ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ‘ಕೊತ್ತಲವಾಡಿ’ ಚಿತ್ರ ನಿರ್ಮಿಸಿದ್ದಾರೆ. ಯಶ್ ಸಿನಿಮಾ ನೋಡಿದ್ರೆ ಸಾಕಾಗಲ್ಲ, ಜನ ನೋಡಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಮಗನಿಗಿಂತ ದೊಡ್ಡ ನಿರ್ಮಾಪಕಿಯಾಗುವ ಗುರಿ ಹೊಂದಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ತಾಯಿ ಕೊತ್ತಲವಾಡಿ ಅನ್ನೋ ಸಿನಿಮಾ ನಿರ್ಮಾಣ ಮಾಡಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸೋ ಮೂಲಕ ತಮ್ಮ ಚಿತ್ರದ ಪ್ರಮೋಷನ್ ಶುರು ಮಾಡಿದ್ದಾರೆ ರಾಕಿ ಮದರ್. ತಮ್ಮ ಸಿನಿಮಾ ಬಗ್ಗೆ ಮಾತನಾಡೋದ್ರ ಮಗನ ಬಗ್ಗೆನೂ ಯಶ್ ತಾಯಿ ಸಾಕಷ್ಟು ಮಾತನಾಡಿದ್ದಾರೆ. ಅದ್ರಲ್ಲೂ ಯಶ್ ನೋಡಿದ್ರೆ ತಮ್ಮ ಸಿನಿಮಾ ಓಡಲ್ಲ.. ಜನ ನೋಡಬೇಕು ಅಂತ ಹೇಳ್ತಾ ಮಗನಿಗೆ ಟಾಂಗ್ ಕೊಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ನಿಂದ ಕೊತ್ತಲವಾಡಿ ಅನ್ನೋ ಸಿನಿಮಾ ನಿರ್ಮಾಣ ಮಾಡಿ ಇನ್ನೇನು ತೆರೆಗೆ ತರಲಿಕ್ಕೆ ಸಜ್ಜಾಗಿದ್ದಾರೆ. ಇವತ್ತು ಕೊತ್ತಲವಾಡಿ ಟೀಂ ಡಾ.ರಾಜ್ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ ಸಿನಿಮಾದ ಪ್ರಮೋಷನ್ಸ್ ಶುರುಮಾಡಿದೆ.
ಯಶ್ ತಾಯಿಗೆ ಸಹಜವಾಗೇ ನಿಮ್ಮ ಮಗನಿಗೆ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿದೆ. ಅದಕ್ಕೆ ಯಶ್ ತಾಯಿ ಮಾರ್ಮಿಕವಾದ ಉತ್ತರ ಕೊಟ್ಟಿದ್ದಾರೆ. ಯಶ್ ನೋಡಿದ ಮಾತ್ರ ಸಿನಿಮಾ ಓಡಲ್ಲ…ಹಣ ಬರಲ್ಲ.. ಜನ ಬಂದು ನೋಡಿದ್ರೇನೆ ಸಿನಿಮಾ ಗೆಲ್ಲೋದು ಅಂದಿದ್ದಾರೆ.
ಮಗನ ಅನಿಸಿಕೆ ಬೇಕಾಗಿಲ್ಲ. ಈ ಸಿನಿಮಾ ಮಾಡಿರೋದು ಜನಕ್ಕೆ ಅಂದಿರೋ ಪುಷ್ಪಾ ಅರುಣ್ಕುಮಾರ್. ಅವನ ದಾರಿ ಅವನಿಗೆ.. ನನ್ನ ದಾರಿ ನನಗೆ ಅಂದಿದ್ದಾರೆ. ಸದ್ಯ ಯಶ್ ಅಮೇರಿಕಕ್ಕೆ ಹೋಗಿದ್ದಾರೆ. ಅವರ ನಟನೆ ನಿರ್ಮಾಣದ ರಾಮಾಯಣದ ಬಗ್ಗೆ ನನಗೇನೂ ಕೇಳಬೇಡಿ ಅಂತಿದ್ದಾರೆ ಪುಷ್ಪ ಅರುಣ್ ಕುಮಾರ್. ಯಶ್ ರಾಮಾಯಣದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ.
ಅಸಲಿಗೆ ಯಶ್ ತಾಯಿಯ ಮಾತುಗಳನ್ನ ಕೇಳಿದ್ರೆ ಯಶ್ ಫ್ಯಾನ್ಸ್ಗೆ ಶಾಕ್ ಆಗೋದು ಖಚಿತ. ರಾಕಿಯಷ್ಟೇ ಅಲ್ಲ ರಾಕಿ ಮದರ್ ಕೂಡ ಖಂಡ ತುಂಡ. ನಮ್ಮ ಮನೇಲಿ ಸೆಂಟಿಮೆಂಟ್ ಎಲ್ಲಾ ಇಲ್ಲ ಅಂತಾರೆ ಯಶ್ ತಾಯಿ. ಅಸಲಿಗೆ ಅಮ್ಮ ಈ ವಯಸ್ಸಲ್ಲಿ ಸಿನಿಮಾ ನಿರ್ಮಾಣ ಮಾಡಿ ಅದರ ಒತ್ತಡ ಅನುಭವಿಸೋದೆಲ್ಲಾ ಯಾಕೆ ಅನ್ನೋದು ಯಶ್ ಮನಸಲ್ಲಿ ಇತ್ತಂತೆ. ಸೋ ಇದೆಲ್ಲಾ ಬೇಡ ಅಂತ ಅಮ್ಮನಿಗೆ ಹೇಳಿದ್ರಂತೆ. ಆದ್ರೆ ಯಶ್ ತಾಯಿ ಮಗನಿಗಿಂತ ಗಟ್ಟಿಗಿತ್ತಿ. ಗಟ್ಟಿಯಾಗಿ ನಿಂತು ಸಿನಿಮಾ ನಿರ್ಮಾಣ ಮಾಡೇ ಬಿಟ್ಟಿದ್ದಾರೆ. ಮಗ ನೋಡೋದು ಬೇಕಿಲ್ಲ. ಈ ಸಿನಿಮಾನ ಜನ ನೋಡಲಿ ಅಂತಿದ್ದಾರೆ.
ಹೌದು ಯಶ್ ಸುದೀಪ್, ದರ್ಶನ್, ಧ್ರುವ ಸೇರಿದಂತೆ ಸ್ಯಾಂಡಲ್ವುಡ್ ಬೇರೆ ಬೇರೆ ನಟರ ಅಭಿಮಾನಿಗಳಿಗೆ ತಮ್ಮ ಸಿನಿಮಾನ ಬಂದು ನೋಡಿ ಅಂತ ಮನವಿ ಮಾಡಿಕೊಂಡಿದ್ದಾರೆ. ಒಟ್ನಲ್ಲಿ ಯಶ್ ತಾಯಿ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಗ-ಸೊಸೆಗಿಂತ ದೊಡ್ಡದಾಗಿ ಬೆಳೆದು ತೋರಿಸ್ತಿನಿ ಅಂತಿದ್ದಾರೆ. ಯಶ್ ತಾಯಿಯ ಈ ಜೋಶ್ ನೋಡ್ತಾ ಇದ್ರೆ ಇವರನ್ನ ರಾಕಿಂಗ್ ಮದರ್ ಅನ್ನಲೇಬೇಕು.