
Wife Shocked by Husbands Sextortion Videos ಬೆಂಗಳೂರಿನಲ್ಲಿ 20 ವರ್ಷಗಳ ದಾಂಪತ್ಯ ನಡೆಸುತ್ತಿದ್ದ ನಾರಾಯಣ್ ಎಂಬಾತನ ರಾಸಲೀಲೆ ಬಯಲಾಗಿದೆ. ಪತ್ನಿ ಅನ್ನಪೂರ್ಣ, ಆಕಸ್ಮಿಕವಾಗಿ ಪತಿಯ ಮೊಬೈಲ್‌ನಲ್ಲಿ ಪರಸ್ತ್ರೀಯರೊಂದಿಗಿನ ಖಾಸಗಿ ವಿಡಿಯೋಗಳನ್ನು ಕಂಡಿದ್ದಾರೆ.
ಬೆಂಗಳೂರು (ಅ.16): ರಾಜಧಾನಿ ಬೆಂಗಳೂರಿನಲ್ಲಿ ಇಪ್ಪತ್ತು ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದ ಪತಿಯ ರಾಸಲೀಲೆ ಬಯಲಾಗಿದೆ. ಪತ್ನಿಯಿಂದ ಅಂತರ ಕಾಯ್ದುಕೊಂಡು, ಐದಾರು ಪರಸ್ತ್ರೀಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿರಾಯ ನಾರಾಯಣ್, ಇದೀಗ ವಿಡಿಯೋ ಸಾಕ್ಷಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ.
ಪತ್ನಿಯಿಂದ ದೂರ ಉಳಿದು ಲವ್ವಿಡವ್ವಿ
ಇಂದಿರಾನಗರದ ಬಿಎಂ ಕಾವಲ್‌ನಲ್ಲಿ ಪತ್ನಿ ಅನ್ನಪೂರ್ಣ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ನಾರಾಯಣ್, ತಾನು ಕೆಪಿಸಿಸಿ (KPCC) ನಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡು, ಡಿಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ಆತ್ಮೀಯರು ಎಂದು ಬಿಲ್ಡಪ್ ನೀಡುತ್ತಿದ್ದ. ಈ ಬಿಲ್ಡಪ್‌ನಿಂದಾಗಿ ಆತ ಐದಾರು ಮಹಿಳೆಯರೊಂದಿಗೆ ಲವ್ವಿಡವ್ವಿ ಸಂಬಂಧ ಬೆಳೆಸಿದ್ದ.
ಪಲ್ಲಂಗದಾಟದ ವಿಡಿಯೋಗಳು ಪತ್ನಿ ಕೈಗೆ
ವಿಪರ್ಯಾಸವೆಂದರೆ, ಈತ ಪರಸ್ತ್ರೀಯರೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋಗಳು ಮತ್ತು ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಇಟ್ಟುಕೊಂಡಿದ್ದ. ಆಕಸ್ಮಿಕವಾಗಿ ಪತಿಯ ಮೊಬೈಲ್ ನೋಡಿದ ಅನ್ನಪೂರ್ಣಗೆ ಈ ರಾಸಲೀಲೆ ವಿಡಿಯೋಗಳು ಸಿಕ್ಕಿದ್ದು, ಅದನ್ನು ನೋಡಿ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಾಳೆ.
ಪತ್ನಿ ಈ ಬಗ್ಗೆ ಪ್ರಶ್ನಿಸಿದಾಗ, ನಾರಾಯಣ್ ಆಕೆಯ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿದ್ದಾನೆ ಎಂದು ಅನ್ನಪೂರ್ಣ ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿರುವ ಮಹಿಳೆ, ಪತಿಯ ವಿರುದ್ಧ ಪೂರ್ವ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.