ನವದೆಹಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ನಿವೃತ್ತಿ ಹೊಸ್ತಿಲಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವುದರ ನಡುವೆ, ಅವರು ಮಾಡಿದ ಒಂದು ಟ್ವೀಟ್ ಅವರ ಅಭಿಮಾನಿಗಳ ನಿದ್ದೆಗೆಡುವಂತೆ ಮಾಡಿದೆ. ಏನದು ಪೋಸ್ಟ್? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಸಾಮಾಜಿಕ ತಾಣಗಳಲ್ಲಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡುವುದು ಅಪರೂಪ. ಅವರ ಪ್ರತಿ ಪೋಸ್ಟ್‌ಗೂ ಲಕ್ಷಾಂತರ ಹಿಟ್ಸ್, ಲೈಕ್ಸ್ ಬರಲಿದೆ.

ಪ್ರತಿ ಪೋಸ್ಟ್ ಕೂಡ ವೈರಲ್ ಆಗಲಿದೆ. ಅಂತದ್ದೇ ಒಂದು ಟ್ವಿಟ್ ಗುರುವಾರ ಭಾರೀ ಕುತೂಹಲ ಮೂಡಿಸಿ, ಎಲ್ಲರಲ್ಲೂ ಆಸಕ್ತಿ ಕೆರಳಿಸಿತ್ತು.

’ನೀವು ನಿಜವಾಗಲೂ ಸೋಲುವುದು, ಪ್ರಯತ್ನಿಸುವುದನ್ನು ನಿಲ್ಲಿಸಲು ನಿರ್ಧರಿಸಿದಾಗ’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು.

The only time you truly fail, is when you decide to give up.

— Virat Kohli (@imVkohli) October 16, 2025

2027ರ ಏಕದಿನ ವಿಶ್ವಕಪ್ ಗೆ ಕೊಹ್ಲಿ ಆಯ್ಕೆಯಾಗ್ತಾರಾ?, ಐಪಿಎಲ್‌ಗೆ ನಿವೃತ್ತಿ ಘೋಷಿಸುತ್ತಾರಾ? ಹೀಗೆ ಹಲವು ವಿಚಾರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಮಯದಲ್ಲೇ ಕೊಹ್ಲಿಯಿಂದ ಇಂತದ್ದೊಂದು ಟ್ವಿಟ್ ಹೊರಬಿದ್ದಿದ್ದು ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿತ್ತು.

ಅವರ ಟ್ವಿಟ್ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ, ಆರ್‌ಸಿಬಿ ಸೇರಿ ಹಲವು ಅಧಿಕೃತ ಟ್ವಿಟರ್ ಖಾತೆಗಳಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅನೇಕ ಮಾಜಿ ಕ್ರಿಕೆಟಿಗರೂ ಈ ಬಗ್ಗೆ ವಿಶ್ಲೇಷಣೆ ನಡೆಸಿದ್ದರು.

ಆದರೆ, ಮೊದಲ ಟ್ವಿಟ್ ಮಾಡಿದ 2 ಗಂಟೆ ಬಳಿಕ ಕೊಹ್ಲಿ ತಮ್ಮ ಮಾಲಿಕತ್ವದ ‘ರಾಂಗ್’ ಬ್ಯಾಂಡ್‌ನ ಪ್ರಚಾರಕ್ಕಾಗಿ ಈ ರೀತಿ ಟ್ವಿಟ್ ಮಾಡಿದ್ದರು ಎಂದು ತಿಳಿದು, ನೆಟ್ಟಿಗರು ಪೆಚ್ಚಾದರು.

Failure teaches you what victory never will. @staywrogn #StayWrogn pic.twitter.com/Uinsn3vv2s

— Virat Kohli (@imVkohli) October 16, 2025

ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಕೊಹ್ಲಿ, ಸದ್ಯ ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಸರಣಿಗೆ ಸಜ್ಜಾಗುತ್ತಿದ್ದಾರೆ.

Source link
ನಿವೃತ್ತಿ ಗಾಸಿಫ್ ಬೆನ್ನಲ್ಲೇ ಕ್ರಿಕೆಟ್ ಫ್ಯಾನ್ಸ್ ನಿದ್ದೆಗೆಡಿಸಿದ ವಿರಾಟ್ ಕೊಹ್ಲಿ ಹೊಸ ಟ್ವೀಟ್! ಅದರಲ್ಲಿ ಅಂತದ್ದೇನಿದೆ?