ವಸ್ಥರೆಂಬ ಅನುಮಾನವೂ ಇದೆ. ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕು. ಡಿಸಿ ಬಗ್ಗೆ ಮಾತನಾಡಿ, ನಂತರ ಮಾತು ಅಲ್ಲಿಯೇ ಮುಗಿದಂತೆ ಹೇಳುತ್ತಾರೆ. ಅವರ ಪಕ್ಷದವರು ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಸಿಎಂ ಅವರು ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು.”

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೇಳಿಕೆ

“ಸಿಎಂ ವಿರುದ್ಧ ಬಿಜೆಪಿ ಎಮ್‌ಎಲ್‌ಸಿ ಎನ್. ರವಿಕುಮಾರ್ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಅವರ ಮನಸ್ಥಿತಿಯ ಮಟ್ಟವನ್ನು ತೋರಿಸುತ್ತಿದೆ. ಅವರ ಮಾತಿಗಾಗಿ ಸಂಪೂರ್ಣ ಬಿಜೆಪಿಯನ್ನು ಒಬ್ಬೇ ಬಣ್ಣದಲ್ಲಿ ಓದಿ ಹಾಕಬಾರದು ಎನಿಸುತ್ತಿದೆ. ಆದರೆ ಅವರು ಆಡಿದ ಮಾತು ಇಡೀ ಬಿಜೆಪಿಗೆ ಕಳಂಕ ತರಿಸುತ್ತದೆ. ಬಿಜೆಪಿಯವರ ಮನಸ್ಥಿತಿ ಇದೆಯೇ ಎಂಬ ಪ್ರಶ್ನೆ ಎದ್ದಿದೆ.

ಇದು ಮೊದಲಸಾರಿಗೆ ಆಗುತ್ತಿರುವುದಲ್ಲ. ಕಲಬುರಗಿ ಡಿಸಿ ವಿರುದ್ಧವೂ ಅವರು ಇಂತಹ ಮಾತು ಹೇಳಿದರು. ಇತ್ತೀಚೆಗೆ ಇಂಡಿಯಾ-ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಕೂಡ ಉತ್ತರ ಪ್ರದೇಶದ ಸಂಸದೆಯೊಬ್ಬರು ನಮ್ಮ ಮಹಿಳಾ ಅಧಿಕಾರಿಯ ಬಗ್ಗೆ ಹೇಳಿಕೆ ನೀಡಿದ್ದರು. ಈಗ ಸಿಎಸ್ ಬಗ್ಗೆ ಮಾತಾಡುತ್ತಿದ್ದಾರೆ.

ಇಡೀ ಕರ್ನಾಟಕದ ಮಹಿಳೆಯರಿಗೆ ಶಾಲಿನಿ ರಜನೀಶ್ ರೋಲ್ ಮಾಡೆಲ್ ಆಗಿದ್ದಾರೆ. 2004ರಲ್ಲಿ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈಗ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಸಹ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಮಹಿಳೆಯಾಗಿ ಇದ್ದರೂ ಸಿಎಸ್ ಆಗಿರಲಿ, ನಾನು ಆಗಿರಲಿ ಅಥವಾ ಹಾದಿಬೀದಿಯಲ್ಲಿ ನಡೆಯುವ ಮಹಿಳೆಯಾಗಿರಲಿ ಅವರ ಬಗ್ಗೆ ಮಾತನಾಡಬೇಕಾದರೆ ಸಾವಿರ ಸಲ ಯೋಚಿಸಬೇಕು. ಇಂತಹ ಮಾತು ಮಾಡಲು ಹಕ್ಕು ಯಾರಿಗೆ ಕೊಟ್ಟಿದ್ದಾರೆ?

ರವಿಕುಮಾರ್ ಅವರು ಕಾಲಜ್ಞಾನಿ ಅಥವಾ ತತ್ತ್ವಜ್ಞಾನಿಯೇನು? ಅವರಿಗೆ ಏಕವಚನದಲ್ಲಿ ತೀರ್ಪು ನೀಡುತ್ತಿದ್ದೇನೆ. ಏಕವಚನದಲ್ಲಿ ಪದ ಬಳಸುವಾಗ ನಮಗೆ ಮಿತಿಯಿರಬೇಕು. ಚೀಫ್ ವಿಪ್ ಆಗಿ ಅವರು ಚೀಪ್ ಬಿಹೇವ್ ಮಾಡುತ್ತಿದ್ದರೆ, ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಯಾವ ಬೀದಿಯಲ್ಲಿ ಸಿಗುತ್ತಿದ್ದರೂ, ಮಹಿಳೆಯರು ಅವರನ್ನು ಹಿಡಿದು ಪ್ರಶ್ನಿಸಬೇಕು.

ಎಫ್‌ಐಆರ್ ದಾಖಲಾಗಿಲ್ಲ ಎಂಬುದರ ಬಗ್ಗೆ ದೂರು ದಾಖಲಾಗಿದೆ, ಎಫ್‌ಐಆರ್ ಕೂಡ ಖಂಡಿತವಾಗಿಯೇ ಆಗುತ್ತದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಅವರ ಗೌರವವನ್ನು ಕಾಪಾಡದೆ ಹೋದರೆ, ಬೇರೆಯವರ ಸ್ಥಿತಿ ಏನಾಗಲಿದೆ? ಎಫ್‌ಐಆರ್ ದಾಖಲಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಸುಮೊಟೋ ಪ್ರಕರಣ ದಾಖಲಿಸುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ನಾನು ಸಚಿವೆಯಾಗಿ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಮಾತನಾಡುತ್ತಿದ್ದೇನೆ. ಸಿಎಂ, ಗೃಹಸಚಿವರು ಮತ್ತು ಡಿಸಿಎಂ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *