19-10-2025 ರಿಂದ 25-10-2025ರವರಗೆ ಅಕ್ಟೋಬರ್ ಮೂರನೇ ವಾರದಲ್ಲಿ ಬದಲಾವಣೆ, ಗ್ರಹಗಳ ಉದ್ಯೋಗದಲ್ಲಿಯೂ ಏಳುಪೇರುಗಳು ಸಹಜ. ಕೆಲವು ನಕಾರಾತ್ಮಕ ಅಂಶಗಳನ್ನು ಕೊಟ್ಟರೆ, ಈ ಕೆಲವು ಅಂಶಗಳನ್ನೇ ಕೊಟ್ಟು ನಿಮ್ಮ ದಿಕ್ಕನ್ನು ಬದಲಿಸಿ ಉನ್ನತ ಸ್ಥಾನಕ್ಕೆ ಒಯ್ಯುವವು. ಆರ್ಥಿಕ ಸಂಕಟವೂ ನಿಮ್ಮನ್ನು ಈ ಕಾರಣದಿಂದ ಬಾಧಿಸಲಿದೆ ಒತ್ತಡಕ್ಕೆ ಸಿಕ್ಕಿದ ಅನುಭವ. ಕಷ್ಟ ಮತ್ತು ಸುಖಗಳಲ್ಲಿ ಸಕಾರಾತ್ಮಕತೆ ಬಂದಾಗ ಯಾವ ಸ್ಥಿತಿಯನ್ನು ಸಂತೋಷದಿಂದ ಸ್ವೀಕರಿಸಲು ಸಾಧ್ಯ. ಈ ವಾರ ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನೇ ಕೊಡಲಿ.
ಮೇಷ ರಾಶಿ :ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಧೈರ್ಯ ಬರಲಿದೆ. ಯಾವುದನ್ನೂ ಆಲಸ್ಯದಿಂದಲೋ ಅಂಜಿಕೆಯಿಂದಲೋ ಮಾಡುವ ಪ್ರಸಕ್ತಿ ಇಲ್ಲ. ನೀವೇ ನಾಯಕತ್ವವನ್ನು ಪಡೆದುಕೊಳ್ಳಲು ಮುಂದಾಳುತ್ವ ವಹಿಸುವಿರಿ. ರಕ್ಷಣಾ ಕ್ಷೇತ್ರದವರಿಗೆ ಉತ್ತಮ ಅವಕಾಶ. ಉತ್ಸಾಹ ತರಿಸುವ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಮನಸ್ಸಿರುವುದು.
ವೃಷಭ ರಾಶಿ :ಈ ವಾರ ನಿಮಗೆ ಸ್ವಾಭಾವಿಕವಾದ ಸಹನೆಯಿದ್ದರೂ ಪರಿಸ್ಥಿತಿಗಳು ನಿಮ್ಮ ಕೈ ಮೀರುತ್ತದೆ. ಹಣಕಾಸಿನ ವ್ಯವಹಾರ ನಡೆಸುವವರಿಗೆ ಉದ್ವೇಗದಿಂದ ಎಲ್ಲವೂ ವ್ಯತ್ಯಾಸ ಆಗಲಿದೆ. ಕಲಾಭಿರುಚಿ ಇರುವವರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಕಲಾವಿದರಿಗೆ ವಿದೇಶಗಳಿಗೆ ಹೋಗುವ ಅವಕಾಶವೂ ಇದೆ. ಹೋಟೆಲ್ ಉದ್ಯಮ ವೃದ್ಧಿಯಾಗುವ ಸೂಚನೆ ನಿಮಗೆ ಗೊತ್ತಾಗುವುದು.
ಮಿಥುನ ರಾಶಿ :ಅಕ್ಟೋಬರ್ ತಿಂಗಳ ಈ ವಾರ ನಿಮ್ಮಲ್ಲಿ ಕಾರ್ಯ ಚುರುಕುತನವಿರಲಿದೆ. ನಿಮಗಿರುವ ಮಾತನಾಡುವ ಕಲೆಯನ್ನು ಸರಿಯಾದ ಮಾರ್ಗದಲ್ಲಿ ಪ್ರಯೋಗಿಸಿ. ಅದು ಯಶಸ್ಸು ಮತ್ತು ಸಂಪತ್ತು ಎರಡನ್ನೂ ತಂದುಕೊಡುತ್ತದೆ. ಶಿಕ್ಷಣದಲ್ಲಿ ಬೋಧನೆಗಿಂತ ಆಡಳಿತವನ್ನು ನೀವು ಸೂಕ್ತವೆನಿಸುವಿರಿ. ರಚನಾತ್ಮಕ ಕಾರ್ಯಗಳನ್ನು ಸಂಯೋಜಿಸಿ.
ಕರ್ಕಾಟಕ ರಾಶಿ :ಈ ತಿಂಗಳ ಮೂರನೇ ವಾರದಲ್ಲಿ ಈ ರಾಶಿಯವರಿಗೆ ಸಹೋದ್ಯೋಗಿಗಳ ಮೇಲೆ ಸಹಾನುಭೂತಿ ಬರಲಿದೆ. ಅವರ ಕಾರ್ಯಕ್ಕೆ ನಿಮ್ಮಿಂದಾಗುವ ಸಹಾಯವನ್ನು ಮಾಡಿರಿ. ಒತ್ತಡದ ಕಾರ್ಯಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ನೀಡುವುದು. ಪರರ ಭೂಮಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ಬರಲಿದೆ.
ಸಿಂಹ ರಾಶಿ :ಐದನೇ ರಾಶಿಯವರಿಗೆ ಈ ವಾರ ಯಾವುದಾದರೂ ಸಣ್ಣ ಸಮೂಹದ ನಾಯಕತ್ವ ಸಿಗಲಿದೆ ಕಷ್ಟಸಾಧ್ಯ. ಸರ್ಕಾರದ ಆಡಳಿತಾತ್ಮಕ ಹುದ್ದೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಈ ವಾರ ನೀವು ಹೋರಾಟದ ಕಾರ್ಯದಲ್ಲಿ ಭಾಗವಹಿಸಿ.
ಕನ್ಯಾ ರಾಶಿ :ರಾಶಿ ಚಕ್ರದ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಈ ಲೆಕ್ಕಪತ್ರಗಳ ಜೊಡಣೆ, ಪರಿಷ್ಕರಣ, ಸರ್ಕಾರಕ್ಕೆ ಸಲ್ಲಿಸಬೇಕಾದ ಕಾರ್ಯದಲ್ಲಿ ಚಾಲನೆ, ತಲ್ಲೀನತೆ ಇರುವುದು. ಔಷಧ ಮಾರಾಟದಲ್ಲಿ ಲಾಭದಾಯಕ. ಶೋಧಾತ್ಮಕ ವಿಚಾರದಲ್ಲಿ ಮಹತ್ತ್ವದ ಮುನ್ನಡೆ ಕಾಣಿಸಿಕೊಳ್ಳುವುದು. ಪ್ರತಿಸ್ಪರ್ಧೆಯಲ್ಲಿ ಗೆಲುವಾಗುವುದು.
ತುಲಾ ರಾಶಿ : ಏಳನೇ ರಾಶಿಗೆ ಈ ವಾರ ನ್ಯಾಯಾಲಯದಲ್ಲಿ ಗೆಲುವಿಗೆ ಪ್ರಯತ್ನ, ಉದ್ಯೋಗದಲ್ಲಿ ಹಾಗೂ ಕುಟುಂಬದಲ್ಲಿ ಅಸಮತೋಲನವಿರಲಿದೆ. ದೇಹಾಲಂಕಾರದ ಉದ್ಯಮಕ್ಕೆ ಆದಾಯ ಬರಲಿದೆ, ವಿಸ್ತರಿಸುವ ಯೋಚನೆ ಬರುವುದು. ಕಾನೂನಿನ ವಿಚಾರದಲ್ಲಿ ಎಡವುವಿರಿ. ಪ್ರಾಮಾಣಿಕ ಶ್ರಮದ ಕಾರಣ ನಿರ್ಮಾಣದ ಯೋಜನೆಗಳು ನಿಮ್ಮತ್ತ ಬರುವವು.
ವೃಶ್ಚಿಕ ರಾಶಿ : ಈ ವಾರ ನೀವು ರಹಸ್ಯವಾದ ಕಾರ್ಯಗಳನ್ನು ಮಾಡಲು ಅಥವಾ ರಹಸ್ಯ ಕಾರ್ಯಾಚರಣೆಯ ಭಾಗವಾಗಿರುವಿರಿ. ಸಂಶೋಧನೆಗೆ ಉತ್ತಮ ಬೆಂಬಲ ಸಿಗಲಿದೆ. ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡಿ. ಉದ್ಯೋಗದಲ್ಲಿ ಏಕಾಂಗಿಯಾಗಿ ಇರುವುದು ಬೇಡ. ಎಲ್ಲರ ಜೊತೆ ಸೇರಲು ಪ್ರಯತ್ನಿಸಿ.
ಧನು ರಾಶಿ : ಅಕ್ಟೋಬರ್ ತಿಂಗಳ ಈ ರಾಶಿಯವರಿಗೆ ಈ ವಾರ ಸಾಹಸ ಕಾರ್ಯಗಳು ಬಹಳ ಇಷ್ಟವಾಗಲಿವೆ. ಆದರೆ ಮುಂದಾಲೋಚನೆಯ ಕೊರತೆಯಿಂದ ಅನಾಹುತ ಮಾಡಿಕೊಂಡು ಸುಮ್ಮನಿರಬೇಕಾಯಿತು. ಸಂಸ್ಥೆಯ ಪ್ರತಿನಿಧಿಯಾಗಿ ಕಾರ್ಯವನ್ನು ಮಾಡುವ ಸಂದರ್ಭ ಒದಗುವುದು. ಆಡಳಿತಗಾರರಿಗೆ ನಿಯಂತ್ರಣ ಸುಲಭಕ್ಕೆ ಸಿಗದು.
ಮಕರ ರಾಶಿ : ರಾಶಿಯ ಹತ್ತನೇ ರಾಶಿಯವರಿಗೆ ಈ ವಾರ ಶಿಸ್ತಿನ ಪಾಠ ಚಕ್ರವಾಗಿ ಬೇಕಾಗುವುದು. ಎಲ್ಲಾ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಯಾವುದಾದರೂ ಹೇಗೆ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆ ಇರದು. ನಿಮ್ಮನ್ನು ಪರಿಷ್ಕೃತ ಮಾಡಿಕೊಳ್ಳಲು ಹಿಂಜರಿಯದೇ ಸನ್ನದ್ಧರಾಗಿ.
ಕುಂಭ ರಾಶಿ : ಅಕ್ಟೋಬರ್ ತಿಂಗಳ ಮೂರನೇ ವಾರ ಟೆಕ್ನಾಲಜಿಗೆ ಸಂಬಂಧಿಸಿದ ಕಾರ್ಯ ಮಾಡುವವರಿಗೆ ಹೊಸ ಯೋಜನೆಗಳು ಕೈ ಸೇರುತ್ತವೆ. ನೌಕರರಾಗಿದ್ದರೆ ಹೊಸ ಕೆಲಸದ ಆರಂಭ. ಸಾಮಾಜಿಕ ಸೇವೆಯಲ್ಲಿ ಭಾಗವಹಿಸುವಿರಿ. ನಿಮ್ಮ ಮೌಲ್ಯಗಳನ್ನು ಬಿಟ್ಟು ವ್ಯವಹಾರ ಮಾಡದೇ ಇರುವುದು ನಿಮ್ಮ ವಿಶೇಷಗುಣ.
ಮೀನ ರಾಶಿ :ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ವಿಶೇಷತೆ ಇರುತ್ತದೆ. ನಿಮ್ಮ ಆಲೋಚನೆಗಳು ಇತರರಿಗೆ ಚಿಂತಿಸಲು ಸಾಧ್ಯವಾಗದೇ ಇರುವ ರೀತಿಯಲ್ಲಿ ಇರಲಿದೆ. ಉತ್ತಮ ಕಲ್ಪನೆಗಳಿಂದ ಮೆಚ್ಚುಗೆ ಗಳಿಸುವಿರಿ. ಯಾವುದನ್ನು ತಿಳಿದುಕೊಳ್ಳಬೇಕು ಎಂಬ ಸ್ಪಷ್ಟತೆ ನಿಮಗರಿವುದು. ಅದನ್ನು ಮೈಗೂಡಿಸಿಕೊಳ್ಳುವ ಕಡೆ ನಿಮ್ಮ ವರ್ತನೆಗಳು ಇರುವುದು.
– ಲೋಹಿತ ಹೆಬ್ಬಾರ್ – 8762924271 (What’s app only)