ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಘಟನೆ ಕಚೇರಿಗೆ ಶುಕ್ರವಾರ ಬೀಗ ಹಾಕಿದ. ಈ ವಿಚಾರವಾಗಿ ಶಾಸಕರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ಇತ್ತು. ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿನಗರದ ಕಚೇರಿಯಲ್ಲಿ ಪಟಾಕಿ ಹಂಚಲು ಮುನರತ್ನ ಬೆಂಬಲಿಗರು ಮುಂದಾಗಿದ್ದರು. ಪರವಾನಗಿ ಪಡೆದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರವೇ ಪಟಾಕಿ ಮಾರಾಟ ಮಾಡಬಹುದು, ಹಂಚಬಹುದು ಎಂಬ ನಿಯಮ ಇರುವ ಕಾರಣ ಠಾಣೆಗೆ ತೆರಳಿ ಕಚೇರಿಗೆ ಬೀಗ ಜಡಿದರು. ಈ ವೇಳೆ, ಮುನಿರತ್ನ ಕಚೇರಿ ಬಳಿಗೆ ಬಂದ ಮಹಿಳೆಯರು, ನಾವು ಪಟಾಕಿ ಹೊಡೆಯಬೇಕು. ಮುನಿರತ್ನ ಅವರು ಪಟಾಕಿ ಕೊಡಬೇಕು, ನಮ್ಮ ಮಕ್ಕಳು ಪಟಾಕಿ ಸಿಡಿಸಬೇಕು. ನಾವು ಬಡವರು, ಹಬ್ಬ ಮಾಡಲು ಬಿಡಿ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ