Headlines

Hybrid Phone ಕೇವಲ 3,999 ರೂಗೆ ದೇಶದ ಮೊದಲ ಹೈಬ್ರಿಡ್ ಸ್ಮಾರ್ಟ್‌ಫೋನ್ ಲಾಂಚ್, ಏನಿದರ ವಿಶೇಷತೆ? | Hmd Launch India First Hybrid Phone Hmd Touch 4g With Just Rs 3999

Hybrid Phone ಕೇವಲ 3,999 ರೂಗೆ ದೇಶದ ಮೊದಲ ಹೈಬ್ರಿಡ್ ಸ್ಮಾರ್ಟ್‌ಫೋನ್ ಲಾಂಚ್, ಏನಿದರ ವಿಶೇಷತೆ? | Hmd Launch India First Hybrid Phone Hmd Touch 4g With Just Rs 3999



Hybrid Phone ಕೇವಲ 3,999 ರೂಗೆ ದೇಶದ ಮೊದಲ ಹೈಬ್ರಿಡ್ ಸ್ಮಾರ್ಟ್‌ಫೋನ್ ಲಾಂಚ್, ಏನಿದರ ವಿಶೇಷತೆ? | Hmd Launch India First Hybrid Phone Hmd Touch 4g With Just Rs 3999

ಕೇವಲ 3,999 ರೂಗೆ ದೇಶದ ಮೊದಲ ಹೈಬ್ರಿಡ್ ಸ್ಮಾರ್ಟ್‌ಫೋನ್ ಲಾಂಚ್, ಏನಿದರ ವಿಶೇಷತೆ? ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಟಚ್‌ಸ್ಕ್ರೀನ್, ಚಾಟ್, ವಿಡಿಯೊ ಕರೆಗಳು, ಕ್ಲೌಡ್ ಸೇರಿದಂತೆ ಎಲ್ಲಾ ಫೀಚರ್ಸ್ ಇರುವ ಹೈಬ್ರಿಡ್ ಫೋನ್ ಇದು.

ನವದೆಹಲಿ (ಅ.11) ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ, ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗೆ ಕೊರತೆ ಇಲ್ಲ. ಪ್ರತಿ ದಿನ ಹೊಸ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಹ್ಯೂಮನ್ ಮೊಬೈಲ್ ಡಿವೈಸಸ್ (ಎಚ್‌ಎಂಡಿ) ಭಾರತದ ಮೊದಲ ಹೈಬ್ರಿಡ್ ಫೋನ್ ಲಾಂಚ್ ಮಾಡಿದೆ. ಎಚ್‌ಎಂಡಿ ಟಚ್ 4ಜಿ (HMD Touch 4G) ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ‘ಹೈಬ್ರಿಡ್ ಫೋನ್’ ಆಗಿದ್ದು, ಸಾಂಪ್ರದಾಯಿಕವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿನ ವೈಶಿಷ್ಟ್ಯಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಭಾರತೀಯರಿಗೆ ಡಿಜಿಟಲ್ ಅಂತರ ಕಡಿಮೆ ಮಾಡುವ ಉದ್ದೇಶದಿಂದಲೇ ಇದನ್ನು ವಿನ್ಯಾಸಗೊಳಿಸಲಾಗಿದೆ.

ಏನಿದರ ವಿಶೇಷತೆ?

ಎಚ್‌ಎಂಡಿ ಟಚ್ 4ಜಿ ಮೊಬೈಲ್‌ ಅನ್ನು ಹೊಸ ಪೀಳಿಗೆಯ ಡಿಜಿಟಲ್ ಬಳಕೆದಾರರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಯುವ ಜನರು, ವಿದ್ಯಾರ್ಥಿಗಳು ಮತ್ತು ನಿರ್ಮಾಣ, ತಯಾರಿಕೆ ಮತ್ತಿತರ ವಲಯಗಳಲ್ಲಿ ದುಡಿಯುವ ವರ್ಗ ಸೇರಿದಂತೆ – ಫೀಚರ್ ಫೋನ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನುಭವದ ಪ್ರಯೋಜನಗಳನ್ನು ಬಯಸುವವರ ಬಳಕೆಗೆಂದೇ ಇದನ್ನು ತಯಾರಿಸಲಾಗಿದೆ. ಇದು 3.2-ಇಂಚಿನ ಟಚ್ ಡಿಸ್‌ಪ್ಲೇ, ಕ್ಲೌಡ್-ಆಧಾರಿತ ಅಪ್ಲಿಕೇಷನ್‌ಗಳು (ಆ್ಯಪ್), ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಪ್ರತ್ಯೇಕ ಬಟನ್‌ ಮತ್ತು ನೈಜ-ಸಮಯದ ಚಾಟಿಂಗ್ ಮತ್ತು ವಿಡಿಯೊ ಕರೆ ಮಾಡುವಂತಹ ಈ ವಿಭಾಗದಲ್ಲಿ ಮೊದಲ ಬಾರಿಗೆ ಪರಿಚಯಿಸಿರುವ ಸೌಲಭ್ಯಗಳೊಂದಿಗೆ ನಯವಾದ ವಿನ್ಯಾಸವನ್ನೂ ಹೊಂದಿರುವುದು ಇದರ ವಿಶೇಷತೆಯಾಗಿದೆ.

ಸ್ಮಾರ್ಟ್‌ಫೋನ್ ಅನುಭವ, ಫೀಚರ್ ಫೋನ್ ಮೌಲ್ಯ:

ಸದೃಢವಾದ ಎಸ್‌30+ ಟಚ್ ಪ್ಲಾಟ್‌ಫಾರ್ಮ್‌ನಿಂದ ನಿರ್ವಹಿಸಲ್ಪಡುವ ಮೃದುವಾದ, ಸುಲಭ ಬಳಕೆಯ ಟಚ್‌ಸ್ಕ್ರೀನ್ ಇಂಟರ್‌ಫೇಸ್, ಕೈಗೆಟುಕುವ ಬೆಲೆಯಲ್ಲಿ ಚಿರಪರಿಚಿತ ಸ್ಮಾರ್ಟ್‌ಫೋನ್ ಬಳಕೆಯ ಅನುಭವ ನೀಡಲಿದೆ.

ಕ್ಲೌಡ್ ಅಪ್ಲಿಕೇಷನ್‌ಗಳು:

ಕ್ರಿಕೆಟ್ ಸ್ಕೋರ್‌, ತಾಜಾ ಸುದ್ದಿ, ಹವಾಮಾನ ವರದಿ ಮತ್ತು ಟೆಟ್ರಿಸ್ ಮತ್ತು ಸುಡೋಕು ನಂತಹ ಎಚ್‌ಟಿಎಂಎಲ್‌5 ಗೇಮ್‌ಗಳನ್ನು (ಈ ಮೊಬೈಲ್‌ಗೆ ನೇರವಾಗಿ ಸ್ಟ್ರೀಮ್‌ ಮಾಡಲಾಗುವುದು) ಒಳಗೊಂಡಂತೆ ವಿಡಿಯೊ, ಸಾಮಾಜಿಕ ತಾಣಗಳು ಮತ್ತು ಉಪಯುಕ್ತ ಅಪ್ಲಿಕೇಷನ್‌ಗಳ ಸುಲಭ ಬಳಕೆಯಿಂದ ನಿರಂತರವಾಗಿ ಸಂಪರ್ಕದಲ್ಲಿರಿ ಮತ್ತು ಭರಪೂರ ಮನರಂಜನೆ ಪಡೆಯಿರಿ

ವಿಡಿಯೊ ಕರೆ ಮತ್ತು ಸಂಪರ್ಕ:

ಎಕ್ಸ್‌ಪ್ರೆಸ್ ಚಾಟ್ ಅಪ್ಲಿಕೇಷನ್ ಮೂಲಕ, ಬಳಕೆದಾರರು ಯಾವುದೇ ಆಂಡ್ರಾಯ್ಡ್ ಅಥವಾ ಐಒಎಸ್‌ ಸ್ಮಾರ್ಟ್‌ಫೋನ್‌ನಲ್ಲಿ 13 ಭಾಷೆಗಳಲ್ಲಿ ವಿಡಿಯೊ ಕರೆಗಳನ್ನು ಮಾಡಬಹುದು,. ಧ್ವನಿ ಸಂದೇಶಗಳನ್ನು ಕಳುಹಿಸಬಹುದು ಮತ್ತು ಗುಂಪು ಸಂವಾದಗಳಲ್ಲಿ ಭಾಗವಹಿಸಬಹುದು. ಡೇಟಾ ಹಂಚಿಕೆಗಾಗಿ ಸಾಧನವು ವೈ-ಫೈ ಮತ್ತು ವೈ-ಫೈ ಹಾಟ್‌ಸ್ಪಾಟ್ ಸೌಲಭ್ಯದಡಿ ಕಾರ್ಯನಿರ್ವಹಿಸಲಿದೆ.

ಎರಡು ಕ್ಯಾಮೆರಾಗಳು ಮತ್ತು ಪ್ರತ್ಯೇಕ ಎಸ್‌ಒಎಸ್‌ ಕೀ:

2ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು ವಿಜಿಎ ಮುಂಭಾಗದ ಕ್ಯಾಮೆರಾ-ಗಳು ಬಳಕೆದಾರರಿಗೆ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರತ್ಯೇಕ ಐಸಿಇ (ತುರ್ತು ಸಂದರ್ಭದಲ್ಲಿ) ಕೀ (ಆಕಸ್ಮಿಕವಾಗಿ ಒತ್ತುವುದನ್ನು ತಪ್ಪಿಸಲು ಮೂರು ಸಣ್ಣ ಕ್ಲಿಕ್‌ಗಳು ಅಥವಾ ದೀರ್ಘ ಒತ್ತುವ ಮೂಲಕ ಬಳಸಬಹುದು) – ತುರ್ತು ಕರೆಗಳು ಮತ್ತು ಎಕ್ಸ್‌ಪ್ರೆಸ್ ಚಾಟ್‌ಗೆ ತ್ವರಿತ ಪ್ರವೇಶ ಒದಗಿಸುತ್ತದೆ.

ಹೆಚ್ಚುವರಿ ಸೌಲಭ್ಯಗಳು:

ಒಂದು ವರ್ಷದಲ್ಲಿ ಬದಲಿಸುವ ಗ್ಯಾರಂಟಿ, ಬ್ಲೂಟೂತ್, ಇನ್-ಬಾಕ್ಸ್ ವೇಗದ ಚಾರ್ಜರ್‌ನೊಂದಿಗೆ 2000 ಎಂಎಎಚ್ ಬ್ಯಾಟರಿ, ರಕ್ಷಣಾತ್ಮಕ ಜೆಲ್ಲಿ ಕವರ್, ವೈರ್‌ಲೆಸ್ ಮತ್ತು ವಯರ್ಡ್‌ ಎಫ್‌ಎಂ, ಎಂಪಿ3 ಪ್ಲೇಯರ್, ಟೈಪ್-ಸಿ ಚಾರ್ಜಿಂಗ್, ಫೋಲ್ಡರ್ ನಿರ್ವಹಣೆಯೊಂದಿಗೆ ಸ್ವಯಂ ಕರೆ ರೆಕಾರ್ಡಿಂಗ್ ಮತ್ತು ಪರಿಪೂರ್ಣ ಟಚ್ ಯುಐ.

 



Source link

Leave a Reply

Your email address will not be published. Required fields are marked *