
ಜೀವನದಲ್ಲಿ ಕೆಲಸ ಎಷ್ಟು ಮುಖ್ಯ, ಆರೋಗ್ಯ (ಆರೋಗ್ಯ) ಕೂಡ ಅಷ್ಟೇ ಮುಖ್ಯಕ್ಕೆ. ಆರೋಗ್ಯ ಇದ್ರೆ ದುಡಿಮೆ ಎಂಬ ಮಾತು ಸತ್ಯ. ಆದರೆ ಈ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಜೀತದಾಳುಗಳಂತೆ ಇರಬೇಕು ಎಂಬುದು ಹಲವು ಉದ್ಯೋಗಿಗಳ ಮಾತು. ಅದರಲ್ಲೂ ಇಲ್ಲಿ ರಜೆ ಕೇಳಿದ್ರೆ ಮುಗಿಯಿತು, ಬಾಸ್ ಗಳ ಮನೆಯ ಆಸ್ತಿ ಕೇಳಿದಂತೆ ಮಾಡ್ತಾರೆ. ಕೆಲಸ ಮಾಡಿ, ರಜೆ ಮಾತ್ರ ಕೇಳಬೇಡಿ. ಇದು ಕಂಪನಿಗಳ ನಿಯಮ. ಈಗ ಇಲ್ಲೊಂದು ಉದ್ಯೋಗಿಯ ಪರಿಸ್ಥಿತಿ ಕೂಡ ಅದೇ, ಅನಾರೋಗ್ಯ ಎಂದು ರಜೆ ಕೇಳಿದ್ರೆ, ಈ ಬಾಸ್ ಹೀಗೆ ಹೇಳೋದ, ಈ ಕಥೆ ಕೇಳಿದ್ರೆ ನೀವು ಕೂಡ ಅಯ್ಯೋ ಇವರು ಯಾವ ಸೀಮೆ ಬಾಸ್ ಅಂತ ಹೇಳ್ತೀರಾ, ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಪೈಲ್ಸ್ ಆಗಿದೆ. ಇದಕ್ಕೆ ಮ್ಯಾನೇಜರ್ ಬಳಿ ರಜೆ ಕೇಳಿದ್ರೆ, ಮ್ಯಾನೇಜರ್ ಉತ್ತರ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ.
ಸಾರ್ ನನಗೆ ಪೈಲ್ಸ್ ಆಗಿದೆ. ಕೂರೋಕೂ ಆಗ್ತಿಲ್ಲ, ನಿಲ್ಲೋಕೂ ಆಗ್ತಿಲ್ಲ, ಇದು ಗಂಭೀರ ಸಮಸ್ಯೆ ಸರ್ ದಯವಿಟ್ಟು ನನಗೆ ಇವತ್ತು ಮೆಡಿಕಲ್ ಲೀವ್ ಕೊಡಿ ಎಂದು ವಾಟ್ಸಪ್ ನಲ್ಲಿ ಮೆಸೇಜ್ ಹಾಕಿದ್ದಾರೆ. ಇದರ ಜೊತೆಗೆ ಮ್ಯಾನೇಜರ್ ಗೆ ನಂಬಿಕೆ ಬರಲಿ ಎಂದು ಡಾಕ್ಟರ್ ಕೊಟ್ಟ ಪ್ರಿಸ್ಕ್ರಿಪ್ಷನ್ ಫೋಟೋ ಕೂಡ ಕಳಿಸಿದ್ದಾರೆ. ಆದರೆ ಮ್ಯಾನೇಜರ್ ಮಾಡಿ ಉಪದೇಶ ನೋಡಿದ್ರೆ, ರಜೆ ಬೇಡ ಆಫೀಸ್ ಹೋಗಿ ಕೆಲಸ ಮಾಡಿದರೆ ಎಂದೆನ್ನಿಸುವುದು ಖಂಡಿತ, ಅಷ್ಟು ಕೆಟ್ಟದಾಗಿತ್ತು ಅವರ ಮಾತುಗಳು. ಉದ್ಯೋಗಿಯ ಸಂದೇಶ ನೋಡಿ ಮ್ಯಾನೇಜರ್ ಪ್ರತಿಕ್ರಿಯೆ ಹೀಗಿತ್ತು, “ನಿಂಗೆ ಶಿಸ್ತು ಕಲಿಸಿದ್ದು ಯಾರು? ರಜೆ ಕೇಳ್ತಿರೋ ಟೈಮ್ ನೋಡು. ಎರಡು ದಿನದ ಸಂಬಳ ಕಟ್” ಎಂದು ಬೆದರಿಕೆ ಹಾಕಿದ್ರು, ಆರೋಗ್ಯ ಸಮಸ್ಯೆ ಹೇಳಿ-ಕೇಳಿ ಬರುತ್ತಾ? ಅನಾರೋಗ್ಯಕ್ಕೂ, ಸಂಬಳಕ್ಕೂ ಏನು ಸಂಬಂಧ? ಅದರೂ ಎಲ್ಲವನ್ನು ಸಹಿಸಿಕೊಂಡಿರಬೇಕು ಅಷ್ಟೇ. ಏಕೆಂದರೆ ಕೆಲಸ ಅನಿವಾರ್ಯ.
ಇಲ್ಲಿದೆ ನೋಡಿ ಪೋಸ್ಟ್:
ಈ ರೀತಿಯ ಮ್ಯಾನೇಜರ್‌ನೊಂದಿಗೆ ನಾನು ಏನು ಮಾಡಬೇಕು
byu/nanukannadiga in Indian Workplace
ಅದ್ರೂ ಮ್ಯಾನೇಜರ್ ಬಳಿ ಬೇಡಿಕೊಂಡೆ, “ಸರ್ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಆರೋಗ್ಯದಲ್ಲಿ ಸಮಸ್ಯೆಯಾಗಿರುದಕ್ಕೆ ನಾನು ರಜೆ ಕೇಳ್ತಿರೋದು, ಮೊನ್ನೆ ತಿಳಿಸಲು ಆಗಿಲ್ಲ ಕ್ಷಮಿಸಿ” ಎಂದಳು. ಪ್ರಪಂಚದಲ್ಲಿ ನಾನೊಬ್ಬನೇ ಆಗಿರಬೇಕು, ಸೌಖ್ಯ ಇಲ್ಲ ಅಂದ್ರೂ ಕ್ಷಮೆ ಕೇಳಿರುವುದು. ಆದರೆ ಮ್ಯಾನೇಜರ್ ಎಷ್ಟು ಕ್ರೂರಿ ಅಂದ್ರೆ, “ಹಾಗಾದ್ರೆ ನಿನ್ನ ಬ್ಯುಸಿನೆಸ್ ಯಾರು ಮಾಡ್ತಾರೆ? ನಿನ್ನ ನಂಬಿಕೊಂಡು ಸಾವಿರಾರೂ ಕಮಿಟ್’ಮೆಂಟ್ ಇದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ” ಎಂದು ಮನುಷ್ಯತ್ವ ಬಿಟ್ಟು ಮಾತನಾಡಿದ್ರು , ಅಲ್ಲ ಒಂದು ದಿನ ರಜೆ ತೆಗೆದುಕೊಂಡ್ರೆ ಏನ್ ಬ್ಯಾಂಕ್ ಮುಚ್ಚುತ್ತಾ? ಅಲ್ಲ ದೇಶ ಮುಳುಗುತ್ತಾ?, “ಸರ್ ನಾನು ಆಫೀಸ್‌ಗೆ ಬಂದ ಮೇಲೆ ಎಲ್ಲ ಕೆಲಸ ಮುಗಿಸುವೆ, ಈಗ ಒಮ್ಮೆ ರಜೆ ತೆಗೆದುಕೊಳ್ಳುತ್ತೇನೆ ಎಂದು ತಾಳ್ಮೆಯಿಂದ ಉತ್ತರಿಸುತ್ತಾರೆ.
ಇದನ್ನೂ ಓದಿ: ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಿದ ಸರ್ಜನ್!
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೊದಲು ಈ ಮ್ಯಾನೇಜರ್‌ಗೆ ಒಂದು ಇಂಗ್ಲಿಷ್ ಕ್ಲಾಸ್, ಆಮೇಲೆ ಒಂದು ಮಾನವೀಯತೆ ಕ್ಲಾಸ್‌ಗೆ ಸೇರಿಸಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮೊದಲು ಆ ಮ್ಯಾನೇಜರ್‌ಗೆ ಮನುಷ್ಯನಂತೆ ಮಾಡಲು ಹೇಳಿ ಎಂದು ಮತ್ತೊಬ್ಬನ ವರ್ತನೆಯನ್ನು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ