![]()
ಪೋಷಕಾಂಶಗಳ ಲಭ್ಯತೆ: ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದಾಗ ಅದರಲ್ಲಿರುವ ಕಾರ್ಬೋಹೈಡ್ರೇಟ್ಸ್, ಬಿ ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಇದು ಶಕ್ತಿಯ ಉತ್ತಮ ಮೂಲವಾಗಿದೆ.
ನಿರೋಧಕ ಪಿಷ್ಟ: ಉಳಿದ ಅನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಒಂದೆರೆಡಲ್ಲ, ಅನೇಕ ಪ್ರಯೋಜನಗಳಿವೆ. ಆಗಷ್ಟೇ ಬೇಯಿಸಿದ ಅನ್ನವನ್ನು ತಣ್ಣಗಾಗಲು ಬಿಟ್ಟಾಗ, ಅದು “ನಿರೋಧಕ ಪಿಷ್ಟ” ಎಂಬ ವಿಶೇಷ ರೀತಿಯ ಪಿಷ್ಟವನ್ನು ರೂಪಿಸುತ್ತದೆ. ಈ ಪಿಷ್ಟವು ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಆದರೆ ಕರುಳಿನಲ್ಲಿ ನಾರಿನಂತೆ ಕಾರ್ಯನಿರ್ವಹಿಸುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.