ದರ್ಶನ್ ತಂದೆ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ರು. ಮೂರು ದಶಕಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟನಾಗಿದ್ದವರು. ಅದ್ರಲ್ಲೂ ಖಳನಟನ ಪಾತ್ರದಲ್ಲಿ ತೂಗುದೀಪ ಶ್ರೀನಿವಾಸ್ಗೆ ಸರಿಸಾಟಿಯೇ ಇಲ್ಲ. ಇದೀಗ ದರ್ಶನ್ ಮಗ ಸಿನಿಮಾ ನಟ ಆಗೋ ಹಾದಿಯಲ್ಲಿ ಇದಾರೆ ಎನ್ನಬಹುದು.
ಕನ್ನಡದ ಸ್ಟಾರ್ ನಟ ದರ್ಶನ್ (Darshan Thoogudeepa) ನಟನೆಯಲ್ಲಿ ‘ದಿ ಡೆವಿಲ್’ ಸಿನಿಮಾ ಮೂಡಿ ಬರ್ತಿರೋದು ಗೊತ್ತೇ ಇದೆ. ಅದರಲ್ಲಿ ಹಲವಾರು ಸರ್ಪ್ರೈಸ್ ಇವೆ. ಇದೀಗ ಡೆವಿಲ್ ಒಳಗಿರುವ ಮತ್ತೊಂದು ಸರ್ಪ್ರೈಸ್ ಬಗ್ಗೆ ಹೇಳ್ತಿವಿ ಕೇಳಿ. ‘ದರ್ಶನ್ ಪುತ್ರ ವಿನೀಶ್ ಕೂಡ ದಿ ಡೆವಿಲ್ ಸಿನಿಮಾದಲ್ಲಿ ನಟಿಸಿದ್ದಾನೆ. ವಿನೀಶ್ ತೂಗುದೀಪ ಈಗಾಗ್ಲೇ ಎರಡು ಸಿನಿಮಾಗಳಲ್ಲಿ ಅಪ್ಪನ ಜೊತೆಗೆ ನಟನೆ ಮಾಡಿದ್ದಾನೆ. ಇದೀಗ ದಿ ಡೆವಿಲ್ನಲ್ಲಿ ಒನ್ಸ್ ಅಗೈನ್ ವಿನೀಶ್ ಬಣ್ಣ ಹಚ್ಚಿದ್ದಾನೆ ಎನ್ನಲಾಗ್ತಿದೆ’. ಅದಕ್ಕೆ ಕ್ಲೂ ಕೂಡ ಸಿಕ್ಕಿದೆ. ಹಾಗಾದ್ರೆ ವಿನೀಶ್ ಮಾಡ್ತಿರೋ ಪಾತ್ರ ಎಂಥದ್ದು..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಮತ್ತೊಮ್ಮೆ ಬಣ್ಣ ಹಚ್ಚಿದ ದರ್ಶನ್ ಪುತ್ರ, ‘ದಿ ಡೆವಿಲ್’ನಲ್ಲಿ ವಿನೀಶ್ದೇನು ಪಾತ್ರ..?
ಯೆಸ್ ದಿ ಡೆವಿಲ್ ಅಡ್ಡಾದ ಖಾಸ್ ಖಬರ್ ಇದು. ರಿಲೀಸ್ಗೆ ಸಜ್ಜಾಗಿರೋ ದಿ ಡೆವಿಲ್ ಸಿನಿಮಾದಲ್ಲಿ ಹತ್ತಾರು ಸೀಕ್ರೆಟ್ಸ್ ಇವೆ. ಅದ್ರಲ್ಲಿ ಮತ್ತೊಂದು ವಿನೀಶ್ ದರ್ಶನ್ ವಿಚಾರ. ಹೌದು ದರ್ಶನ್ ಪುತ್ರ ವಿನೀಶ್ ದಿ ಡೆವಿಲ್ ಮೂವಿನಲ್ಲಿ ಌಕ್ಟ್ ಮಾಡಿದ್ದಾನೆ.
ಇತ್ತೀಚಿಗೆ ದಿ ಡೆವಿಲ್ ಸಿನಿಮಾದ ಉದಯಪುರ ಶೆಡ್ಯೂಲ್ನ ಮೇಕಿಂಗ್ ದೃಶ್ಯಗಳನ್ನ ಚಿತ್ರತಂಡ ರಿಲೀಸ್ ಮಾಡಿತ್ತು. ಅದ್ರಲ್ಲಿ ವಿನೀಶ್ ಕೂಡ ಇದ್ದಾನೆ. ವಿನೀಶ್ ಮೇಕಪ್ ಹಾಕಿಸಿಕೊಂಡು ಹೇರ್ ಸ್ಟೈಲ್ ಮಾಡಿಸಿಕೊಳ್ತಾ ಇರುವ ಒಂದು ಪುಟ್ಟ ಝಲಕ್ ಮೇಕಿಂಗ್ ವಿಡಿಯೋದಲ್ಲಿದೆ.
ಐರಾವತ, ಯಜಮಾನ ಚಿತ್ರದಲ್ಲಿ ನಟಿಸಿದ್ದ ವಿನೀಶ್ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ಹೌದು ವಿನೀಶ್ ಅಪ್ಪನ ಸಿನಿಮಾದಲ್ಲಿ ಬಣ್ಣ ಹಚ್ತಾ ಇರೋದು ಇದು ಮೊದಲೇನಲ್ಲ. ಈ ಹಿಂದೆ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಮಿಸ್ಟರ್ ಐರಾವತ ಮೂವಿನಲ್ಲಿ ಚೋಟಾ ಪೊಲೀಸ್ ಆಗಿ ಕಾಣಿಸಿಕೊಂಡಿದ್ದ.
2019ರಲ್ಲಿ ಬಂದ ಯಜಮಾನ ಮೂವಿನಲ್ಲೂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ. ವಿಶೇಷ ಅಂದ್ರೆ ದರ್ಶನ್ ಫ್ಯಾನ್ಸ್ ಯಜಮಾನ ರಿಲೀಸ್ ಟೈಂನಲ್ಲಿ ದರ್ಶನ್ ಜೊತೆಗೆ ವಿನೀಶ್ ಕಟೌಟ್ ಕೂಡ ನಿಲ್ಲಿಸಿದ್ರು.
ದರ್ಶನ್ ತಂದೆ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ರು. ಮೂರು ದಶಕಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟನಾಗಿದ್ದವರು. ಅದ್ರಲ್ಲೂ ಖಳನಟನ ಪಾತ್ರದಲ್ಲಿ ತೂಗುದೀಪ ಶ್ರೀನಿವಾಸ್ಗೆ ಸರಿಸಾಟಿಯೇ ಇಲ್ಲ.
ಇಂಥಾ ತೂಗುದೀಪ ಕುಟುಂಬದ ಮೂರನೇ ತಲೆಮಾರು ಕೂಡ ಬಣ್ಣದ ಲೋಕಕ್ಕೆ ಬರಲಿದೆ ಅನ್ನೋದನ್ನ ವಿನೀಶ್ ಈ ಹಿಂದೆಯೇ ಸೂಚನೆ ಕೊಟ್ಟಿದ್ದಾನೆ. ವಿನೀಶ್ ಗೂ ನಟನೆಯಲ್ಲಿ ಆಸಕ್ತಿ ಇದೆ. ಅದ್ರಲ್ಲೂ ಅಪ್ಪನಿಗಿರೋ ಫ್ಯಾನ್ ಫಾಲೊವಿಂಗ್, ಆ ಜನಪ್ರೀಯತೆಯನ್ನ ಹತ್ತಿರದಿಂದ ನೋಡಿದ್ದಾನೆ.ಅಪ್ಪನಿಗೆ ತಕ್ಕ ಮಗ ಆಗಬೇಕು ಅಂದುಕೊಂಡಿದ್ದಾನೆ.
ಮಗನ ಮೇಲೆ ದರ್ಶನ್ಗೆ ಎಲ್ಲಿಲ್ಲದ ಪ್ರೀತಿ. ತೂಗುದೀಪ ಫ್ಯಾಮಿಲಿಯ ಏಕೈಕ ಕುಡಿ..!
ಹೌದು ದರ್ಶನ್ಗೆ ಪುತ್ರ ವಿನೀಶ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಏಕಮಾತ್ರ ಪುತ್ರನಾಗಿರೋ ವಿನೀಶ್ನ ತುಂಬಾನೇ ಪ್ರೀತಿಯಿಂದ ನೋಡಿಕೊಳ್ತಾರೆ ದರ್ಶನ್. ತಾವು ಕಾಡು ಮೇಡು ಅಂತ ಸಂಚರಿಸುವ ವೇಳೆ ಮಗನನ್ನೂ ಜೊತೆಗೆ ಇಟ್ಟುಕೊಳ್ತಾರೆ. ಹಲವು ಬಾರಿ ಮಗನನ್ನ ಕರೆದುಕೊಂಡು ದಟ್ಟ ಕಾಡಿನೊಳಗೆ ಸಂಚರಿಸಿದ್ದಾರೆ. ಮಗನಿಗೆ ಪ್ರಕೃತಿಯ ಬಗ್ಗೆ ಅರಿವು ಮೂಡಿಸಿದ್ದಾರೆ.
ಇನ್ನು, ಮಗನಿಗೆ ಹಳ್ಳಿ ಜೀವನದದ ಬಗ್ಗೆಯೂ ಹೇಳಿಕೊಟ್ಟಿದ್ದಾರೆ ದರ್ಶನ್. ತಮ್ಮ ತೋಟದಲ್ಲಿ ಬಂಡಿ ಕಟ್ಟಿ ಕೆರೆಬದಿ ಊಟ ಮಾಡಿ ನಿದ್ರಿಸೋದನ್ನ ಕಲಿಸಿಕೊಟ್ಟಿದ್ದಾರೆ. ಅಪ್ಪನಿಂದ ಮಗನಿಗೆ ಪ್ರಾಣಿ ಪ್ರೀತಿ ಕೂಡ ಬಳುವಳಿಯಾಗಿ ಬಂದಿದೆ.
ಇಂಥಾ ವಿನೀಶ್, ತನ್ನ ಅಪ್ಪ ಜೈಲು ಸೇರಿದಾಗ ತತ್ತರಿಸಿ ಹೋಗಿದ್ದ. ಜೈಲಿಗೆ ಹೋಗಿ ಅಪ್ಪನನ್ನ ಕಂಡು ಕಣ್ಣೀರು ಹಾಕಿದ್ದ. ಜೈಲಿಂದ ಹೊರಬಂದ ಮೇಲೆ ದರ್ಶನ್ ಪತ್ನಿ ಜೊತೆಗೆ ಪ್ರೀತಿಯಿಂದ ಇದ್ದಾರೆ ಅಂದ್ರೆ ಅದಕ್ಕೆ ಮಗ ವಿನೀಶ್ ಮೇಲಿನ ಪ್ರೀತಿಯ ದೊಡ್ಡ ಕಾರಣ.
ದರ್ಶನ್ ಜೊತೆಗೆ ದಿ ಡೆವಿಲ್ ಶೂಟ್ಗೆ ಉದಯಪುರಕ್ಕೆ ಹೋಗಿದ್ದ ವಿನೀಶ್ ಕೈಲಿ ಒಂದು ಪುಟ್ಟ ಪಾತ್ರವನ್ನ ಮಾಡಿಸಿದ್ದಾರೆ ನಿರ್ದೇಶಕ ಮಿಲನ ಪ್ರಕಾಶ್. ಇದೊಂದು ಸಿರಿವಂತ ಫ್ಯಾಮಿಲಿಯ ಕಥೆಯಾಗಿದ್ದು ಅದ್ರಲ್ಲಿ ಒಂದು ವಿಶೇಷ ಪಾತ್ರದಲ್ಲಿ ವಿನೀಶ್ ನಟಿಸಿದ್ದಾನೆ. ದರ್ಶನ್ ಕೂಡ ಮಗನ ಜೊತೆಗೆ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ಬಹುತೇಕ ನಿಜ ಎನ್ನಲಾಗಿದ್ದು, ಒಮ್ಮೆ ಸತ್ಯ ಅಲ್ಲ ಅಂದ್ರೆ, ಆದಷ್ಟು ಬೇಗ ಈ ಸುದ್ದಿ ನಿಜವಾಗಲಿ ಎನ್ನುತ್ತಿದ್ದಾರೆ ಡಿ ಬಾಸ್ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ರಸಿಕರು.
ಒಟ್ನಲ್ಲಿ ರಿಲೀಸ್ಗೆ ಸಜ್ಜಾಗಿರೋ ದಿ ಡೆವಿಲ್ ಮೂವಿನಲ್ಲಿ ಹಲವು ಸರ್ಪ್ರೈಸ್ ಇವೆ. ಒಂದೊಂದೇ ಸರ್ಪ್ರೈಸ್ ಸದ್ಯ ಹೊರಬರ್ತಾ ಇವೆ. ಫುಲ್ ಸರ್ಪ್ರೈಸ್ ಹೊರಬರೋದೇನಿದ್ರೂ ಸೆಪ್ಟೆಂಬರ್ ಕೊನೆವಾರ.. ದಿ ಡೆವಿಲ್ ತೆರೆಗೆ ಬರುವ ವೇಳೆ..! ಕಾಯಬೇಕು, ಕಾದು ನೋಡಬೇಕು..!