Headlines

RSSಗೆ ಅಂಕುಶ ವಿವಾದ: ಹಿಂದಿನ ಬಿಜೆಪಿ ಸರ್ಕಾರದ ಆದೇಶವೇ ಈಗ ಕಾಂಗ್ರೆಸ್​ ಅಸ್ತ್ರ?

RSSಗೆ ಅಂಕುಶ ವಿವಾದ: ಹಿಂದಿನ ಬಿಜೆಪಿ ಸರ್ಕಾರದ ಆದೇಶವೇ ಈಗ ಕಾಂಗ್ರೆಸ್​ ಅಸ್ತ್ರ?


ಬಿ.ಕೆ. ಹರಿಪ್ರಸಾದ್ ಆರೋಪ

ಬೆಂಗಳೂರು, ಅಕ್ಟೋಬರ್ 16: ರಾಜ್ಯದಲ್ಲಿ ಆರ್.ಎಸ್.ಎಸ್ ಕಾರ್ಯಚಟುವಟಿಕೆಗಳ ನಿರ್ಬಂಧಕ್ಕೆ ಮುಂದಾಗಿರುವ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನೇ ಈಗ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಶಾಲಾ ಆವರಣ ಅಥವಾ ಮೈದಾನವನ್ನು ಯಾವುದೇ ಕಾರಣಕ್ಕೂ ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ತಿಳಿಸಿತ್ತು. ಆ ಆದೇಶವನ್ನ ಬಿಜೆಪಿಗರು ಈಗ ಮರೆತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿವಿದಿದ್ದಾರೆ.

ಇದೆ ವಿಚಾರವನ್ನ ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಬಿಜೆಪಿ ಹೇಳೋದು ಮಾತ್ರ ಆಚಾರ, ನಡೆದುಕೊಳ್ಳುವುದೆಲ್ಲ ಅನಾಚರವೇ. ಇದು ಬಿಜೆಪಿಯ ಜಾಣ ಕುರುಡಾ? ಇಲ್ಲ ಸರ್ಕಾರದ ಗಮನಕ್ಕೆ ಬಾರದೇ ಇಂತಹ ಆದೇಶಗಳಾಗುವುದು ಕೇಶವ ಕೃಪಾದಲ್ಲಾ? ಎಂದು ವ್ಯಂಗ್ಯವಾಡಿದ್ದಾರೆ. ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು, ಸಂಘ ಸಂಸ್ಥೆಗಳು ಕೂಡ ಕಾನೂನು ಮೀರಿ ವರ್ತನೆ ಮಾಡಿದ್ದೀರಿ. ಆರೆಸ್ಸೆಸ್ ಹಾಗೂ ಸಂಘ ಪರಿವಾರ ಕಾನೂನನ್ನೂ ಮೀರಿದ್ದೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RSSಗೆ ಅಂಕುಶಕ್ಕೆ ಹೊಸ ವಿಧೇಯಕದ ಡ್ರಾಫ್ಟ್ ರೆಡಿ: ನಿಯಮ ಮೀರಿದ್ರೆ ಏನೆಲ್ಲ ಶಿಕ್ಷೆ?

‘ಗಾಂಧಿ ಕೊಂದಿದ್ದು ಇದೆ ಸಿದ್ಧಾಂತದ ಪ್ರಭಾವಿತರು’

RSSನವರು ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿಯ ಉತ್ಕೃಷ್ಟ ಮೌಲ್ಯಗಳನ್ನು ತೋರಿಸುತ್ತೇವೆ ಅಂತಾರೆ. ಇದು ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಅನ್ನೋ ರೀತಿ ಆಗಿದೆ ಎಂದು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆ ಸಿದ್ಧಾಂತದಿಂದ ಪ್ರಭಾವಕ್ಕೆ ಒಳಗಾದವರೆ ಗಾಂಧೀಜಿಯನ್ನು ಕೊಂದಿದ್ದು. ರಾಜ್ಯದಲ್ಲಿ ನಾವೇನು ​​ಆ ಸಂಘಟನೆಯನ್ನು ಬ್ಯಾನ್ ಮಾಡಲು ಹೊರಟಿಲ್ಲ. ಬದಲಾಗಿ ಸಾರ್ವಜನಿಕ ಸ್ಥಳ ಹಾಗೂ ಶಾಲಾ ಕಾಲೇಜುಗಳು ಅದರ ಕಾರ್ಯಚಟುವಟಿಕೆ ನಿಯಂತ್ರಣಕ್ಕೆ ಮುಂದಾಗಿವೆ ಎಂದು ಅವರು ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *