ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜಿಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೆಲ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದೆ. ಆರ್‌ಸಿಬಿ ರಿಲೀಸ್ ಮಾಡಬಹುದಾದ ಆಟಗಾರರು ಯಾರು? ಯಾರನ್ನು ಆರ್‌ಸಿಬಿ ಫ್ರಾಂಚೈಸಿಯು ರೀಟೈನ್ ಮಾಡಿಕೊಳ್ಳಲಿದೆ ನೋಡೋಣ ಬನ್ನಿ.

17 ವರ್ಷಗಳ ಕನಸನ್ನು 2025ರಲ್ಲಿ ನನಸಾಗಿಸಿಕೊಂಡ ಆರ್‌ಸಿಬಿ, ಮುಂದಿನ ಸೀಸನ್‌ಗೆ ಬದಲಾವಣೆ ಮಾಡಲು ನೋಡುತ್ತಿದೆ. ಹಲವು ಆಟಗಾರರನ್ನು ಕೈಬಿಡಲು ಸಿದ್ಧವಾಗಿದ್ದು, ಡಿಸೆಂಬರ್ ಹರಾಜಿನಲ್ಲಿ ಯಾರು ಹೊರಗುಳಿಯುತ್ತಾರೆ ಎನ್ನುವ ಕುತೂಹಲ ಜೋರಾಗಿದೆ.

ಕೊಹ್ಲಿ ನಿವೃತ್ತಿ ವದಂತಿಗಳ ನಡುವೆಯೂ ಅವರು ತಂಡದಲ್ಲಿ ಮುಂದುವರೆಯುವುದು ಖಚಿತ. ಅನುಭವಿ ಮತ್ತು ಯುವ ಆಟಗಾರರನ್ನು ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧರಿಸಿದೆ. ನಾಯಕ ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ ಪಟ್ಟಿ ರೀಟೈನ್ ಆಗುವುದು ಕನ್ಫರ್ಮ್.

ಇವರಷ್ಟೇ ಅಲ್ಲದೇ ಸ್ವಸ್ತಿಕ್ ಚಿಕಾರಾ, ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಮಯಾಂಕ್ ಅಗರ್‌ವಾಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.

ಕಳಪೆ ಪ್ರದರ್ಶನ ನೀಡಿದ ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ಲೆಸಿಂಗ್ ಮುಜರಬಾನಿ, ರಸಿಖ್ ದಾರ್, ನುವಾನ್ ತುಷಾರ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಬರೋಬ್ಬರಿ 8.75 ಕೋಟಿಗೆ ಖರೀದಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ 10 ಪಂದ್ಯಗಳಲ್ಲಿ 112 ರನ್ ಗಳಿಸಲಷ್ಟೇ ಶಕ್ತರಾದರು. 6 ಕೋಟಿ ರೂ.ಗೆ ಖರೀದಿಸಿದ ರಸಿಖ್ ದಾರ್ ಬೌಲಿಂಗ್‌ನಲ್ಲಿ ವಿಫಲರಾದರು.

ಸುಮಾರು 15-18 ಕೋಟಿ ರೂ. ಪರ್ಸ್‌ನೊಂದಿಗೆ ಆರ್‌ಸಿಬಿ ಹರಾಜಿಗೆ ಇಳಿಯಲಿದೆ. ಹಾಲಿ ಚಾಂಪಿಯನ್ ತಂಡವು ಹರಾಜಿನಲ್ಲಿ ತಮ್ಮ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಯಾರನ್ನು ಖರೀದಿಸುತ್ತಾರೆ ಕಾದು ನೋಡಬೇಕು.

Source link
ಐಪಿಎಲ್ ಮಿನಿ ಹರಾಜಿಗೂ ಮುನ್ನ ಈ ಸ್ಟಾರ್ ಆಟಗಾರರಿಗೆ ಆರ್‌ಸಿಬಿ ಗೇಟ್‌ಪಾಸ್? ಪಟ್ಟಿಯಲ್ಲಿವೆ ಅಚ್ಚರಿ ಹೆಸರು