ಕುತಂತ್ರದಿಂದ ಜಗಳ ಮಾಡಲು ಬಂದ ಅಶ್ವಿನಿ ಗೌಡ, ಜಾಹ್ನವಿ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ

ಕುತಂತ್ರದಿಂದ ಜಗಳ ಮಾಡಲು ಬಂದ ಅಶ್ವಿನಿ ಗೌಡ, ಜಾಹ್ನವಿ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ


ಬಿಗ್ ಬಾಸ್ ಮನೆ ಅಶ್ವಿನಿ ಗೌಡ (ಅಶ್ವಿನಿ ಗೌಡ) ಮತ್ತು ಜಾಹ್ನವಿ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಇಬ್ಬರೂ ಸೇರಿ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದಾರೆ. ಅದಕ್ಕಾಗಿ ಅವರು ಸುಳ್ಳಿನ ದಾರಿ ತುಳಿದಿದ್ದಾರೆ. ತಾವೇ ಮಧ್ಯರಾತ್ರಿಯಲ್ಲಿ ಗೆಜ್ಜೆ ಶಬ್ದ ಮಾಡಿ ಅದನ್ನು ರಕ್ಷಿತಾ ಶೆಟ್ಟಿ (ರಕ್ಷಿತಾ ಶೆಟ್ಟಿ) ಮೇಲೆ ಹಾಕಲು ಅವರು ಪ್ರಯತ್ನಿಸಿದ್ದಾರೆ. ಆದರೆ ಅದನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಂಡಿಲ್ಲ. ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಜೊತೆಗೆ, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ (Bigg Boss Kannada Season 12) ಮನೆಯ ಬಹುತೇಕರು ರಕ್ಷಿತಾ ಶೆಟ್ಟಿಯ ಪರ ವಹಿಸಿದ್ದಾರೆ.

ರಕ್ಷಿತಾ ಶೆಟ್ಟಿ ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಆದರೆ ಕನ್ನಡದ ವಿಚಾರದಲ್ಲಿ ಅಶ್ವಿನಿ ಗೌಡ, ಜಾಹ್ನವಿ ಮೇಲುಗೈ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಜಗಳ ಮಾಡುವಾಗ ರಕ್ಷಿತಾ ಶೆಟ್ಟಿ ಅವರು ಕಿಂಚಿತ್ತೂ ಜಗ್ಗಲಿಲ್ಲ. ತಮ್ಮ ಮೇಲೆ ಒಟ್ಟಿಗೆ ಮುಗಿಬಿದ್ದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಜಗಳ ಆಡುವಾಗ ರಕ್ಷಿತಾ ಶೆಟ್ಟಿ ಅವರು ಸರಿಯಾದ ರೀತಿಯಲ್ಲಿ ಬಳಸಿದ್ದಾರೆ. ಆದರೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ತಲೆ ಬುಡ ಇಲ್ಲದೇ ಜಗಳ ಮಾಡಿದ್ದಾರೆ. ಈ ವಿಚಾರದಲ್ಲಿ ಯಾರು ಸರಿ, ಯಾರು ತಪ್ಪು ಎಂದು ತೀರ್ಮಾನ ಮಾಡಲು ಬಂದ ಕಾವ್ಯ ಶೈವ ಅವರನ್ನು ವಾಪಸ್ ಕಳಿಸಿದರು. ಯಾವುದೇ ಜಗಳದ ಸಂದರ್ಭದಲ್ಲಿ ರಕ್ಷಿತಾ ಪರವಾಗಿ ಯಾರೂ ಮಾತನಾಡಲು ಸಾಧ್ಯವಾಗಲಿಲ್ಲ. ಒಬ್ಬಂಟಿ ಆದರೂ ಕೂಡ ರಕ್ಷಿತಾ ಶೆಟ್ಟಿ ಅವರು ಖಡಕ್ ಆಗಿಯೇ ಜಗಳ ಮಾಡಿದ್ದಾರೆ.

ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕುತಂತ್ರ ನಡೆಸಿ ಗೆಜ್ಜೆ ಸದ್ದು ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಗಿಲ್ಲಿ ನಟ ಮತ್ತು ಚಂದ್ರಪ್ರಭ ಮುಂತಾದವರಿಗೆ ಸತ್ಯ ಗೊತ್ತಾಗಿದೆ. ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ತಮಗಿಂತ ತುಂಬ ಚಿಕ್ಕವಳಾದ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದು ಅನೇಕರು ಸರಿ ಎನಿಸಿಲ್ಲ. ಗಿಲ್ಲಿ ನಟ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುದೀಪ್ ಎದುರಲ್ಲಿ ಅಶ್ವಿನಿ ಗೌಡಗೆ ಡವ್ ರಾಣಿ ಎಂದ ಬಿಗ್ ಬಾಸ್ ಸ್ಪರ್ಧಿಗಳು

ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಕಂಟೆಂಟ್ ಕೊಡಬೇಕು ಎಂಬ ಕಾರಣಕ್ಕೆ ಹೀಗೆಲ್ಲಿದ್ದಾರೆ. ಆದರೆ ಅವರು ಆಯ್ಕೆ ಮಾಡಿಕೊಂಡಿರುವ ದಾರಿ ಸರಿ ಎನಿಸುತ್ತಿಲ್ಲ. ‘ಇನ್ಮೇಲೆ ನಾನು ಅಶ್ವಿನಿ ಗೌಡಗೆ ಗೌರವ ಕೊಡಲ್ಲ’ ಎಂದು ಗಿಲ್ಲ ನಟ ಹೇಳಿದ್ದಾರೆ. ಜೊತೆಗೆ, ವಾರಾಂತ್ಯದ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಸುದೀಪ್ ಅವರು ಯಾವ ರೀತಿ ಹೇಳಿದ್ದಾರೆ ಎಂದು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *