IPL 2026 ಹರಾಜಿನ ಕುರಿತಾದ ಮಹತ್ವದ ಅಪ್‌ಡೇಟ್ ಔಟ್; ಆಟಗಾರರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್!

IPL 2026 ಹರಾಜಿನ ಕುರಿತಾದ ಮಹತ್ವದ ಅಪ್‌ಡೇಟ್ ಔಟ್; ಆಟಗಾರರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್!

IPL 2026 ಹರಾಜಿನ ಕುರಿತಾದ ಮಹತ್ವದ ಅಪ್‌ಡೇಟ್ ಔಟ್; ಆಟಗಾರರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್!

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ತಯಾರಿಗಳು ಆರಂಭವಾಗಿದ್ದು, ಮುಂಬರುವ ಐಪಿಎಲ್ ಹರಾಜಿನ ಕುರಿತಂತೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದ್ದು, ಆಟಗಾರರ ರೀಟೈನ್‌ಗೂ ಡೆಡ್ ಲೈನ್ ಫಿಕ್ಸ್ ಅಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

2026ರ ಐಪಿಎಲ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಯಾಕೆಂದರೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯು ಭರ್ಜರಿ ಮನರಂಜನೆ ನೀಡಿತ್ತು. ಅದೇ ವೇಳೆ ಆರ್‌ಸಿಬಿ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಲವು ತಂಡಗಳು ಅದ್ಭುತ ಪ್ರದರ್ಶನ ತೋರಿದರೆ, ಮತ್ತೆ ಕೆಲವು ತಂಡಗಳು ನೀರಸ ಪ್ರದರ್ಶನ ತೋರಿದ್ದವು. ಹೀಗಾಗಿ 19ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡ ಕಟ್ಟಿಕೊಂಡು ಐಪಿಎಲ್ ಕದಕ್ಕಿಳಿಯಲು ಫ್ರಾಂಚೈಸಿಗಳು ರಣತಂತ್ರ ಹೆಣೆಯುತ್ತಿವೆ.

ಹೌದು, ಇದೀಗ 2026ರ ಐಪಿಎಲ್ ಟೂರ್ನಿಯ ಕುರಿತಂತೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದ್ದು, ಐಪಿಎಲ್ ಹರಾಜಿಗೂ ಮುನ್ನ ಆಟಗಾರರ ರೀಟೈನ್‌ಗೆ ಮುಂಬರುವ ನವೆಂಬರ್ 15ರವರೆಗೆ ಕಾಲಾವಕಾಶ ನೀಡಲಾಗಿದೆ.

ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡು, ಬೇಡವಾದ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲು ಬಿಸಿಸಿಐ ಡೆಡ್‌ಲೈನ್ ನೀಡಿದೆ.

ಇನ್ನು ಬಹುನಿರೀಕ್ಷಿತ 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜು ಮುಂಬರುವ ಡಿಸೆಂಬರ್ 13ರಿಂದ 15ರೊಳಗಾಗಿ ನಡೆಯುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.

ಕಳೆದ ಬಾರಿಯ ಐಪಿಎಲ್ ಹರಾಜು ಭಾರತದಾಚೆ ಆಯೋಜನೆಗೊಂಡಿತ್ತು. ಇನ್ನು ಈ ಬಾರಿಯ ಐಪಿಎಲ್ ಹರಾಜು ಭಾರತದಲ್ಲೇ ನಡೆಯುತ್ತಾ ಅಥವಾ ಭಾರತದಾಚೆ ನಡೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಕೆಲವು ಮಾಧ್ಯಮಗಳ ವರದಿಯ ಪ್ರಕಾರ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ಡೆವೊನ್ ಕಾನ್‌ವೇ, ವೆಂಕಟೇಶ್ ಅಯ್ಯರ್, ಮಿಚೆಲ್ ಸ್ಟಾರ್ಕ್ ಸೇರಿದಂತೆ ಹಲವು ಕ್ರಿಕೆಟಿಗರು ಐಪಿಎಲ್ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Source link

Leave a Reply

Your email address will not be published. Required fields are marked *