ವೈಜಾಗ್, ಅಕ್ಟೋಬರ್ 16: ಹೂಡಿಕೆದಾರರನ್ನು ಸೆಳೆಯುವ ವಿಚಾರದಲ್ಲಿ ರಾಜ್ಯ ರಾಜ್ಯಗಳ ನಡುವೆ ಸ್ಪರ್ಧೆ ನಡೆಯಲಿದೆ. ಆಂಧ್ರಪ್ರದೇಶ ಬಹಳ ಉತ್ಸಾಹ ತೋರುತ್ತಿದೆ. ಗೂಗಲ್ ನಿಂದ 15 ಬಿಲಿಯನ್ ಡಾಲರ್ ಹೂಡಿಕೆ ಹರಿದುಬರಲಿರುವುದು (Google ಹೂಡಿಕೆಗಳು) ಆಂಧ್ರಕ್ಕೆ ಹೊಸ ಉತ್ಸಾಹದ ಅಲೆಯನ್ನೇ ಎಬ್ಬಿಸಿದೆ. ಇದೇ ಉತ್ಸಾಹದ ಭರದಲ್ಲಿ ಆಂಧ್ರ ಐಟಿ ಸಚಿವ ನರ ಲೋಕೇಶ್, ಕರ್ನಾಟಕ ವಿರುದ್ಧ ಪರೋಕ್ಷವಾಗಿ ವ್ಯಂಗ್ಯಸ್ತ್ರ ಪ್ರಯೋಗಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಅವರು ಆಂಧ್ರಕ್ಕೆ ಹೂಡಿಕೆ ಹರಿದುಬರುತ್ತಿರುವುದು ಕೆಲ ನೆರೆಯ ರಾಜ್ಯಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದಾರೆ.
‘ಆಂಧ್ರದ ಊಟ ಸ್ಪೈಸಿ ಎಂದು ಹೇಳುತ್ತಾರೆ. ನಮ್ಮ ಕೆಲ ಹೂಡಿಕೆಗಳೂ ಕೂಡ ಸ್ಪೈಸಿಯೇ ಎನಿಸಬಹುದು. ಕೆಲ ನೆರೆಹೊರೆಯವರಿಗೆ ಉರಿ ಹತ್ತಿಕೊಳ್ಳುತ್ತಿದೆ’ ಎಂದು ನರ ಲೋಕೇಶ್ ಹೇಳಿದ್ದಾರೆ. ಇಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಹೆಸರೆತ್ತದೆ ಈ ಎರಡು ರಾಜ್ಯಗಳನ್ನು ನರ ಲೋಕೇಶ್ ಮೂಡಲಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಐಎಂಎಫ್‌ನಿಂದಲೂ ನಿರೀಕ್ಷೆ ಹೆಚ್ಚಿದೆ; ಶೇ. 6.4 ರಿಂದ ಶೇ. 6.6ಕ್ಕೆ ಅಂದಾಜು ಪರಿಷ್ಕರಣೆ
ಕರ್ನಾಟಕ ಮತ್ತು ಆಂಧ್ರ ನಡುವೆ ಪೈಪೋಟಿ…
ಆಂಧ್ರದ ವೈಜಾಗ್‌ನಲ್ಲಿ ಗೂಗಲ್ ಸಂಸ್ಥೆ 15 ಬಿಲಿಯನ್ ಡಾಲರ್ ಹೂಡಿಕೆಯಲ್ಲಿ ಡಾಟಾ ಸೆಂಟರ್ ಸೇರಿದಂತೆ ಎಐ ಹಬ್ ನಿರ್ಮಿಸಲು ಹೊರಟಿದೆ. ಇದಕ್ಕೆ ಆಂಧ್ರ ಸರ್ಕಾರ ಸಬ್ಸಿಡಿ ದರದಲ್ಲಿ ನೆಲ, ವಿದ್ಯುತ್, ನೀರು ಇತ್ಯಾದಿ ಸೌಕರ್ಯ ಒದಗಿಸುವ ಭರವಸೆ ನೀಡಿದೆ. ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಂಧ್ರದ ಈ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ನರ ಲೋಕೇಶ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಕೆಲ ನೆರೆಹೊರೆಯವರಿಗೆ ಉರಿ ಶುರುವಾಗಿದೆ ಎಂದು ಹೇಳಿದ್ದಿರಬಹುದು.
ಸಚಿವರಾಗಿ ನರ ಲೋಕೇಶ್ ಅವರು, ಆಂಧ್ರದಲ್ಲಿ ಹೂಡಿಕೆ ಮಾಡುವಂತೆ ವಿವಿಧ ಉದ್ದಿಮೆಗಳಿಗೆ ಆಹ್ವಾನ ಕೊಡುತ್ತಲೇ ಇರುತ್ತಾರೆ. ಯಾವುದೇ ಹೊಸ ಹೂಡಿಕೆಗಳ ಪ್ರಸ್ತಾಪವಾದರೂ ಆಂಧ್ರಕ್ಕೆ ಗಿಟ್ಟಿಸಲು ಪ್ರಯತ್ನಿಸುತ್ತಿರುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ಗೂಗಲ್ ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ
ಬೆಂಗಳೂರಿನ ಕಂಪನಿಯೊಂದರ ಸಿಐಒ ಅವರು ಸಿಲಿಕಾನ್ ಸಿಟಿಯ ಟ್ರಾಫಿಕ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ, ತಮ್ಮ ಕಂಪನಿಯನ್ನು ಬೇರೆಡೆ ಸ್ಥಳಾಂತರ ಮಾಡಿದ ಕಂಪನಿಗಳು ಹೇಳಿದ್ದಾರೆ. ಆಗಲೂ ಕೂಡ ಆಂಧ್ರವು ತಮ್ಮಲ್ಲಿಗೆ ಬರಬೇಕೆಂದು ಆ ಕಂಪನಿಗೆ ಆಹ್ವಾನ ಕೊಟ್ಟಿತ್ತು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ