Viral: 92ನೇ ವಯಸ್ಸಿನಲ್ಲಿ 37ನೇ ವಯಸ್ಸಿನ ಪತ್ನಿಯಿಂದ ಗಂಡು ಮಗು ಪಡೆದ ವೈದ್ಯ

Viral: 92ನೇ ವಯಸ್ಸಿನಲ್ಲಿ 37ನೇ ವಯಸ್ಸಿನ ಪತ್ನಿಯಿಂದ ಗಂಡು ಮಗು ಪಡೆದ ವೈದ್ಯ


ವರ್ಷಗಳು ಕಳೆದರೂ ಮಕ್ಕಳಿಲ್ಲ ಎಂಬ ಕೊರಗು ಇರುವ ಅದೆಷ್ಟೋ ದಂಪತಿಗಳು ಇದ್ದಾರೆ, ಆದರೆ ಮಕ್ಕಳಿಗಾಗಿ ಒಂದು ವಯಸ್ಸು ಇರುತ್ತದೆ. ಆ ವಯಸ್ಸು ಮೀರಿಯೂ ಪಡೆದರೆ ಅದು ಅಚ್ಚರಿ ಎಂದು ಕಾಣುವುದಿಲ್ಲ, ಅಬ್ಬಬ್ಬಾ ಅಂದ್ರೆ ಲೇಟಾಗಿ ಮಕ್ಕಳು ಮಾಡಿಕೊಂಡ್ರು ಎಂದು ಜನ ಮಾತನಾಡಿಕೊಳ್ಳಬಹುದು. ಆದರೆ ಸಾಯುವ ವಯಸ್ಸಿನಲ್ಲಿಯೂ ಮಗು ಮಾಡಿಕೊಂಡ್ರೆ, ಅದು ದೊಡ್ಡ ಪವಾಡವೇ ಸರಿ. ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ತನ್ನ 92 ನೇ ವಯಸ್ಸಿನಲ್ಲಿ (92 ವರ್ಷದ ವೈದ್ಯ) ವೈದ್ಯ ತಂದೆಯಾಗಿದ್ದಾರೆ. ಆಸ್ಟ್ರೇಲಿಯಾದ ವೈದ್ಯ ಜಾನ್ ಲೆವಿನ್ ತನ್ನ 37ನೇ ವಯಸ್ಸಿನ ಪತ್ನಿ ಯಾನ್ಯಿಂಗ್ ಲು. ಅವರಿಂದ ಮುದ್ದಾದ ಗಂಡು ಪಡೆದಿದ್ದಾರೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ.

ವೈದ್ಯ ಜಾನ್ ಲೆವಿನ್ ಅವರಿಗೆ 65 ವರ್ಷದ ಮಗನಿದ್ದು, ಅವರು ಮರಣಾಂತಿಕ ಆರೋಗ್ಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗನ ಸಾವಿನ 5 ತಿಂಗಳ ನಂತರ ದಂಪತಿಗಳು ಗ್ಯಾಬಿ ಎಂಬ ಗಂಡು ಪಡೆದಿದ್ದಾರೆ. ಡಾ. ಜಾನ್ ಲೆವಿನ್ ಅವರ ಮೊದಲ ಪತ್ನಿಯ ಮರಣದ ನಂತರ, ಯಾನ್ಯಿಂಗ್ ಲು ಅವರನ್ನು ಮದುವೆಯಾಗಿದ್ದಾರೆ. ಯಾನ್ಯಿಂಗ್ ಲು ಮೂಲತಃ ಚೀನಾದವರು. 2014 ರಲ್ಲಿ ವಿವಾಹವಾಗಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಜೀವನ ಎಷ್ಟು ಕಷ್ಟ ಗೊತ್ತೇ? ಕ್ಯಾಬ್ ಡ್ರೈವರಾಗಿ ಕೆಲಸ ಮಾಡೋ ಮಿಲಿಟರಿ ವೈದ್ಯನ ವ್ಯಥೆಯ ಬಿಚ್ಚಿಟ್ಟ ಬೆಂಗಳೂರು ಮಹಿಳೆ

ಮದುವೆಯಾದ ಮೊದಲು ತಮಗೆ ಮಕ್ಕಳು ಬೇಡ ಎಂದು ನಿರ್ಧರಿಸಿದ್ದರು. ಆದರೆ, ಲಾಕ್‌ಡೌನ್ ನಂತರ, ಅವರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ತನ್ನ ಪಿತ್ರಾತ ಆಸ್ತಿಗೆ ವಾರಸುದಾರ ಬೇಕು ಹಾಗೂ ಯಾನ್ಯಿಂಗ್ ಲು ಅವರಿಗೂ ಪಾಲುರ್ಜಿ ಎಂಬ ಕಾರಣಕ್ಕೆ ಮಗು ಬೇಕು ಎಂದು ನಿರ್ಧರಿಸಿ, ಯಾನ್ಯಿಂಗ್ ಐವಿಎಫ್ ತಂತ್ರಜ್ಞಾನದ ಸಹಾಯದಿಂದ ಗರ್ಭಿಣಿಯಾದರು. ಐವಿಎಫ್ ನ ಮೊದಲು ಪ್ರಯತ್ನದಲ್ಲಿ ಅವರು ಗರ್ಭ ಧರಿಸಿದರು. ಈಗ ಅವರ ಮನೆಯಲ್ಲಿ ಆ ಮಗುವಿನಿಂದ ಸಂತೋಷವಾಗಿದೆ. ಈ ಬಗ್ಗೆ ಸಮಾಜದಿಂದ ವಿಭಿನ್ನ ಟೀಕೆಗಳು ಬಂದವು, ಆದರೆ ಅದಕ್ಕೂ ಯೋಚನೆ ಮಾಡದೆ, ಮಗುವಿನೊಂದಿಗೆ ಸಂತೋಷವಾಗಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *