Headlines

ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ

ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ


ಅದು ‘ಬಿಗ್ ಬಾಸ್ ಕನ್ನಡ ಸೀಸನ್ 10’. ವಿನಯ್ ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ನಮ್ರತಾ ಗೌಡ ಅವರು ವಿನಯ್ ಚಮಚ ರೀತಿ ವರ್ತಿಸುತ್ತಾರೆ. ಅವರ ಆಣತಿಯಂತೆ ಎಲ್ಲವೂ ನಡೆಯುತ್ತಿತ್ತು. ಆ ಬಳಿಕ ವಿನಯ್ ನೆರಳಿನಿಂದ ಹೊರ ಬರಲು ಅವರು ಸಾಕಷ್ಟು ಪ್ರಯತ್ನ ಮಾಡಬೇಕಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನ್ವಿ ಅವರು ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರ ಚಮಚದ ರೀತಿ ಕಾಣಿಸುತ್ತಿದೆ.

ಅಶ್ವಿನಿ ಗೌಡ ಅವರು ನಟಿ ಆಗಿದ್ದರು. ಆ ಬಳಿಕ ಕನ್ನಡ ಪರ ಹೋರಾಟಗಳ ಮೂಲಕ ಗುರುತಿಸಿಕೊಂಡರು. ಅವರ ಹಿಂದೆ ಜಾನ್ವಿ ನಿಂತಿದ್ದಾರೆ. ಜಾನ್ವಿ ಹಾಗೂ ಒಂಟಿಗಳೇ ಆದರೂ, ಅಶ್ವಿನಿಗೆ ಅವರು ಜಂಟಿ ರೀತಿ ಕಾಣಿಸುತ್ತಿದ್ದಾರೆ. ಇದು ಜಾನ್ವಿ ಆಟದ ಮೇಲೆ ಬಹುವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಬಗ್ಗೆ ವೀಕೆಂಡ್‌ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಜಾನ್ವಿ ಅವರ ಹಲವು ವಿಚಾರಗಳನ್ನು ಅಶ್ವಿನಿ ಬಳಿ ಕೇಳಿಯೇ ನಿರ್ಧರಿಸುತ್ತಾರೆ. ಬಿಗ್ ಬಾಸ್ ನಲ್ಲಿ ವೈಯಕ್ತಿಕ ಆಟ ಆಡಿದರೆ ಮಾತ್ರ ಗೆಲುವು ಸಾಧ್ಯ. ಹೀಗಿರುವಾಗ ಈ ರೀತಿ ಆಡಿದರೆ ಬಿಗ್ ಬಾಸ್ ನಿಂದ ಅರ್ಧಕ್ಕೆ ಹೋಗುವ ಪರಿಸ್ಥಿತಿ ಬಂದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ

ಈ ಮೊದಲು ಅಶ್ವಿನಿ ಹಾಗೂ ಜಾನ್ವಿ ಅವರು ಒಟ್ಟಾಗಿ ಗಿಲ್ಲಿ ನಟನ ಮೇಲೆ ಎರಗಿ ಬೀಳಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಗಿಲ್ಲಿ ನಟ ಸರಿಯಾಗಿ ತಿರುಗೇಟು ಕೊಡಲು ಆರಂಭಿಸಿದರು. ಈ ಕಾರಣದಿಂದ ಈಗ ಇವರಿಬ್ಬರೂ ರಕ್ಷಿತಾ ಶೆಟ್ಟಿನ ಟಾರ್ಗೆಟ್ ಮಾಡಿದ್ದಾರೆ. ಅವರ ಮೇಲೆ ಎಗರಾಡುತ್ತಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ, ಬಗ್ಗಲೂ ಇಲ್ಲ

ನಮ್ರತಾ ಗೌಡ ತಪ್ಪು ಮಾಡಿದಾಗ ಸುದೀಪ್ ಅವರು ಕಿವಿಮಾತು ಹೇಳಿ ತಿದ್ದುವ ಪ್ರಯತ್ನ ಮಾಡಿದರು. ಸುದೀಪ್ ಅವರು ಜಾನ್ವಿಯನ್ನು ತಿದ್ದುವ ಕೆಲಸ ಮಾಡುತ್ತಾರಾದರೂ ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:34 am, ಶುಕ್ರ, 17 ಅಕ್ಟೋಬರ್ 25



Source link

Leave a Reply

Your email address will not be published. Required fields are marked *