ಮೆಗ್ನೀಷಿಯಂ ಕೊರತೆಯಿಂದ ಆಯಾಸ, ಸ್ನಾಯು ಸೆಳೆತ, ಕಿರಿಕಿರಿ, ಅನಿಯಮಿತ ಹೃದಯ ಬಡಿತ, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಶಕ್ತಿ ಉತ್ಪಾದನೆ, ಸ್ನಾಯು ಮತ್ತು ನರಗಳ ಕಾರ್ಯನಿರ್ವಹಣೆ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಮೂಳೆಗಳ ಆರೋಗ್ಯಕ್ಕೆ ಮೆಗ್ನೀಷಿಯಂ ಅತ್ಯಗತ್ಯ ಖನಿಜ. ಮೆಗ್ನೀಷಿಯಂ ಕೊರತೆಯಿಂದ ಆಯಾಸ, ಸ್ನಾಯು ಸೆಳೆತ, ಕಿರಿಕಿರಿ, ಅನಿಯಮಿತ ಹೃದಯ ಬಡಿತ, ಮಾನಸಿಕ ಸ್ಥಿತಿಯಲ್ಲಿ ಏರುಪೇರುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮೆಗ್ನೀಷಿಯಂ ಕೊರತೆ ನಿವಾರಿಸಲು ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳನ್ನು ತಿಳಿಯೋಣ.
1. ಪಾಲಕ್ ಸೊಪ್ಪು
ಮೆಗ್ನೀಷಿಯಂ ಯಥೇಚ್ಛವಾಗಿರುವ ಪಾಲಕ್ ಸೊಪ್ಪು ಕಬ್ಬಿಣ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದೆ.
2. ಬಾದಾಮಿ
ಬಾದಾಮಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಮೆಗ್ನೀಷಿಯಂ ಕೊರತೆ ನಿವಾರಣೆಯಾಗುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ವಿಟಮಿನ್ ಇ ಸಹ ಇದೆ.
3. ಕುಂಬಳಕಾಯಿ ಬೀಜ
ಮೆಗ್ನೀಷಿಯಂ ಭರಿತ ಕುಂಬಳಕಾಯಿ ಬೀಜದಲ್ಲಿ ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
4. ಆವಕಾಡೊ
ಆವಕಾಡೊ ಸೇವನೆಯಿಂದ ಮೆಗ್ನೀಷಿಯಂ ಕೊರತೆ ನಿವಾರಣೆಯಾಗುತ್ತದೆ. ಇದರಲ್ಲಿ ನಾರಿನಂಶ, ಪೊಟ್ಯಾಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ.
5. ಬಾಳೆಹಣ್ಣು
ಬಾಳೆಹಣ್ಣು ತಿನ್ನುವುದರಿಂದ ಮೆಗ್ನೀಷಿಯಂ ಪೂರೈಕೆಯಾಗುತ್ತದೆ.
6. ಡಾರ್ಕ್ ಚಾಕೊಲೇಟ್
ಮೆಗ್ನೀಷಿಯಂ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ಡಾರ್ಕ್ ಚಾಕೊಲೇಟ್ ಅನ್ನು ಸಹ ಆಹಾರದಲ್ಲಿ ಸೇರಿಸಬಹುದು.
ಗಮನಿಸಿ: ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರವೇ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.