ನಟಿ ರಮ್ಯಾಗೆ (ರಮ್ಯಾ) ಅಶ್ಲೀಲ ಸಂದೇಶ ಕಳಿಸಿರುವ ಪ್ರಕರಣದ ಆರೋಪಿಗಳ ವಿರುದ್ಧ 600 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಪ್ರಕರಣಕ್ಕೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇನ್ನೂ ಪರಾರಿ ಆಗಿದ್ದರು. ಇದೀಗ ಆರೋಪಿಗಳ ವಿರುದ್ಧ ಆರೋಪಿ0 ಬರೋಬ್ಬರಿ 60 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ರಮ್ಯಾ ವಿರುದ್ಧ ಅತ್ಯಂತ ಅವಾಚ್ಯ, ಅಶ್ಲೀಲ ಶಬ್ದಗಳನ್ನು ಆರೋಪಿಗಳು ಬಳಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಸಿಸಿಬಿ ನಾಲ್ಕನೇ ಪ್ರಕರಣದ ತನಿಖೆ ನಡೆಸಿದ್ದು, ಎಸಿಜಿಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ರಾಜೇಶ್, ಓಬಣ್ಣ, ಗಂಗಾಧರ್, ಭುವನ್ ಗೌಡ ಸೇರಿದಂತೆ 11 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಲವು ನಕಲಿ ಖಾತೆಗಳಿಂದ ರಮ್ಯಾಗೆ ಕೀಳು ಸಂದೇಶಗಳನ್ನು ಕಳಿಸಲಾಯಿತು. ವೈಯಕ್ತಿಕ ನಿಂದನೆಯನ್ನು ಮಾಡಲಾಗಿದೆ. ದರ್ಶನ್ ಪರ ವಹಿಸಿ ಈ ಖಾತೆಗಳಿಂದ ರಮ್ಯಾಗೆ ಸಂದೇಶಗಳನ್ನು ಕಳಿಸಲಾಯಿತು.
ನಟಿ ರಮ್ಯಾ, ದರ್ಶನ್ ಮತ್ತೆ ಜೈಲಿಗೆ ಹೋದಾಗ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದರು. ಈ ಹೇಳಿಕೆಯಿಂದ ಕೆರಳಿದ ಕೆಲ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಟ್ರೋಲಿಂಗ್ ಗೆ ಇಳಿದಿದ್ದರು. ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಅತ್ಯಂತ ಕೀಳು ಭಾಷೆ ಬಳಸಿ ಬೈದಿದ್ದರು. ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದವರ ವಿರುದ್ಧ ನಟಿ ರಮ್ಯಾ ಜುಲೈ 23ರಂದು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ಗ್ಲಾಮರ್ ಅವತಾರದಲ್ಲಿ ಬಾಹುಬಲಿ ರಾಜಮಾತೆ ರಮ್ಯಾ ಕೃಷ್ಣನ್
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 50 ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಿದರು. ಬಂಧನಕ್ಕೆ ಹೆದರಿ 20ಕ್ಕೂ ಹೆಚ್ಚು ಆರೋಪಿಗಳು ಪರಾರಿ ಆಗಿದ್ದರು. ಕೆಲವು ದಿನಗಳ ಹಿಂದಷ್ಟೆ ಬಂಧಿತ ಆರೋಪಿಗಳು ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇತರೆ ಭದ್ರತೆಗಳನ್ನು ನ್ಯಾಯಾಲಯದಿಂದ ಒದಗಿಸಿದ್ದಾರೆ.
ಇದೀಗ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದ್ದು, ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ. ಒಂದೊಮ್ಮೆ ಆರೋಪಿಗಳ ತಪ್ಪಿಗೆ ಶಿಕ್ಷೆ ಸಹ ಅನುಭವಿಸಬೇಕಾಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:18 pm, ಗುರುವಾರ, 16 ಅಕ್ಟೋಬರ್ 25