ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ

ಹಲವು ಬ್ರ್ಯಾಂಡ್ ಸೊರಗಿದರೆ ಜೂನ್‌ನಲ್ಲಿ ಈ ಕಾರಿಗೆ ಮುಗಿಬಿದ್ದ ಜನ, ಗರಿಷ್ಠ ಮಾರಾಟ ದಾಖಲೆ

ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಜೂನ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ಕಾರು ಮಾತ್ರ ದಾಖಲೆ ಬರೆದಿದೆ. ಈ ಕಾರಿಗೆ ಜನ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಜನರು ಹೆಚ್ಚು ಖರೀದಿಸಿದ ಕಾರು ಯಾವುದು?

ಭಾರತದಲ್ಲಿ ಕಾರು ಖರೀದಿ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹೊಸ ಕಾರು, ಅಗ್ಗದ ಬೆಲೆಯ ಕಾರು, ಉತ್ತಮ ಸೇಫ್ಟಿ, ಅತ್ಯಾಕರ್ಷಕ ಕಾರು ಹೀಗೆ ಒಬ್ಬೊಬ್ಬರು ಒಂದೊಂದು ಫೀಚರ್ಸ್ ಇಷ್ಟಪಟ್ಟು ಕಾರು ಖರೀದಿಸುತ್ತಾರೆ. ಭಾರತದಲ್ಲಿ ಇದೀಗ ಸುರಕ್ಷತೆ ಹಾಗೂ ಕೈಗೆಟುಕುವ ದರದ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಕಳೆದ ಕೆಲ ತಿಂಗಳಿನಿಂದ ಕಾರು ಮಾರುಕಟ್ಟೆ ಭಾರಿ ಏರಿಳಿತವಾಗುತ್ತಿದೆ. ಜೂನ್ ತಿಂಗಳಲ್ಲಿ ಗರಿಷ್ಠ ಮಾರಾಟದ ಕಾರುಗಳು ಪಾತಾಳಕ್ಕೆ ಕುಸಿದಿದೆ. ಟಾಟಾ ಮೋಟಾರ್ಸ್, ಮಹೀಂದ್ರ, ಮಾರುತಿ ಸುಜುಕಿ ಸೇರಿದಂತೆ ಹಲವು ಬ್ರ್ಯಾಂಡ್ ತಮ್ಮ ಕಾರುಗಳ ನಿರೀಕ್ಷಿತ ಮಾರಾಟ ಕಾಣುವಲ್ಲಿ ವಿಫಲವಾಗಿದೆ.

ಜೂನ್ ತಿಂಗಳ ನೆಚ್ಚಿನ ಕಾರು

ಜೂನ್ ತಿಂಗಳಲ್ಲಿ ಭಾರತದಲ್ಲಿ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಮಾರಾಟದಲ್ಲಿ ಕುಸಿತ ಕಂಡಿದ್ದರೆ, ಈ ಕಾರು ಮಾತ್ರ ದಾಖಲೆಯ ಮಾರಾಟ ಕಂಡಿದೆ. ಅದು ಹ್ಯುಂಡೈ ಕ್ರೆಟಾ ಕಾರು. ಭಾರತದಲ್ಲಿ ಜೂನ್ ತಿಂಗಳಲ್ಲಿ ಬಹುತೇಕರು ಹ್ಯುಂಡೈ ಕ್ರೇಟಾ ಕಾರಿಗೆ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ 15,786 ಕಾರುಗಳು ಮಾರಾಟವಾಗಿದೆ. ಈ ಮೂಲಕ ಜೂನ್ ತಿಂಗಳ ಗರಿಷ್ಠ ಮಾರಾಟದ ದಾಖಲೆ ಬರೆದಿದೆ.

ಮಾರ್ಚ್, ಎಪ್ರಿಲ್ ಹಾಗೂ ಇದೀಗ ಜೂನ್ ತಿಂಗಳಲ್ಲಿ ಹ್ಯುಂಡೈ ಕ್ರೆಟಾ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2015ರಲ್ಲಿ ಕ್ರೆಟಾ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ 10ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಕ್ರೆಟಾ ಇದೀಗ ನಂಬರ್ 1 ಕಾರಾಗಿ ಹೊರಹೊಮ್ಮಿದೆ. ಜನರು ಕ್ರೆಟಾ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ಕ್ರೆಟಾ ಅತ್ಯಂತ ಪ್ರಿಮಿಯಂ ಎಸ್‌ಯುವಿಯಾಗಿ ಗುರುತಿಸಿಕೊಂಡಿದೆ. ಪ್ರಿಮಿಯಂ ಕ್ಲಾಸ್ ಡಿಸೈನ್, ಇಂಟಿರೀಯರ್, ಫೀಚರ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಹ್ಯುಂಡೈ ಕ್ರೆಟಾ ಕಾರಿನ ಆರಂಭಿಕ ಬೆಲೆ 11.11 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ ). ಟಾಪ್ ಮಾಡೆಲ್ ಬೆಲೆ 20.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್, ನ್ಯಾಚ್ಯುಲರ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹಾಗೂ ಡೀಸೆಲ್ ಎಂಜಿನ್‌ನಲ್ಲಿ ಕ್ರೆಟಾ ಕಾರು ಲಭ್ಯವಿದೆ.

ಸ್ಪೋರ್ಟ್ ಎಡಿಶನ್ ಬಯಸುವ ಗ್ರಾಹಕರಿಗ ಕ್ರೆಟಾ ಎನ್‌ಲೈನ್ ವೇರಿಯೆಂಟ್ ಲಭ್ಯವಿದೆ. ಈ ಕಾರು ಹೆಚ್ಚು ಪರ್ಫಾಮೆನ್ಸ್ ಬೇಸ್ಡ್ ಕಾರಾಗಿದೆ. ಇನ್ನು ಕ್ರೆಟಾ ಎಲೆಕ್ಟ್ರಿಕ್ ಕಾರು ಕೂಡ ಲಭ್ಯವಿದೆ. ಎರಡು ಬ್ಯಾಟರಿ ಆಯ್ಕೆಗಳ ಈ ಕಾರು 390 ಕಿಲೋಮೀಟರ್ ಹಾಗೂ 473 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.

ಜೂನ್ ತಿಂಗಳಲ್ಲಿ ಮಾರುತಿ ಸುಜುಕಿ, ಟಾಟಾ, ಮಹೀಂದ್ರ ಕಾರುಗಳು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಕಾರು ಮಾರುಕಟ್ಟೆಯಲ್ಲಿ ಬಹುತೇಕ ಕಾರುಗಳು ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಕ್ರೆಟಾ ಮಾತ್ರ ದಾಖಲೆಯೊಂದಿಗೆ ಮುನ್ನಗುತ್ತಿದೆ. ಇದೀಗ ಜುಲೈ ತಿಂಗಳಲ್ಲಿ ಯಾವ ಕಾರು ಹೆಚ್ಚು ಮಾರಾಟವಾಗಲಿದೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

Source link

Leave a Reply

Your email address will not be published. Required fields are marked *