Headlines

Rivaba Jadeja: ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ರವೀಂದ್ರ ಜಡೇಜಾ ಪತ್ನಿ

Rivaba Jadeja: ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ರವೀಂದ್ರ ಜಡೇಜಾ ಪತ್ನಿ


ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ (ರವೀಂದ್ರ ಜಡೇಜಾ) ಅವರಿಗೆ ಶುಕ್ರದೆಸೆ ಶುರುವಾಗಿದೆ. ಏಕೆಂದರೆ ವಿದಾಯದ ಅಂಚಿನಲ್ಲಿರುವ ರವೀಂದ್ರ ಜಡೇಜಾ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಉಪನಾಯಕತ್ವ ವಹಿಸಿಕೊಂಡಿದ್ದರು. ತಮಗೆ ಸಿಕ್ಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಜಡೇಜಾ, ತಂಡ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರ ಪತ್ನಿ ರಿವಾಬಾ ಸೋಲಂಕಿ ಜಡೇಜಾ (ರಿವಾಬಾ ಜಡೇಜಾ) ಅವರು ರಾಜಕೀಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದ್ದು, ಗುಜರಾತ್ ರಾಜ್ಯದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಿವಾಬಾ ಜಡೇಜಾಗೆ ಸಚಿವ ಸ್ಥಾನ

ವಾಸ್ತವವಾಗಿ ಅಕ್ಟೋಬರ್ 17 ರಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಎಲ್ಲಾ ಸಚಿವರು ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಂಪುಟ ಪುನರ್ರಚನೆಗಾಗಿ. ಆ ಪ್ರಕಾರ ರವೀಂದ್ರ ಜಡೇಜಾ ಅವರ ಮಡದಿ ರಿವಾಬಾ ಜಡೇಜಾ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ರಾಜಕೀಯಕ್ಕೆ ಬರುವ ಮೊದಲು ರಜಪೂತ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ರಿವಾಬಾ, 2019 ರ ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆ ಬಳಿಕ2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಿವಾಬಾ ಗೆಲುವು ಸಾಧಿಸಲು ಯಶಸ್ವಿಯಾಗಿದ್ದರು. ಮಾತೃಶಕ್ತಿ ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ, ಅವರು ಮಹಿಳಾ ಸಬಲೀಕರಣ ಮತ್ತು ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದೀಗ ಜಡ್ಡು ಅವರ ಪತ್ನಿಯಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕವೂ ರಿವಾಬಾ ಅದ್ಭುತ ಸಾಧನೆ ಮಾಡಿದ್ದಾರೆ.

ಜಡೇಜಾ, ರಿವಾಬಾ ವೈವಾಹಿಕ ಬದುಕು

ನವೆಂಬರ್ 2, 1990 ರಂದು ಜನಿಸಿದ ರಿವಾಬಾ ಅವರ ತಂದೆ ಹರ್ದೇವ್ ಸಿಂಗ್ ಸೋಲಂಕಿ ಒಬ್ಬ ಉದ್ಯಮಿ ಮತ್ತು ತಾಯಿ ಪ್ರಫುಲ್ಲಾ ಸೋಲಂಕಿ ಭಾರತೀಯ ಉದ್ಯೋಗಿಯಾಗಿದ್ದರು. ರಾಜ್‌ಕೋಟ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದ ರಿವಾಬಾ, ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ರಿವಾಬಾ ರವೀಂದ್ರ ಜಡೇಜಾ ಅವರ ಸಹೋದರಿ ನೈನಾಳ ಸ್ನೇಹಿತೆ. ಒಂದು ಪಾರ್ಟಿಯಲ್ಲಿ, ನೈನಾ ರಿವಾಬಾರನ್ನು ತನ್ನ ಸಹೋದರ ರವೀಂದ್ರ ಜಡೇಜಾಗೆ ಪರಿಚಯಿಸಿದರು. ಆ ಬಳಿಕ ಇವರಿಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಈ ಪ್ರಣಯ ಪಕ್ಷಿಗಳು 2016 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *