Low interest loan scam: ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತಿನಿ ಅಂತಾ ನಾಮ, ವಂಚಕಿ ನಯನಾ ಬಂಧನ | Bengaluru Loan Fraud Case Woman Arrested By Bengaluru Police

Low interest loan scam: ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತಿನಿ ಅಂತಾ ನಾಮ, ವಂಚಕಿ ನಯನಾ ಬಂಧನ | Bengaluru Loan Fraud Case Woman Arrested By Bengaluru Police



Low interest loan scam: ಕಡಿಮೆ ಬಡ್ಡಿಗೆ ಲೋನ್ ಕೊಡಿಸ್ತಿನಿ ಅಂತಾ ನಾಮ, ವಂಚಕಿ ನಯನಾ ಬಂಧನ | Bengaluru Loan Fraud Case Woman Arrested By Bengaluru Police

Low interest loan scam :ಬೆಂಗಳೂರಿನಲ್ಲಿ ‘ಸುಬ್ಬಲಕ್ಷ್ಮಿ ಚಿಟ್ಸ್’ ಕಂಪನಿ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ನಂಬಿಸಿ, ಮುಂಗಡ ಇಎಂಐ ಪಡೆದು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ನಯನಾ ಎಂಬ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು(ಅ.16): ಕಡಿಮೆ ಬಡ್ಡಿಗೆ ಲೋನ್‌ ಕೊಡಿಸ್ತೇನೆ ಎಂದು ನಂಬಿಸಿ ಅಮಾಯಕ ಜನರಿಗೆ ಲಕ್ಷ ಲಕ್ಷ ವಂಚಿಸಿದ ಖತರ್ನಾಕ್ ವಂಚಕಿ ನಯನಾಳನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ದಬ್ಬಿದ್ದಾರೆ.

‘ಸುಬ್ಬಲಕ್ಷ್ಮಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯ ಮೂಲಕ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಜನರನ್ನು ಮೋಸ ಮಾಡಿದ್ದ ವಂಚಕಿ ನಯನಾ. ಈ ವಂಚನೆಯಲ್ಲಿ ಸುಮಾರು 12 ಲಕ್ಷ 22 ಸಾವಿರ ರೂಪಾಯಿಗಳಷ್ಟು ಹಣ ಪಡೆದು ಜನರಿಗೆ ನಾಮ ಹಾಕಿದ್ದಳು.

ನಯನಾ ವಂಚಿಸುತ್ತಿದ್ದಿದ್ದು ಹೇಗೆ?

1% ಬಡ್ಡಿಗೆ ಸಾಲ ಕೊಡಿಸುವುದಾಗಿ ಆಸೆ ತೋರಿಸುತ್ತಿದ್ದ ವಂಚಕಿ ನಯನಾ ಮತ್ತು ಆಕೆಯ ಸಹಚರರು. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂದು ಅಮಾಯಕರನ್ನ ನಂಬಿಸುತ್ತಿದ್ದ ಗ್ಯಾಂಗ್ ಬಳಿಕ 10 ಲಕ್ಷ ರೂಪಾಯಿ ಸಾಲ ಬೇಕೆಂದರೆ ಮುಂಗಡವಾಗಿ 3 ತಿಂಗಳ ಇ.ಎಂ.ಐ (Equated Monthly Installment) ಕಟ್ಟಬೇಕೆಂದು ಹೇಳುತ್ತಿದ್ದರು. ಹಣದ ಅಗತ್ಯವಿರುವವರು ಹಿಂದೆಮುಂದೆ ಯೋಚಿಸದೇ ಇಎಂಐ ಕಟ್ಟುತ್ತಿದ್ದರು. ಇದೇ ರೀತಿ ಸುಮಾರು 15 ಜನರಿಂದ ಒಟ್ಟು 30 ಸಾವಿರ ರೂಪಾಯಿಗಳನ್ನು ಪಡೆದು ನಾಮಕ ಹಾಕಿದ್ದ ಗ್ಯಾಂಗ್. ಈ ಹಣ ಪಡೆದ ನಂತರ ಸಾಲ ನೀಡದೆ ವಂಚಿಸುತ್ತಿದ್ದರು.

ವಂಚನೆ ಪ್ರಕರಣ ಬಯಲಾಗಿದ್ದು ಹೇಗೆ?

ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ವಂಚನೆಯ ಬಗ್ಗೆ ದೂರು ದಾಖಲಾಗಿತ್ತು. ಬಸವೇಶ್ವರನಗರ ಪೊಲೀಸ್ ತಂಡ ತನಿಖೆಗಿಳಿದಾಗ, ನಯನಾ ವಿರುದ್ಧ ಈ ಹಿಂದೆ ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ವಂಚನೆ ಕೇಸ್‌ಗಳಿದ್ದವು ಎಂದು ಬಯಲಾಯಿತು. ವಿವಿಧ ಸ್ಥಳಗಳಲ್ಲಿ ಇಂತಹ ಮೋಸಗಳನ್ನು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಯನಾಳನ್ನ ಬಂಧಿಸಲಾಗಿದ್ದು ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.



Source link

Leave a Reply

Your email address will not be published. Required fields are marked *