ಸಂಬಳ ನೀಡದ ಹಿನ್ನೆಲೆ ಮನನೊಂದು ವಾಟರ್‌ಮ್ಯಾನ್ ಚಿಕ್ಕಸು ಆತ್ಮಹತ್ಯೆ
ಚಾಮರಾಜನಗರ, ಅಕ್ಟೋಬರ್ 17: ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಸಂಬಳ ನೀಡಿಲ್ಲವೆಂದು ಮನನೊಂದು ವಾಟರ್‌ಮ್ಯಾನ್ (ವಾಟರ್‌ಮ್ಯಾನ್) ಗ್ರಾ.ಪಂ. ಕಚೇರಿ ಬಾಗಿಲು ಬಳಿ ನೇಣಿಗೆ ಶರಣಾದ ಘಟನೆ ನಡೆದಿದೆ. ಮೃತರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಪಿಡಿಒಗಳಿಬ್ಬರ ಬಳಿಯ ವೇತನದ ಬೇಡಿಕೆಯಿಟ್ಟಾಗ ಗದರಿಸಿ ಕಳುಹಿಸುತ್ತಿದ್ದರೆ ವೇತನ ನೀಡಬೇಕೆಂದು ಆರೋಪಿಸಲಾಗಿದೆ. ಇದರಿಂದ ಮನನೊಂದು ವಾಟರ್ ಮ್ಯಾನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳಿಂದ ಸಂಬಳ ಕೊಡದೆ ಕಾಡುತ್ತಿರುವ ಗ್ರಾ.ಪಂ ಅಧ್ಯಕ್ಷೆ ಮತ್ತು ಪಿಡಿಓ
ಇಂದು ಬೆಳಗ್ಗೆ ಹೊಂಗನೂರು ಗ್ರಾಮ ಪಂಚಾಯಿತಿ ಬಳಿ ಬಂದಾಗ ವಾಟರ್ ಮ್ಯಾನ್ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಸು ನಾಯಕ (65) ಮೃತ ದುರ್ದೈವಿ. ಕಳೆದ 27 ತಿಂಗಳಿನಿಂದ ಸಂಬಳ ಸಿಗದೆ ಚಿಕ್ಕಸು ಬೇಸತ್ತು ಹೋಗಿದ್ದರು. ಚಿಕ್ಕಸುವಿಗೆ ಮಕ್ಕಳಿದ್ದರೂ ಅವರಿಂದ ಆರ್ಥಿಕ ನೆರವೇನೂ ಸಿಗಲಿದೆ. ಹೀಗಾಗಿ ತಮ್ಮ ಹೊಟ್ಟೆ ಪಾಡಿನ ಸಲುವಾಗಿ ಈ ಕೆಲಸ ಮಾಡಿಕೊಂಡಿದ್ದರು. ತಿಂಗಳ ಸಂಬಳ ಕೇವಲ 5 ಸಾವಿರ ರೂ.ಗಳಾದರೂ ಕಳೆದ 2 ವರ್ಷಗಳಿಂದ ಹರಸಾಹಸ ಮಾಡುವ ಪರಿಸ್ಥಿತಿ ಎದುರಾಗಿತ್ತು.
ಕಚೇರಿಯ ಬಾಗಿಲ ಮುಂದೆಯೇ ನೇಣಿಗೆ ಶರಣು
ಅನಾರೋಗ್ಯದಿಂದ ಬಳಲುತ್ತಿದ್ದ ಚಕ್ಕಸು, ಸಂಬಳಕ್ಕಾಗಿ ಎಷ್ಟು ಮನವಿ ಮಾಡಿಕೊಂಡರೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಮತ್ತು ಪಿಡಿಓ ರಾಮೇಗೌಡ ಚಿಕ್ಕಸು ಅವರನ್ನು ಗದರಿಸಿ ಕಳುಹಿಸಿದ್ದಾರೆ. ಇದರಿಂದ ಬೇಸತ್ತ ವಾಟರ್ ಮ್ಯಾನ್ ಚಿಕ್ಕಸು ಡೆತ್ ನೋಟ್ ಬರೆದಿಟ್ಟು, ಗ್ರಾಮ ಪಂಚಾಯಿತಿ ಕಚೇರಿ ಬಾಗಿಲಿನ ಮುಂದೆಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಈ ಕುರಿತು ಚಾಮರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.