Headlines

ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ

ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ


ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಿಸ್ಕೆಟ್ಬಿಸ್ಕತ್ತುಗಳು) ತಿನ್ನಲು ಇಷ್ಟಪಡುತ್ತಾರೆ. ಟೀ, ಕಾಫಿ ಜೊತೆ ಒಳ್ಳೆ ಕಾಂಬಿನೇಷನ್‌ ಅಂತ ಅನೇಕರು ನಿತ್ಯ ಬಿಸ್ಕೆಟ್‌ ತಿನ್ನುತ್ತಾರೆ. ಅವುಗಳಲ್ಲಿ ವಿವಿಧ ಬ್ರ್ಯಾಂಡ್‌ಗಳ ಪ್ಯಾಕ್‌ಡ್ ಕುಕೀಗಳಲ್ಲಿ ಸಕ್ಕರೆ, ಮೈದಾ ಅತಿಯಾಗಿ ಇರುತ್ತದೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ಆರೋಗ್ಯಕರ ರೀತಿಯಲ್ಲಿ ಹೋಮ್‌ಮೇಡ್ ಕುಕೀಗಳನ್ನು ಸೇವಿಸುತ್ತಾರೆ. ಆದರೆ ಹೋಮ್‌ಮೇಡ್ ಬಿಸ್ಕೆಟ್‌ಗಳನ್ನು ಸಹ ಪ್ರತಿನಿತ್ಯ ಸೇವನೆ ಮಾಡುವುದು ಒಳ್ಳೆಯದಲ್ಲವಂತೆ. ಇವುಗಳು ಕೃತಕ ಸಿಹಿಕಾರಕ, ಮೈದಾ ಇತ್ಯಾದಿಗಳಿಂದ ಮುಕ್ತವಾಗಿದ್ದರೂ, ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಪೌಷ್ಟಿಕ ತಜ್ಞೆ ಅಮಿತಾ ಗಾದ್ರೆ ವಿವರಿಸಿದ್ದಾರೆ. ಹಾಗಿದ್ರೆ ನಿತ್ಯ ಹೋಮ್‌ಮೇಡ್ ಕುಕೀ, ಬಿಸ್ಕೆಟ್ ತಿಂದ್ರೆ ಏನಾಗುತ್ತದೆ ಸಂಪೂರ್ಣ ಮಾಹಿತಿ ತಿಳಿಯಿರಿ.

ಹೋಮ್‌ಮೇಡ್ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ಸೇವಿಸೋದು ಒಳ್ಳೆಯದಲ್ಲ:

ಮನೆಯಲ್ಲಿ ತಯಾರಿಸಿದ ಬಿಸ್ಕತ್ತುಗಳು ಮತ್ತು ಕುಕೀಗಳು ಸಿಹಿಕಾರಕಗಳಿಂದ ಮುಕ್ತವಾಗಿದ್ದರೂ ಸಹ, ಪ್ರತಿದಿನ ಅವುಗಳನ್ನು ಸೇವಿಸುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೌಷ್ಟಿಕತಜ್ಞೆ ಅಮಿತಾ ಗದ್ರೆ ಹೇಳುತ್ತಾರೆ.

ಕುಕೀಗಳನ್ನು ಮೂರು ಭಾಗ ಹಿಟ್ಟು, ಎರಡು ಭಾಗ ಕೊಬ್ಬು ಮತ್ತು ಒಂದು ಭಾಗ ಸಕ್ಕರೆ, ಅಂದರೆ ಇದರಲ್ಲಿ ಸರಿಸುಮಾರು 50 ರಿಂದ 70 ಪ್ರತಿಶತ ಹಿಟ್ಟು, 15 ರಿಂದ 35 ಪ್ರತಿಶತ ಕೊಬ್ಬು ಮತ್ತು 10 ರಿಂದ 25 ಪ್ರತಿಶತ ಸಕ್ಕರೆ ಇರುತ್ತದೆ. ನೀವು ಮನೆಯಲ್ಲಿಯೇ ತಯಾರಿಸಿದರೂ, ಅಥವಾ ತುಪ್ಪು ಬೆಲ್ಲವನ್ನು ಬಳಸಿ ತಯಾರಿಸಿದ ಆರೋಗ್ಯಕರ ಕುಕೀಗಳನ್ನು ಖರೀದಿಸಿದರೂ ಪ್ರತಿನಿತ್ಯ ಇವುಗಳ ಸೇವನೆ ಒಳ್ಳೆಯದು. ಏಕೆಂದರೆ ಇದು ಎಂಟಿ ಕ್ಯಾಲೋರಿಗಳು ಅಂದರೆ ಯಾವುದೇ ಪೋಷಕಾಂಶಗಳಿಲ್ಲ ಮತ್ತು ನಿಮಗೆ ಅಗತ್ಯವಿಲ್ಲ ಹೆಚ್ಚುವರಿ ಸಕ್ಕರೆ ಮತ್ತು ಕಬ್ಬನ್ನು ಹೊಂದಿರುವ ಉತ್ಪನ್ನವಾಗಿದೆ. ಇವುಗಳು ಅಪರೂಪಕ್ಕೆ ಮಕ್ಕಳಿಗೆ ನೀಡಬಹುದು. ಆದರೆ ಪ್ರತಿನಿತ್ಯ ಸೇವನೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಮನೆಯಲ್ಲಿಯೇ ಇರುವಂತಹ ಎಲ್ಲಾ ಆಹಾರ ಪದಾರ್ಥಗಳು ಸಹ ಆರೋಗ್ಯಕರವಾಗಿ ತಯಾರಿಸಲ್ಪಡುತ್ತವೆ. ಆದರೆ ಬಿಸ್ಕೆಟ್, ಕುಕೀಗಳ ವಿಷಯಕ್ಕೆ ಬಂದಾಗ, ಇವುಗಳು ಹೋಮ್‌ಮೇಡ್‌ ಆಗಿದ್ರೂ ಸಹ ಪ್ರತಿನಿತ್ಯ ಇವುಗಳ ಸೇವನೆ ಒಳ್ಳೆಯದು. ಏಕೆಂದರೆ ಸಾಮಾನ್ಯವಾಗಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಆಹಾರದಿಂದ ಸಮೃದ್ಧವಾಗಿರುವ ಆಹಾರ, ಇವುಗಳು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ದಿನಾ ಕುಕೀ, ಬಿಸ್ಕೆಟ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟಾಗಬಹುದು. ತಿನ್ನುವ ಹಂಬಲ ಹೆಚ್ಚಾಗಬಹುದು. ಕಾಲಾನಂತರದಲ್ಲಿ ಇದು ತೂಕ ಹೆಚ್ಚಳ, ಇನ್ಸುಲಿಲ್ ಪ್ರತಿರೋಧಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಸ್ಲಿಮ್ ಆಗಿ ಕಾಣ್ಬೇಕಾ…? ಹಾಗಿದ್ರೆ ಪ್ರತಿನಿತ್ಯ ಬೆಳಗ್ಗೆ ಒಂದು ಪಾನೀಯ ಕುಡಿದ್ರೆ ಸಾಕು

ಇದಲ್ಲದೆ ಹೆಚ್ಚು ಬಿಸ್ಕೆಟ್ ಮತ್ತು ಕುಕೀಗಳನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ವಿಶೇಷವಾಗಿ ಇದು ಹಲ್ಲು ಕೊಳೆಯುವಿಕೆಗೆ ಕಾರಣವಾಗುತ್ತದೆ. ಬಿಸ್ಕೆಟ್ ಬದಲಿಗೆ ವಿಟಮಿನ್ಗಳು, ಫೈಬರ್ ಮತ್ತು ಸಮೃದ್ಧವಾಗಿರುವ ಹಣ್ಣುಗಳು, ನಟ್ಸ್ ಸೇವಿಸಿದರೆ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *