Headlines

ಬಾಕ್ಸಾಫೀಸ್‌ನಲ್ಲಿ ದೈವ-ದೆವ್ವದ ಸಮರ: ರಿಷಭ್ – ರಶ್ಮಿಕಾ ಮುಖಾಮುಖಿ! ಈ ಸಮರದಲ್ಲಿ ಗೆಲ್ಲೋದ್ಯಾರು? | Kantara Chapter 1 Dominate Box Office Rashmika Mandanna Horror Comedy Thama Gow

ಬಾಕ್ಸಾಫೀಸ್‌ನಲ್ಲಿ ದೈವ-ದೆವ್ವದ ಸಮರ: ರಿಷಭ್ – ರಶ್ಮಿಕಾ ಮುಖಾಮುಖಿ! ಈ ಸಮರದಲ್ಲಿ ಗೆಲ್ಲೋದ್ಯಾರು? | Kantara Chapter 1 Dominate Box Office Rashmika Mandanna Horror Comedy Thama Gow


ಕಾಂತಾರ ಚಾಪ್ಟರ್-1 ಇನ್ನೂ ಬಾಕ್ಸಾಫೀಸ್​ನಲ್ಲಿ ಅಬ್ಬರಿಸ್ತಾ ಇದೆ. ಅದ್ರಲ್ಲೂ ಉತ್ತರ ಭಾರತದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಸಿನಿಮಾ ಕಲೆಕ್ಷನ್ ಎರಡನೇ ವಾರ ಕಳೆದರೂ ಕಡಿಮೆ ಆಗಿಲ್ಲ. ಇದೂವರೆಗೂ ಕಾಂತಾರ ಚಾಪ್ಟರ್-1 ಹಿಂದಿ ವರ್ಷನ್ 160ಕ್ಕೂ ಕೋಟಿಗೂ ಅಧಿಕ ಗಳಿಕೆ ಮಾಡಿದೆ.

ಸದ್ಯಕ್ಕೆ ಬಾಲಿವುಡ್​ನಲ್ಲಿ ಕಾಂತಾರ ಓಟದೆದ್ರು ಕಾಂಪಿಟ್ ಮಾಡುವಂಥಾ ಯಾವ ದೊಡ್ಡ ಚಿತ್ರವೂ ಇಲ್ಲ. ಆಧ್ರೆ ಇದೇ 21ನೇ ತಾರೀಖು ದೀಪಾವಳಿ ದಿನ ಮಲ್ಟಿಸ್ಟಾರರ್ ಮೂವಿ ಥಾಮಾ ರಿಲೀಸ್ ಆಗ್ತಾ ಇದೆ. ಈ ಸಿನಿಮಾ ಬಗ್ಗೆ ದೊಡ್ಡ ಕ್ರೇಜ್ ಸೃಷ್ಟಿಯಾಗಿದ್ದು ಇದು ಬಂದ್ರೆ ಕಾಂತಾರ ಓಟಕ್ಕೆ ಬ್ರೇಕ್ ಬೀಳಬಹುದು ಅಂತಿದ್ದಾರೆ ಬಿ ಟೌನ್ ಬಾಕ್ಸಾಫೀಸ್ ಪಂಡಿತರು.

ಥಾಮಾ ಸಿನಿಮಾ ರಶ್ಮಿಕಾ ನಾಯಕಿಯಾಗಿ ಮಿಂಚಿರುವ ಸಿನಿಮಾ. ಈ ಚಿತ್ರದಲ್ಲಿ ಬೇತಾಳವಾಗಿ ಮಿಂಚಿರುವ ರಶ್ಮಿಕಾ ಹಿಂದೆಂದಿಗಿಂತೂ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಥಾಮಾ ಹಾರರ್ ಕಾಮಿಡಿ ಚಿತ್ರವಾಗಿದ್ದು ಚಿತ್ರದ ಟೀಸರ್, ಸಾಂಗ್ಸ್ ಸೂಪರ್ ಹಿಟ್ ಆಗಿವೆ.ಅಸಲಿಗೆ ರಶ್ಮಿಕಾನ ಸಿನಿದುನಿಯಾಗೆ ಇಂಟ್ರಡ್ಯೂಸ್ ಮಾಡಿಸಿದ್ದೇ ರಿಷಬ್ ಶೆಟ್ಟಿ. ಶೆಟ್ಟರ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ನಟಿಸಿ ಸಿನಿದುನಿಯಾಗೆ ಬಂದಾಕೆ ರಶ್ಮಿಕಾ. ಒಂದು ಹಂತದಲ್ಲಿ ರಶ್ಮಿಕಾ ದೊಡ್ಡ ಲೆವೆಲ್​ಗೆ ಬೆಳೆದ ವೇಳೆ ತನ್ನನ್ನ ಪರಿಚಯಿಸಿದ ನಿರ್ಮಾಣ ಸಂಸ್ಥೆ ಬಗ್ಗೆ ಹೇಳೊದಕ್ಕೆ ಹಿಂದೇಟು ಹಾಕಿದ್ರು. ಇದಕ್ಕೆ ರಿಷಬ್ ಕೂಡ ಟಾಂಗ್ ಕೊಟ್ಟಿದ್ರು. ಸೋ ಇಬ್ಬರ ನಡುವೆ ಆಗಾಗ ಮುಸುಕಿನ ಗುದ್ದಾಟ ನಡೆದಿದೆ.

ಇದೀಗ ನೇರವಾಗೇ ಇಬ್ಬರ ನಡುವೆ ಬಾಕ್ಸಾಫೀಸ್ ಫೈಟ್ ನಡೆಯೋ ಟೈಂ ಬಂದಿದೆ. ಕಾಂತಾರ ದೈವದ ಕುರಿತ ಚಿತ್ರವಾದ್ರೆ ರಶ್ಮಿಕಾರ ಥಾಮಾ ದೆವ್ವದ ಸಿನಿಮಾ. ಸೋ ದೈವ – ದೆವ್ವದ ಕಥೆಗಳ ನಡುವೆ ಫೈಟ್ ನಡೆಯಲಿದೆ.ಥಾಮಾ ಮ್ಯಾಡಕ್ ಹಾರರ್ ಯುನಿವರ್ಸ್​​ನ ಹೊಸ ಹಾರರ್ ಕಾಮಿಡಿ ಸಿನಿಮಾ. ಚಿತ್ರದ ಬಗ್ಗೆ ಒಳ್ಳೆ ಟಾಕ್ ಇದೆ. ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡೊ ಸಾಧ್ಯತೆಯೂ ಇದೆ. ಆದ್ರೆ ಕಾಂತಾರ ಚಾಪ್ಟರ್ -1 ಈಗಾಗ್ಲೇ ಗೆದ್ದಾಗಿದೆ. ಈಗಾಗ್ಲೇ ಚಿತ್ರ ತೆರೆಕಂಡು ಎರಡು ವಾರ ಆಗಿರೋದ್ರಿಂದ ದೀಪಾವಳಿ ಟೈಂನಲ್ಲಿ ಕಾಂತಾರ ಓಟ ಡಲ್ ಆಗಬಹುದು. ಆದ್ರೆ ಥಾಮಾ ಕಾಂತಾರ ಚಾಪ್ಟರ್-1 ಗಳಿಕೆಯ ಹತ್ತಿರ ಬರೋದು ಕಷ್ಟ ಇದೆ.



Source link

Leave a Reply

Your email address will not be published. Required fields are marked *