ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ! | Climate Change Alert Himalayan Glaciers Melting At Alarming Rate

ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ! | Climate Change Alert Himalayan Glaciers Melting At Alarming Rate


ನಿಜಕ್ಕೂ ದೇಶಕ್ಕೆ ಹಿಮಗಂಡಾಂತರವೇ ಎದುರಾಗಿದೆ.. ಮುಂಗಾರು ಇನ್ನೂ ದೇಶದೊಳಗೆ ಬಲಗಾಲನ್ನ ಕಂಪ್ಲೀಟ್ ಆಗಿ ಇಟ್ಟೂ ಇಲ್ಲ, ಅಷ್ಟ್ರಲ್ಲೇ ಸಾಲು ಸಾಲು ದುರಂತಗಳು ಎದುರಾಗ್ತಾ ಇದಾವೆ.. ಕಂಟಕಗಳು ಕಾಡ್ತಾ ಇದಾವೆ.. ಅಂದ ಹಾಗೆ ಇದೆಲ್ಲಾ ನಡೀತಿರೋದು ಈ ಮುಂಗಾರಿನ ಆರ್ಭಟಕ್ಕೆ ಅಷ್ಟೇನಾ? ಇಲ್ಲ.. ಅದನ್ನೂ ಮೀರಿದ ಗಂಡಾಂತರ ಎದುರಾಗೋ ಸಾಧ್ಯತೆ ಇದೆ.. ಇದರ ಬಗ್ಗೆ ನಾವಲ್ಲ ವಿಜ್ಞಾನಿಗಳು ಮಾತಾಡ್ತಾ ಇದಾರೆ.. ಅದೇನು ಅನ್ನೋದರ ಇನ್ ಡೆಪ್ತ್ ಡೀಟೇಲ್ಸ್, ಇಲ್ಲಿದೆ ನೋಡಿ..

ವೀಕ್ಷಕರೇ, ಈ ಪ್ರವಾಹದ ಕತೆ ಹೇಳೋಕೆ ಹೊರಟರೆ ಅದೇನು ಸದ್ಯಕ್ಕೆ ಮುಗಿಯುವಂಥದ್ದಲ್ಲ.. ಯಾಕಂದ್ರೆ ಪರಿಸ್ಥಿತಿ ನಾವೀಗ ನೋಡಿದ್ದಕ್ಕಿಂತಾ ಅತ್ಯಂತ ದಾರುಣವಾಗಿದ್ದಾವೆ.. ಅದರ ಬಗ್ಗೆ ಮತ್ತೆ ಮಾತಾಡಣ.. ಆದ್ರೆ ನಾವೀಗ ಅದಕ್ಕಿಂತಲೂ ಮುಖ್ಯವಾದ, ಭಯಾನಕವಾದ, ಭವಿಷ್ಯವನ್ನ ನೆನಪಿಸಿಕೊಂಡರೂ ಭಯ ಹುಟ್ಟಿಸಬಲ್ಲ ಸಂಗತಿ ಬಗ್ಗೆ ಮಾತಾಡ್ಬೇಕು.. ಅಂದ ಹಾಗೆ, ಅಂಥದ್ದೊಂದು ಭಯ ಹುಟ್ಟಿಸಿರೋ ಸಂಗತಿ ಯಾವುದು ಗೊತ್ತಾ? ಹಿಮಾಲಯ..

ಈ ವರದಿಗಳ ಬಗ್ಗೆ ಕೇಳ್ತಾ ಇದ್ರೆ, ನಿಜಕ್ಕೂ ಆಶ್ಚರ್ಯವೂ ಆಗುತ್ತೆ.. ಅದರ ಜೊತೆಗೆ ಆಘಾತವೂ ಆಗುತ್ತೆ.. ಹಿಮಾಲಯದಂಥಾ ಹಿಮಾಲಯ ಕರಗೋದೂ ಅಂದ್ರೇನು? ಅದರಿಂದ ಪ್ರವಾಹ ಉಂಟಾಗೋದು ಅಂದ್ರೇನು? ಅದು ಬಿಡಿ, ಹಿಮಾಲಯದ ನೀರೆಲ್ಲಾ ಮಾಯವಾಗಿ ನೀರಿಗೆ ಬರ ಬರೋದು ಅಂದ್ರೇನು? ಇದನ್ನೆಲ್ಲಾ ಕೇಳ್ತಾ ಇದ್ರೆನೇ ಅನುಮಾನ ಹೆಚ್ಚಾಗುತ್ತೆ ಅಲ್ವಾ? ಅಸಲಿಗೆ ವಿಜ್ಞಾನಿಗಳು ಅದ್ಯಾವ ಆಧಾರದ ಮೇಲೆ ಹಿಮಾಲಯದ ಬಗ್ಗೆ ಇಂಥದ್ದೊಂದು ಭವಿಷ್ಯ ಹೇಳಿದ್ದಾರೆ?

ಹಿಮಾಲಯ ಈಗ ಬರೀ ಹಿಮಚ್ಛಾದಿತ ಶಿಖರ ಮಾತ್ರವೇ ಅಲ್ಲ.. ಅದೀಗ ಪ್ರಳಯಕಾರಿ ಪರ್ವತ.. ಇಡೀ ಉತ್ತರ  ಭಾರತಕ್ಕೇ ಅಲ್ಲಿಂದ ಬೃಹತ್ ಕಂಟಕ ಕಾದಿದೆ ಅನ್ನೋ ಮಾತಾಡ್ತಿದ್ದಾರೆ ವಿಜ್ಞಾನಿಗಳು..

ಈ ವರದಿಯಲ್ಲಿರೋ ವಿಚಿತ್ರ ರಹಸ್ಯಗಳ ಬಗ್ಗೆ ಕೇಳ್ತಾ ಇದ್ರೆ, ನಿಜಕ್ಕೂ ಭಯವಾಗುತ್ತೆ.. ಹಿಮಾಲಯವನ್ನ ನಾವ್ಯಾರೂ ಈ ತನಕ ಪರ್ವತ ಅಂತ ನೋಡೇ ಇಲ್ಲ.. ಅದು ಭಾರತದ ಐಡೆಂಟಿಟಿ.. ಆದ್ರೆ ಅದರ ಬುಡದಲ್ಲೇ ಜೀವ ಭಯ ಹುಟ್ಟಿಸೋ ಸಂಗತಿ ಅಡಗಿದೆ..

ಹಿಮಾಲಯದಲ್ಲಿ ಒಂದಷ್ಟು ಆತಂಕಕಾರಿ ಬೆಳವಣಿಗೆಗೆಳಾಗ್ತಾ ಇವೆ.. ಪದೇ ಪದೇ ಭೂಕಂಪನಕ್ಕೆ ಒಳಗಾಗ್ತಾ ಇರೋ ಈ ಜಾಗದಲ್ಲೇ, ಜೀವಜಲಕ್ಕೂ ಕಂಟಕ ಅಂತಿದ್ದಾರೆ ತಜ್ಞರು.

ಹಿಮಾಲಯ ನಮ್ಮ ದೇಶದ ಹೆಮ್ಮೆ ಮಾತ್ರವಲ್ಲ, ಜೀವನಾಡಿ. ಅದರ ಆರೋಗ್ಯವನ್ನು ಕಾಪಾಡಿಕೊಳ್ಳೋದು ನಮ್ಮೆಲ್ಲರ ಜವಾಬ್ದಾರಿ. ಈಗ ಎದುರಾಗಿರೋ ಈ ಸವಾಲುಗಳನ್ನ ಸಮರ್ಥವಾಗಿ ಎದುರಿಸದಿದ್ದರೆ, ಭವಿಷ್ಯದಲ್ಲಿ ತೀವ್ರ ನೀರಿನ ಬಿಕ್ಕಟ್ಟು ಉಂಟಾಗುತ್ತೆ.. ಪರಿಸರ ದುರಂತಗಳಿಗೆ ನಾವು ಸಾಕ್ಷಿಯಾಗಬೇಕಾಗುತ್ತೆ.. ಆ ದಾರುಣ ಸ್ಥಿತಿ ಬಾರದ ಹಾಗೆ ಕಾಪಾಡಿಕೊಳ್ಳೋ ಹೊಣೆ ನಮ್ಮದು.. ಇದಾಗಿತ್ತು ಇವತ್ತಿನ ಸುವರ್ಣ ಫೋಕಸ್.. ನಮಸ್ಕಾರ..



Source link

Leave a Reply

Your email address will not be published. Required fields are marked *