Weekly Horoscope 2025: ಅಕ್ಟೋಬರ್ 19ರಿಂದ 25ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

Weekly Horoscope 2025: ಅಕ್ಟೋಬರ್ 19ರಿಂದ 25ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?


ಮೇಷ ರಾಶಿ : ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ನಿಮ್ಮ ರಾಶಿಗೆ ರವಿಯ ದೃಷ್ಟಿ ಬರಲಿದೆ. ಶತ್ರುವಿನ ರಾಶಿ ಹಾಗೂ ನೀಚಸ್ಥಾನದಲ್ಲಿ ಇದ್ದುದರಿಂದ ಕಣ್ಣಿನ ತೊಂದರೆ, ಸ್ತ್ರೀಯರ ಜೊತೆ ಕಲಹ, ಅಧಿಕಾರ ಪಡೆಯುವ ಸಂದರ್ಭ ಬಂದರೆ ತಪ್ಪಿಹೋಗುವುದು ಇಂತಹವುಗಳು ಅಗಲಿವೆ. ನಿಮ್ಮ ದೌರ್ಬಲ್ಯವನ್ನು ನೀವು ಸಹಕಾರಿಯಾಗಿ ಮುನ್ನಡೆಯಬಹುದು. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸಿ. ವಿದೇಶದ ಜೊತೆ ವ್ಯಾಪಾರದ ಸಂಪರ್ಕವನ್ನು ಬೆಳೆಸಿಕೊಳ್ಳಿ. ನಿಮ್ಮ ಕೆಲಸದ ಬಗ್ಗೆ ಹಗುರವಾಗಿ ಮಾತನಾಡಿದರು. ಶುಭಸಮಯವನ್ನು ನಿರೀಕ್ಷೆಯಷ್ಟೇ ಮಾಡಬಹುದು.

ವೃಷಭ ರಾಶಿ :ರಾಶಿಯ ಎರಡನೇ ರಾಶಿಗೆ ಈ ವಾರ ರಾಶಿಯ ಅಧಿಪತಿ ನೀಚನ ಚಕ್ರದಲ್ಲಿ ಭೋಗದಲ್ಲಿ ವಿಕೃತಿಯನ್ನು ಇಷ್ಟಪಡುವಿರಿ. ಶತ್ರು ಪೀಡೆ, ಅದರ ಮೇಲೆಯೂ ಪ್ರಬಲವಾದ ಸ್ತ್ರೀ ನಿಮ್ಮ ಶತ್ರುವಾಗಿ ಬರಲಿರುವರು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಸುಲಭವಾಗಿ ದೊರೆಯುವುದನ್ನು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದಿರುವುದು. ವಾಹನ ಖರೀದಿಗೆ ನಿಮ್ಮ ಸಹಮತವಿರದು. ನಿಜವನ್ನು ಮುಚ್ಚಿಡಬೇಕಾಗುವುದು. ಉದ್ವೇಗದಲ್ಲಿ ಏನಾದರೂ ಹೇಳಿರಿ.

ಮಿಥುನ ರಾಶಿ :ಬುಧನ ಆಧಿಪತ್ಯದ ಈಬಲ ರಾಶಿಗೆ ಮೂರನೇ ವಾರದಲ್ಲಿ ಆರನೇ ರಾಶಿಯಲ್ಲಿ ಅಂದರೆ ಶತ್ರುವಿನ ರಾಶಿ ಅಥವಾ ಬಂಧುಗಳಿಂದ ಭೂಮಿ ವಿಚಾರಕ್ಕೆ ಶತ್ರುತ್ವ ನಿರ್ಮಾಣ ವಸ್ತು. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡಿ. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೆ ಕಾರ್ಯಪ್ರವೃತ್ತರಾಗುವಿರಿ. ಈ ವಾರದಲ್ಲಿ ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯುವುದು. ಹಳೆಯ ಹೂಡಿಕೆಯಿಂದ ಪ್ರಯೋಜನ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು. ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಕಷ್ಟಪಡಬೇಕಾದೀತು.

ಕರ್ಕಾಟಕ ರಾಶಿ :ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಉತ್ತಮ ಯೋಗ ಫಲ ನೀಡುವುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚು. ಎಲ್ಲವನ್ನೂ ಸಕಾರಾತ್ಮಕವಾಗಿಯೇ ನೋಡುವಿರಿ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸ ಮಾಡಬೇಕಾಗುವುದು. ಈ ವಾರದಲ್ಲಿ ಉಡುಗೊರೆಯಾಗಿ, ಧರಿಸಲು ನೂತನ ವಸ್ತ್ರಗಳನ್ನು ಖರೀದಿಸಿ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಾಣಿಕತೆಯು ಕೆಲವರಿಗೆ ಗೊತ್ತಾಗುವುದು. ಪ್ರಯಾಣ ಮಾಡುವ ಮನಸ್ಸಿದ್ದರೂ ಶರೀರಕ್ಕೆ ಅಸಾಧ್ಯ ಎನಿಸಬಹುದು. ಈ ವಾರ ನಿಮ್ಮದೇ ವಸ್ತುವು ನಿಮಗೆ ಹೊಸದರಂತೆ ತೋರುವುದು. ಧ್ಯಾನದಲ್ಲಿ ಮನಸ್ಸಿಡುವುದು ಬೇಕಾಗಬಹುದು.

ಸಿಂಹ ರಾಶಿ :ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರದವರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡರು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಈ ವಾರ ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ಜಾಡ್ಯದಿಂದ ಕಛೇರಿಗೆ ವಿಳಂಬವಾಗಿ ಹೋಗುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಅದರ ರಕ್ಷಣೆಯನ್ನು ಮಾಡಬೇಕಾಗುವುದು. ಈ ವಾರ ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗಲಿವೆ, ಪ್ರಾಮಾಣಿಕವಾಗಿ ಮುಂದುವರಿಸಿ. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ. ಹಳೆಯ ವಾಹನದಿಂದ ನಿಮಗೆ ಲಾಭವೇ ಆಗುವುದು.

ಕನ್ಯಾ ರಾಶಿ :ಬುಧನ ಅಧಿಪತ್ಯದ ಈ ರಾಶಿಗೆ ಈ ವಾರ ಕಲಾವಿದರಿಗೆ, ಸಾಹಿತ್ಯಾಸಕ್ತರಿಗೆ ದೂರ ಪ್ರಯಾಣ ಮಾಡಬೇಕಾಗುವುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಸಿಕೊಳ್ಳಿ. ವಾಹನ ಸಂಚಾರದಲ್ಲಿ ಆಗಲಿದೆ. ನಿದ್ರೆಯು ಸರಿಯಾಗದೆ ಆಗಾಗ ಮನಸ್ಸು ಭಾರ ಹೊತ್ತು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಹಿಂಸೆಪಡಬೇಕಾಗುವುದು. ಸಹೋದ್ಯೋಗಿಗಳ ಅಸಹಕಾರವು ಅವರ ಮೇಲೆ ದ್ವೇಷವನ್ನು ಉಂಟುಮಾಡಬಹುದು. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು. ಗುರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ. ಹಿರಿಯರ ಕಲಾವಿದರ ಭೇಟಿಯಾಗಲಿದೆ. ಈ ವಾರ ಅಂತೂ ನಿಮ್ಮ ಸಂಕಲ್ಪವು ಫಲಿಸಲಿದೆ ಖುಷಿಯಾಗುವುದು.

ತುಲಾ ರಾಶಿ :ಅಕ್ಟೋಬರ್ ತಿಂಗಳ ಈ ವಾರದಲ್ಲಿ ನಿಮಗೆ ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆ ಇರಲಿದೆ. ವಾರದಲ್ಲಿ ಆಗಾಗ ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ಪುಣ್ಯ ಸ್ಥಳಗಳಿಗೆ ಸಮಾನಮನಸ್ಕರ ಜೊತೆ ಓಡಾಟ ಮಾಡುವಿರಿ. ನಿಮ್ಮ ಬಗ್ಗೆ ಬಂಧುಗಳು ಮಾತನಾಡುವುದು ಗೊತ್ತಾದೀತು.

ವೃಶ್ಚಿಕ ರಾಶಿ :ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಈ ವಾರ ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಲಾಭವನ್ನು ಪಡೆಯುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸಿದೆ. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ದೇಹಪೀಡೆಯು ಮತ್ತೆ ಕಾಣಿಸಿಕೊಳ್ಳುವುದು. ಸಂಗಾತಿಯು ನಿಮ್ಮ ನಡೆಯನ್ನು ಅನುಮಾನಿಸಬಹುದು. ಭೂಮಿಯನ್ನು ಕೊಳ್ಳುವುದು ಇಂದು ಸುಲಭವಾಗದು. ಸಿಟ್ಟಿನಿಂದ ಉದ್ಯೋಗವನ್ನು ಬದಲಾಯಿಸಲು ಇರುವ ಉದ್ಯೋಗವನ್ನೇ ಬಿಟ್ಟುಬಿಡುವಿರಿ. ಈ ವಾರ ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ಪ್ರಯತ್ನ ಸಾಲದು. ಹುಡುಗಾಟದ ಮನೋಭಾವವು ಇರಲಿದೆ. ಸಂಗಾತಿಯ ಕೆಲವು ಸಂಗತಿಗಳು ನಿಮಗೆ ಇಷ್ಟವಾಗದು.

ಧನು ರಾಶಿ :ಗುರುವಿನ ಅಧಿಪತ್ಯದ ಈ ರಾಶಿಯವರಿಗೆ ಈ ವಾರ ದಾಂಪತ್ಯದಲ್ಲಿ ಪರಸ್ಪರ ಸದ್ಭಾವನೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗಿರಲಿದೆ. ನಿಮ್ಮ ಶ್ರಮವು ದುರುಪಯೋಗವಾದರೂ ಅದನ್ನು ಹೇಳಿಕೊಳ್ಳಲಸರಿ. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಈ ವಾರ ಹಿರಿಯರಿಗೆ ಇಷ್ಟವಾಗದ ಕಾರ್ಯ ಮಾಡಿ ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು. ಸಂಗಾತಿಯ ಜೊತೆ ಭಯವಿಲ್ಲದೇ ಆರಾಮಾಗಿ ಮಾತನಾಡಿದರು. ಕುಟುಂಬದ ಜೊತೆ ಕಳೆಯುವ ಕಾಲವು ನಿಮಗೆ ನೆನಪಿನಲ್ಲಿ ಉಳಿಯುವಂತೆ ಆಗುವುದು. ಕಾರ್ಯದಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳುವುದು ಆಗದು.

ಮಕರ ರಾಶಿ :ಹತ್ತನೇ ರಾಶಿಯವರಿಗೆ ಈ ವಾರ ಮನೆಯಲ್ಲಿ ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆಯಿದ್ದು ಅದನ್ನು ತೆಗೆದುಕೊಳ್ಳದಂತೆ ಮನೆಯವರು ಎಚ್ಚರ ವಹಿಸುವರು. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸ ಮಾಡಿಸಿಕೊಳ್ಳಿರಿ. ನಿಮಗೆ ಕಾರ್ಯದಲ್ಲಿ ನಿಷ್ಠೆ ಇಲ್ಲ ಎಂದು ತಿಳಿದುಕೊಳ್ಳಬಹುದು. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ. ನಿಮ್ಮ ನೌಕರರ ತಪ್ಪಿಗೆ ನೀವು ಉತ್ತರಿಸಬೇಕಾದೀತು. ತಂದೆಯ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ಹೆಚ್ಚು ಓಡಿಸಿ ಈ ವಾರ ದ್ವಿಚಕ್ರ ವಾಹನದ ಮೇಲೆ ಜಿಗುಪ್ಸೆ ಬಂದೀತು.

ಕುಂಭ ರಾಶಿ :ರಾಶಿ ಚಕ್ರದ ಈ ರಾಶಿಯವರಿಗೆ ಈ ವಾರ ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಮಾಡುವವರ ಬಗ್ಗೆ ಯೋಚಿಸಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಈ ವಾರ ಕುಟುಂಬದ ಪೋಷಣೆಯಲ್ಲಿ ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವಿದೆ. ಬೇಕೆಂದೇ ನಿಮ್ಮ ಮೇಲೆ ಒತ್ತಡ ತರಬಹುದು. ಅವರಂತೆ ಇರದಿದ್ದುದಕ್ಕೆ ಸ್ನೇಹಿತರು ನಿಮ್ಮನ್ನು ದೂರವಿಟ್ಟರು. ಈ ವಾರ ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು. ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ. ಅವರ ಮೇಲೆ ನಿಮ್ಮ ನಿಗಾ ಇರಲಿ. ಆಹಾರದ ಕಾರಣಕ್ಕೆ ಉದರಬಾಧೆ.

ಮೀನ ರಾಶಿ :ಗುರುವಿನ ಅಸಧಿಪತ್ಯದ ಈ ರಾಶಿಯವರಿಗೆ ಈ ವಾರ ನೌಕರರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಸಮಾನ ಚಿಂತನಶೀಲರ ನಡುವೆ ಸಖ್ಯ ವಸ್ತು. ಸಂಸ್ಥೆಯಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಹಳೆಯ ಕಲಹವನ್ನು ಸರಿ ಮಾಡಿಕೊಳ್ಳಲು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ಗ್ರಾಹಕರಿಂದ ನಿಮಗೆ ಅಸಮಾಧಾನವೂ ಆಗುವುದು. ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಈ ವಾರ ಅಂತೂ ಅಪಘಾತದಿಂದ ಉಂಟಾದ ಮಾನಸಿಕ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸದ ಛಲವಿರಲಿದೆ. ಯಾರದ್ದಾದರೂ ಸಣ್ಣ ಸಹಾಯವನ್ನೂ ನೀವು ನಿರೀಕ್ಷಿಸುವಿರಿ. ಸಕಾಲಕ್ಕೆ ಸಿಕ್ಕ ಸೌಕರ್ಯದಿಂದ ನಿಮ್ಮ ಕಾರ್ಯವು ಸಲೀಸು.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *