Amruthadhaare: 'ನಿಮ್ಮಿಂದಾಗಿ ಎಲ್ಲಾ ಕಳ್ಕೊಂಡ್​ಬಿಟ್ಟೆ ಸರ್​' ಎನ್ನುತ್ತಲೇ ಅಪ್ಪನ ಹತ್ತಿರವಾದ ಮಗ! ಮುಂದೆ ಆಗಿದ್ದೇ ಬೇರೆ

Amruthadhaare: 'ನಿಮ್ಮಿಂದಾಗಿ ಎಲ್ಲಾ ಕಳ್ಕೊಂಡ್​ಬಿಟ್ಟೆ ಸರ್​' ಎನ್ನುತ್ತಲೇ ಅಪ್ಪನ ಹತ್ತಿರವಾದ ಮಗ! ಮುಂದೆ ಆಗಿದ್ದೇ ಬೇರೆ

Amruthadhaare: 'ನಿಮ್ಮಿಂದಾಗಿ ಎಲ್ಲಾ ಕಳ್ಕೊಂಡ್​ಬಿಟ್ಟೆ ಸರ್​' ಎನ್ನುತ್ತಲೇ ಅಪ್ಪನ ಹತ್ತಿರವಾದ ಮಗ! ಮುಂದೆ ಆಗಿದ್ದೇ ಬೇರೆ
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಯೋಜನೆಯಂತೆ ಗೌತಮ್ ಇರುವ ವಠಾರಕ್ಕೇ ಭೂಮಿಕಾ ಬಂದಿದ್ದಾಳೆ. ಅಪ್ಪ-ಮಗ ಗೌತಮ್ ಮತ್ತು ಆಕಾಶ್ ಭೇಟಿಯಾಗಿದ್ದು, ಇಬ್ಬರ ಸಂತೋಷದ ನಡುವೆಯೂ, ಭೂಮಿಕಾ ಮತ್ತೆ ಮನೆ ಖಾಲಿ ಮಾಡಬಹುದೆಂಬ ಆತಂಕ ಶುರುವಾಗಿದೆ.
ಅಮೃತಧಾರೆ (Amruthadhaare) ಸೀರಿಯಲ್​ ಮತ್ತು ಟ್ರ್ಯಾಕ್​ಗೆ ಬಂದಿದೆ. ಮಲ್ಲಿಯ ಪ್ಲ್ಯಾನ್​ ಸಕ್ಸಸ್​ ಆಗೋ ಥರ ಕಾಣಿಸ್ತಿದೆ. ಗೌತಮ್​ ಇರೋ ವಠಾರಕ್ಕೇನೇ ಭೂಮಿಕಾಳನ್ನು ಕರೆದುಕೊಂಡು ಬಂದಿದ್ದಾಳೆ. ಆದರೆ ಭೂಮಿಕಾಗೆ ಇದೆಲ್ಲಾ ಗೊತ್ತೇ ಇಲ್ಲ.

ಅದೇ ಇನ್ನೊಂದೆಡೆ, ನೆರೆಮನೆಗೆ ಯಾರೋ ಹೊಸಬರು ಬಂದರು ಎಂದು ಗೌತಮ್​ ಕಾಫಿ ತೆಗೆದುಕೊಂಡು ಹೋಗಿ ಕೊಟ್ಟು ಬಾಗಿಲು ಓಪನ್​ ಮಾಡಿದ್ರೆ ಎದುರಿಗೆ ಭೂಮಿಕಾ! ಇಬ್ಬರಿಗೂ ಖುಷಿ, ನೋವು, ದುಃಖ ಎಲ್ಲವೂ ಒಟ್ಟಿಗೇ ಆದರೂ ಅಕ್ಕ-ಪಕ್ಕದ ಮನೆಯವರು ನೋಡುತ್ತಿದ್ದಾರೆ ಎನ್ನೋ ಕಾರಣಕ್ಕೆ ಏನೂ ಆಗದವರ ರೀತಿ ಇದ್ದಾರೆ.

ಅದೇ ಇನ್ನೊಂದೆಡೆ, ಗೌತಮ್​ ಬಾಳಲ್ಲಿ ಮಗಳ ರೂಪದ ಬಾಲಕಿ ಎಂಟ್ರಿ ಕೊಟ್ಟಿದ್ದಾಳೆ. ಇನ್ನು ಅದೇ ವಠಾರದಲ್ಲಿ ಮಗ ಬೇರೆ ಇದ್ದಾನೆ. ಇನ್ನು ಕೇಳಬೇಕೆ ಅವನ ಖುಷಿ?

ಅಪ್ಪು ಒಬ್ಬನೇ ಕುಳಿತು ಚಿಪ್ಸ್​ ತಿನ್ನೋದನ್ನು ನೋಡಿದ ಗೌತಮ್​ ಓಡಿ ಹೋಗಿ ಅವನನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾನೆ. ಆಗ ಆಕಾಶ್​, ಅವನನ್ನು ನೋಡಿ ಆಶ್ಚರ್ಯಗೊಂಡಿದ್ದಾನೆ. ಫ್ರೆಂಡ್ ಅಂತ ಕರಿಯೋಕೆ ಹೋದೋನು ಕಡೆಗೆ ಸರ್​ ಅಂತ ಕರೆದಿದ್ದಾನೆ.

ಆಕಾಶ್​, ಅಪ್ಪನ ಎದುರು ತನ್ನ ಕಷ್ಟ ಹೇಳಿಕೊಂಡಿದ್ದಾನೆ. ನಿಮ್ಮ ಸಹವಾಸ ಮಾಡಿ ಊರು ಬಿಟ್ಟು ಬರಬೇಕಾಯಿತು. ಫ್ರೆಂಡ್ಸ್​ ಎಲ್ಲಾ ದೂರವಾದ್ರು. ಈಗ ನೋಡಿದ್ರೆ ಇಲ್ಲಿ ಮತ್ತೆ ಇದ್ದೀರಾ. ಅಮ್ಮ ನೋಡಿದ್ರೆ ಇಲ್ಲಿಂದಲೂ ಜಾಗ ಖಾಲಿ ಮಾಡ್​ತಾಳೆ ಎಂದಿದ್ದಾನೆ.

ಆದರೂ ನಿಮ್ಮನ್ನು ನೋಡಿದ್ರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಾಗ ಗೌತಮ್​ ಮುಖದಲ್ಲಿ ನಗು ಅರಳಿದೆ. ಆಕಾಶ್​, ನನಗೆ ನೀವೂ ಬೇಕು, ಅಮ್ಮನೂ ಬೇಕು. ಅದಕ್ಕಾಗಿ ಇಬ್ಬರೂ ನಮ್ಮ ಪಾಡಿಗೆ ನಾವು ಇದ್ದು ಬಿಡೋಣ. ಮಾತನಾಡುವುದು ಬೇಡ ಎಂದು ಹೇಳಿ ಹೊರಟು ಹೋಗಿದ್ದಾನೆ. ಮಗ ಹೋಗಿದ್ದು ನೋಡಿ ಗೌತಮ್​ಗೆ ಬೇಸರವಾಗಿದೆ.

ಒಟ್ಟಿನಲ್ಲಿ ಲಕ್ಕಿ ಗರ್ಲ್​ ಎಂಟ್ರಿ ಕೊಟ್ಟ ಬೆನ್ನಲ್ಲೇ ಗೌತಮ್​ಗೆ ಭೂಮಿಕಾ, ಮಗ ಎಲ್ಲಾ ಸಿಕ್ಕಿದ್ದಾರೆ. ಮಲ್ಲಿಯ ಪ್ಲ್ಯಾನ್​ನಿಂದ ಭೂಮಿಕಾ ಮತ್ತು ಗೌತಮ್​ ಒಂದಾಗೊದೊಂದೇ ಬಾಕಿ ಇರೋದು. ಆದರೆ ಗೌತಮ್​ ಮತ್ತು ಆಕಾಶ್​ ಕ್ಲೋಸ್​ ಆಗ್ತಿರೋದನ್ನು ನೋಡಿ ಭೂಮಿಕಾ ಮತ್ತೆ ಎಲ್ಲಿ ಮನೆ ಖಾಲಿ ಮಾಡ್ತಾಳೋ ಎನ್ನೋ ಚಿಂತೆ ವೀಕ್ಷಕರಿಗೆ.

Source link

Leave a Reply

Your email address will not be published. Required fields are marked *