17, ಅಕ್ಟೋಬರ್ 17: ಡೊನಾಲ್ಡ್ ಟ್ರಂಪ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರ (ಪಿಎಂ ಮೋದಿ) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ರಾಹುಲ್ ಗಾಂಧಿ) ನೀಡಿದ್ದ ಹೇಳಿಕೆಗಳ ವಿರುದ್ಧ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಇಂದು ವಾಗ್ದಾಳಿ ನಡೆಸಿದರು. “ನಿಮ್ಮ ಐ ಹೇಟ್ ಇಂಡಿಯಾ ಪ್ರವಾಸಕ್ಕೆ ಹಿಂತಿರುಗಿ” ಎಂದು ಆಕೆ ರಾಹುಲ್ ಗಾಂಧಿಗೆ ಟ್ರೋಲ್ ಮಾಡಿದ್ದಾರೆ. ಪ್ರಧಾನಿ ಮೋದಿಯನ್ನು ಆಗಾಗ ಹೊಗಳುವ ಗಾಯಕಿ ಮೇರಿ ಮಿಲ್ಬೆನ್ ಈ ಬಾರಿಯೂ ಮೋದಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ನಿನ್ನೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಪ್ರಧಾನಿ ಮೋದಿ ಭಯಗೊಂಡಿದ್ದಾರೆ. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುತ್ತಾರೆ. ಭಾರತದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್ ನಿರ್ಧರಿಸಲು ಮತ್ತು ಘೋಷಿಸಲು ಮೋದಿ ಏಕೆ ಅವಕಾಶ ನೀಡುತ್ತಾರೆ? ಪದೇ ಪದೇ ಭಾರತವನ್ನು ನಿಂದಿಸುತ್ತಿದ್ದರೂ ಟ್ರಂಪ್ ಅವರೊಂದಿಗೆ ಮಾತನಾಡುತ್ತಾರೆ. ನಮ್ಮ ದೇಶದ ಹಣಕಾಸು ಸಚಿವರ ಅಮೆರಿಕ ಭೇಟಿಯನ್ನು ರದ್ದುಗೊಳಿಸಲಾಗಿದೆ. ಶರ್ಮ್ ಎಲ್-ಶೇಖ್ ಶೃಂಗಸಭೆಗೆ ಮೋದಿ ಹೋಗಲಿಲ್ಲ. ಇದರ ಅರ್ಥವೇನು? ಎಂದು ಪ್ರಶ್ನಿಸಿದ್ದರು.
ಪ್ರಧಾನಿ ಮೋದಿಗೆ ಟ್ರಂಪ್ ಭಯ.
1. ಭಾರತವು ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ನಿರ್ಧರಿಸಲು ಮತ್ತು ಘೋಷಿಸಲು ಟ್ರಂಪ್‌ಗೆ ಅವಕಾಶ ನೀಡುತ್ತದೆ. 2. ಪುನರಾವರ್ತಿತ ಸ್ನಬ್ಗಳ ಹೊರತಾಗಿಯೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಿರುತ್ತದೆ. 3. ಹಣಕಾಸು ಸಚಿವರ ಅಮೆರಿಕ ಭೇಟಿ ರದ್ದು. 4. ಸ್ಕಿಪ್ಡ್ ಶರ್ಮ್ ಎಲ್-ಶೇಖ್. 5. ಅವನಿಗೆ ವಿರುದ್ಧವಾಗಿಲ್ಲ…
– ರಾಹುಲ್ ಗಾಂಧಿ (@ರಾಹುಲ್ ಗಾಂಧಿ) ಅಕ್ಟೋಬರ್ 16, 2025
ಇದನ್ನೂ ಓದಿ: ನಿನ್ನೆ ಪ್ರಧಾನಿ ಮೋದಿ- ಟ್ರಂಪ್ ನಡುವೆ ಫೋನ್ ಮಾತುಕತೆ ನಡೆದಿಲ್ಲ; ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಭಾರತ ಸ್ಪಷ್ಟನೆ
ಇದನ್ನು ಸಮರ್ಥಿಸಿಕೊಂಡಿರುವ ಅಮೆರಿಕನ್ ಗಾಯಕಿ ಮೇರಿ, “ನೀವು ಹೇಳಿರುವುದು ತಪ್ಪು ತಪ್ಪು ರಾಹುಲ್ ಗಾಂಧಿಯವರೇ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಇದು ಅಮೆರಿಕದ ಅವರ ರಾಜತಾಂತ್ರಿಕತೆಯ ಕಾರ್ಯತಂತ್ರವಾಗಿದೆ.
ನೀವು ತಪ್ಪು, @ರಾಹುಲ್ ಗಾಂಧಿ. PM @ನರೇಂದ್ರ ಮೋದಿ ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ಅವರು ಸುದೀರ್ಘ ಆಟವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಯುಎಸ್ ಜೊತೆಗಿನ ಅವರ ರಾಜತಾಂತ್ರಿಕತೆಯು ಕಾರ್ಯತಂತ್ರವಾಗಿದೆ. ಕೇವಲ ಹಾಗೆ @POTUS ಅವರು ಯಾವಾಗಲೂ ಅಮೆರಿಕದ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಾರೆ, ಆದ್ದರಿಂದ ಪ್ರಧಾನಿ ಮೋದಿ ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ಮತ್ತು ನಾನು ಅದನ್ನು ಶ್ಲಾಘಿಸುತ್ತೇನೆ.… https://t.co/4p0HNRCAv2
– ಮೇರಿ ಮಿಲ್ಬೆನ್ (@MaryMillben) ಅಕ್ಟೋಬರ್ 17, 2025
ಇದಷ್ಟೇ ಅಲ್ಲದೆ, “ನೀವು ಈ ರೀತಿಯ ನಾಯಕತ್ವವನ್ನು ಸೇವಿಸುತ್ತೀರಿ ಎಂದು ನಾನು ನಿರೀಕ್ಷಿಸುವುದಿಲ್ಲ. ಏಕೆಂದರೆ ನೀವು ಭಾರತದ ಪ್ರಧಾನಿಯಾಗುವ ಕುಶಾಗ್ರಮತಿ ಇಲ್ಲ.
ಇದನ್ನೂ ಓದಿ: ತೈಲ ಖರೀದಿಸಿಲ್ಲ ಅಂತ ಟ್ರಂಪ್ ಗೆ ಮೋದಿ ಭರವಸೆ ಕೊಟ್ಟರಾ? ಇಲ್ಲಿದೆ ಭಾರತದ ನಿಲುವು
ನಟಿ ಮತ್ತು ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮೇರಿ ಮಿಲ್ಬೆನ್ ಜೂನ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ಅವರು ರೊನಾಲ್ಡ್ ರೇಗನ್ ಕಟ್ಟಡದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದರು. ನಂತರ ಅವರು ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದರು. ಈ ಕ್ಷಣವು ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ