Horoscope Today 18 October : ಇಂದು ಈ ರಾಶಿಯವರಿಗೆ ಮೋಹದ ಕಾರಣ ಬಹಳ ದುಃಖವಾಗಲಿದೆ

Horoscope Today 18 October : ಇಂದು ಈ ರಾಶಿಯವರಿಗೆ ಮೋಹದ ಕಾರಣ ಬಹಳ ದುಃಖವಾಗಲಿದೆ


ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಪರ್ಸನ್ಸ್ : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯ ಸೂರ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಶುಭ, – ಕರ್ಣ1 ನಾನು, ಸೂರ್ಯಾಸ್ತ – 05 – 57 ಸಂಜೆ, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:08 – 10:36, ಗುಳಿಕ ಕಾಲ 06:11 – 07:40, ಯಮಗಂಡ ಕಾಲ 13:33 – 15:51

ಮೇಷ ರಾಶಿ :

ಎಷ್ಟೇ ಒತ್ತಾಯ ಮಾಡಿದರೂ ಮನಸ್ಸಿಲ್ಲದ ಕಡೆ ಹೋಗಲಾರಿರಿ. ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವನ್ನು ದಿನಾಂತ್ಯದಲ್ಲಿ ಯಾರಾದರೂ ಮಾಡುತ್ತಾರೆ. ಆಕಸ್ಮಿಕವಾಗಿ ಅಲ್ಪ ಸಂಪತ್ತು ಬಂದರೂ ಅದು ನಷ್ಟವಾಗಿ ಹೋಗುವುದು. ದಾಂಪತ್ಯದಲ್ಲಿ ಒಲವು ಹೆಚ್ಚಾಗುವುದು. ತಾಳ್ಮೆಯನ್ನು ಕಳೆದುಕೊಳ್ಳುವಷ್ಟು ಕೋಪವು ಬೇಡ. ಹಲವು ಆದಾಯ ಮೂಲಗಳಲ್ಲಿ ಇಂದು ಒಂದು ಮಾತ್ರ ಉಳಿದುಕೊಳ್ಳುವುದು. ಸಂಗಾತಿಯ ಜೊತೆ ಸಲ್ಲಾಪವನ್ನು ಹೆಚ್ವು ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರವನ್ನು ಮಾಡಬೇಕಾಗಿ ಬಂದರೆ ಪಾರದರ್ಶಕತೆಯೇ ಮುಖ್ಯವಾಗಿ ಇಟ್ಟುಕೊಳ್ಳಿ. ಏನನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಯೋಚನೆ ನಿಮಗಿರಲಿ. ನಿಮ್ಮ ಉದ್ಯಮವನ್ನು ನಿಲ್ಲಿಸುವ ಚಿಂತನೆ ಮಾಡುವಿರಿ. ನಿಮ್ಮ ಆರ್ಥಿಕತೆಯನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ.

ವೃಷಭ ರಾಶಿ :

ಆದಾಯದಲ್ಲಿ ಮಾಡುವ ಪಾಲಿನಿಂದ ಅರ್ಥವ್ಯವಸ್ಥೆ ಸುಧಾರಿಸುವುದು. ಏನಾದರು ಹೊಸ ನಿರ್ಮಾಣ ನಿರ್ಮಾಣಮಾಡುವ ಆಸೆ ಬರುವುದು. ಇಂದು ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ನಿಮ್ಮ ಮನಸ್ಸು ಕಿರಿಕಿರಿಯಿಂದ ಹೊರಬರಲು ಸಮಯವನ್ನು ತೆಗೆದುಕೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯನ್ನು ಮುಟ್ಟಲು ಹೆಚ್ಚು ಶ್ರಮ ಹಾಗೂ ಸಮಯವನ್ನು ಕೊಡಬೇಕಾಗುವುದು. ಪ್ರಯಾಣವು ಸುಖಕರ ಎನಿಸಿದರೂ ಅನಂತರ ಅದರ ನೋವು ನಿಮಗೆ ಗೊತ್ತಾಗುವುದು. ಉದ್ಯೋಗದ ದಾಹ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವಿರಿ. ಸಂಗಾತಿಯ ಮಾತುಗಳು ನಿಮಗೆ ಮನಸ್ಸಿಗೆ ನಾಟುವುದು. ಅಸಂಬದ್ಧ ಮಾತುಗಳನ್ನು ಕಡಿಮೆ ಮಾಡಿ. ಕೇಳಿದಷ್ಟಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬದಲಾವಣೆ ಅನಿರೀಕ್ಷಿತವಾದರೂ ಯೋಗ್ಯವೇ.

ಮಿಥುನ ರಾಶಿ :

ನಿರುದ್ಯೋಗಿಗಳಿಂದ ಉದ್ಯೋಗಕ್ಕೆ ಗಂಭೀರ ಹುಡುಕಾಟ. ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿ ಸ್ಥಳದ ಅನ್ವೇಷಣೆ ಮಾಡುವಿರಿ. ಹೂಡಿಕೆಯನ್ನು ಮಾಡುವ ವಿಚಾರವು ನಿಮ್ಮಲ್ಲಿ ಬಲವಾಗಿ ಇರುವುದು. ಅದೃಷ್ಟವು ಇಂದು ಕೈಕೊಡಬಹುದು. ಅಧಿಕ ಶ್ರಮವಿದ್ದರೂ ಫಲವು ಮಾತ್ರ ಅಲ್ಪವೇ ಸಿಗುವುದು. ದೂರ ಪ್ರಯಾಣದಿಂದ ಪ್ರಯಾಸವಾಗುವುದು. ಇಂದಿನ ನಿಮ್ಮ ಆಲೋಚನೆಗಳಿಗೆ ಹಲವರಿಂದ ಮಾನ್ಯತೆ ಪಡೆಯುವುದು. ದೃಷ್ಟಿ ದೋಷವು ಕಾಣಿಸಿಕೊಳ್ಳಬಹುದು. ಸ್ಥಾನಮಾನದ ಆಕಾಂಕ್ಷೆ ಅಧಿಕವಾಗುವುದು. ಹೆಚ್ಚಿನ ಉತ್ಸಾಹದಿಂದ ಇರುವ ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಸ್ನೇಹಸಂಬಂಧಗಳು ದೂರವಾಗುತ್ತವೆ. ಕೃಷಿಯಲ್ಲಿ ಅಧಿಕ ಆದಾಯವನ್ನು ಪಡೆಯಬೇಕು. ನೀರಿನಲ್ಲಿ ಹೆಚ್ಚು ಸಮಯ ಕಳೆಯುವಿರಿ. ಮಕ್ಕಳು ಕೇಳಿದರೆಂದು ಏನನ್ನಾದರೂ ಮಾಡುವುದು ಸರಿಯಾಗದು.

ಕರ್ಕಾಟಕ ರಾಶಿ :

ಒಡಹುಟ್ಟಿದವರೇ ವಿವಾದವನ್ನು ದೊಡ್ಡ ಮಾಡಬಹುದು. ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಹಣದ ವಿಷಯದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮಗೆ ಕಷ್ಟವೆನಿಸಬಹುದು. ನಿಮ್ಮವರ ಅವಶ್ಯಕತೆಗಳನ್ನು ಬಳಸುತ್ತಾರೆ. ರಮಣೀಯತೆಯು ನಿಮಗೆ ಇಷ್ಟವಾಗುವುದು. ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಮೂಡುತ್ತವೆ ಅದನ್ನು ಸರಿ ಮಾಡಿಕೊಳ್ಳಲು ಬಯಸುವಿರಿ. ಅನಗತ್ಯ ಕಾರ್ಯಗಳನ್ನು ಮಾಡಲು ಕೊಡುವ ಬದಲು ಸದುಪಯೋಗವಾಗುವಂತೆ ಇರಲಿ. ತುರ್ತು ಕಾರ್ಯದ ಕಾರಣಕ್ಕೆ ಪ್ರಯಾಣವನ್ನು ಮಾಡುವಿರಿ. ನೀವು ಆಡಿದ ಮಾತು ನಿಜವೇ ಆಗಿದ್ದರೂ ಕೂಡ ನಂಬುವುದು ಕಷ್ಟವಾದೀತು. ಕಲಾಕ್ಷೇತ್ರದವರಿಗೆ ಒಮ್ಮೆಲೆ ಒತ್ತಡ ಬರುವುದು ಕಷ್ಟ. ದೈವ ಬಲವನ್ನು ನಂಬಿ ನೀವು ಕಾರ್ಯವನ್ನು ಮಾಡುತ್ತೀರಿ. ನಿಮ್ಮ ಸ್ವಂತ ಕೆಲಸಕ್ಕಾಗಿ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರುವಿರಿ. ಸ್ನೇಹಿತರ ಜೊತೆ ಎಲ್ಲಾದರೂ ಹೋಗಬೇಕು ಎನಿಸುತ್ತದೆ. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.

ಸಿಂಹ ರಾಶಿ :

ಬಂದ ಹಣವು ವಿಳಂಬವಾದರೂ ಬೇಕಾದಷ್ಟು ಸಮಯಕ್ಕೆ ಸಿಗಲಿದೆ. ಇಂದಿನ ದಿನವನ್ನು ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳಬಹುದು. ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುವುದು ಬೇಡ. ತಂದೆಯ ವಿಚಾರದಲ್ಲಿ ನಿಮಗೆ ಅಸಮಾಧನ ಇರಲಿದೆ ಅವರ ಮೇಲೆ ಕೋಪಗೊಳ್ಳುವಿರಿ. ನಿಮ್ಮ ತನವನ್ನು ಬಿಟ್ಟು ನೀವು ಹೊಂದಾಣಿಕೆ ಮಾಡಿಕೊಳ್ಳಲಾರಿರಿ. ಯಾರ ಸಹಾಯವನ್ನೂ ಪಡೆಯದೆ ನಿಮ್ಮ ಕಾರ್ಯವನ್ನು ನಿಧಾನವಾಗಿ ಮಾಡಿರಿ. ಶುಭ ಸಮಾರಂಭಗಳಿಗೆ ಭೇಟಿ ನೀಡುವ ಸಂದರ್ಭ ಬರಬಹುದು. ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ಆಸಕ್ತಿಯು ಇರದು. ಸರಿಯಾದ ವ್ಯವಸ್ಥೆಯನ್ನು ಹಾಳುಮಾಡಿಕೊಳ್ಳಿ. ನಿರುದ್ಯೋಗಿಗಳು ಉದ್ಯೋಗದ ಅನ್ವೇಷಣೆಯನ್ನು ಮಾಡುತ್ತಾರೆ. ನಿಮ್ಮದಾದ ಕೆಲವು ವಿಚಾರಗಳನ್ನು ಅನ್ಯರ ಮೇಲೆ ಹೇರುವಿರಿ. ಅಮೂಲ್ಯ ವಸ್ತುವೊಂದು ಕಣ್ಮರೆಯಾಗಬಹುದು. ಅನೌಪಚಾರಿಕವಾಗಿ ಅಧಿಕಾರಿಗಳ ಜೊತೆ ನಡೆದುಕೊಳ್ಳುವಿರಿ.

ಕನ್ಯಾ ರಾಶಿ :

ಇಂದು ನೀವು ಬಯಸಿದ ಕಡೆಗೆ ನಿಮಗೆ ಹೋಗಲಾಗದು. ಬೇಸರವನ್ನು ಕಳೆದುಕೊಳ್ಳಲಾಗದು. ಸಕಾರಾತ್ಮಕ ಯೋಚನೆಯೇ ಬಂಧನವನ್ನು ಗಟ್ಟಿಯಾಗಿಸುವುದು. ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಮಾನಸಿಕವಾಗಿ ಸಬಲರಾಗುವ ಅವಶ್ಯಕತೆ ಇರಲಿದೆ. ಸ್ವಂತ ಉದ್ಯಮ ಮಾಡುವವರಿಗೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾಗುವುದು. ಸ್ತ್ರೀಯರ ಜೊತೆ ನಿಮ್ಮ ವ್ಯವಹಾರವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಸಾರದ ಹೊಣೆಗಾರಿಕೆಯನ್ನು ಕಷ್ಟದಿಂದ ನಿರ್ವಹಿಸುವಿರಿ. ವೃತ್ತಿಯ ಸ್ಥಳದಲ್ಲಿ ನಿಮಗೆ ಸಿಟ್ಟು ತರಿಸುವ ಸಂಗತಿಗಳು ನಡೆಯಬಹುದು. ಪಿತ್ರಾರ್ಜಿತ ಆಸ್ತಿಯು ನಿಮ್ಮ ಕೈ ಸೇರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ವಿಷಯಕ್ಕೆ ತಯಾರಿ ಆರಂಭವಾಗಲಿದೆ. ತಾಳ್ಮೆಯನ್ನು ಇಟ್ಟುಕೊಳ್ಳುವುದು ಅಗತ್ಯವಾಗಿದೆ. ಸಮಯ ಸರಿದಾಗ ಎಲ್ಲವೂ ಅರಿವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು. ವಾಹನ ಖರೀದಿಯಿಂದ ನಿಮಗೆ ಚಿಂತೆ ಆರಂಭವಾಗುವುದು.

ತುಲಾ ರಾಶಿ :

ವಿಶೇಷ ಭತ್ಯೆಯು ಖಾಸಗಿ ವಲಯದಲ್ಲಿ ನಿಮಗೆ ಸಿಗುವುದು. ನಿಮ್ಮ ಸಹಾಯವು ಕೆಲವರ’ ಸಂತೋಷಕ್ಕೆ ಕಾರಣವಾಗುವುದು. ಇಂದು ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಕಸಿದುಕೊಳ್ಳಬಹುದು. ನಿಮ್ಮ ಕಡೆಗಣಿಸುತ್ತಿರುವುದು ನಿಮಗೆ ಗೊತ್ತಾಗಿ ಬೇಸರವಾಗುವುದು. ಸ್ನೇಹಿತರಿಂದ ನೀವು ಸಹಾಯವನ್ನು ಬಯಸುವಿರಿ. ಕೆಲಸದ ಕೆಲಸಕ್ಕಾಗಿ ಓಡಾಟವು ಇರಲಿದೆ. ದಾಂಪತ್ಯದ ಸಾಮರಸ್ಯವನ್ನು ನೀವು ಉಳಿಸಿಕೊಳ್ಳಿ. ನಿಮ್ಮದಲ್ಲದ ಕೆಲಸವು ನಿಮಗೇ ಬರಬಹುದು. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಹೋದ್ಯೋಗಿಗಳ ಸಹವಾಸದಿಂದ ಕೆಟ್ಟ ಅಭ್ಯಾಸವನ್ನು ಕಲಿಯುವಿರಿ. ಹೂಡಿಕೆಗೆ ಬೇರೆ ಕೆಲವು ದಾರಿಗಳನ್ನು ಕಾಣಬಹುದು. ಓದಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ. ತಂದೆಯ ಜೊತೆ ಕಲಹವಾಗಿ ಮನೆಯಿಂದ ದೂರವಿದೆ. ನಿಮ್ಮ ಮಾತುಗಳು ಕೆಲವರಿಗೆ ಇಷ್ಟವಾಗದೇ ಹೋಗುವುದು. ಪ್ರೇಮವನ್ನು ನಿಭಾಯಿಸುವುದು ಕಷ್ಟವಾಗುವುದು. ಪ್ರಿಯವಾದ ವಸ್ತುವನ್ನು ಪಡೆಯಲು ಹಣದ ಅಭಾವವಿದೆ.

ವೃಶ್ಚಿಕ ರಾಶಿ :

ಉದ್ಯಮಿಗಳು ಮತ್ತು ನೌಕರರ ನಡುವೆ ಮನಸ್ತಾಪ ಅಧಿಕವಾಗುವುದು. ಒಳ್ಳೆಯ ಕಾರ್ಯಗಳು ನಿಮ್ಮನ್ನು ಕಾಪಾಡಬಹುದು. ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಅಧಿಕಾರದಿಂದ ನಿಮ್ಮ ವರ್ತನೆಯು ಬದಲಾಗಬಹುದು. ನೌಕರರ ಬಗ್ಗೆ ನಿಮಗೆ ಅಸಮಾಧಾನವಿದೆ. ಸಂತೋಷವನ್ನು ನೀವು ಹಂಚಿಕೊಂಡಿರಿ. ನಿಮ್ಮ ಕಾರ್ಯಸಾಧನೆಗೆ ಯಾರನ್ನಾದರೂ ಬಳಸಿಕೊಳ್ಳಿರಿ. ನಿಮ್ಮ ಕೆಲಸಗಳಿಗೆ ನಿಗದಿತ ಸಮಯವನ್ನು ಕೊಡುವುದು ಮುಖ್ಯವಾಗುತ್ತದೆ. ಆಯ್ಕೆಗಳು ನಿಮ್ಮನ್ನು ಗೊಂದಲಕ್ಕೆ ದೂಡಬಹುದು. ಖರೀದಿಸಿದ ಭೂಮಿಯನ್ನು ಆರ್ಥಿಕ ಹೊರೆಯ ಕಾರಣಕ್ಕೆ ಮಾರುವಿರಿ. ಸಂಗಾತಿಯ ವರ್ತನೆಯ ಬಗ್ಗೆ ನಿಮಗೆ ಹೆಚ್ಚು ಬೇಸರವಾಗುತ್ತದೆ. ಹಣದ ವಿಚಾರವನ್ನು ಇಂದು ಹೆಚ್ಚು ಮಾಡುವಿರಿ. ಧಾರ್ಮಿಕ ಆಚರಣೆಯಲ್ಲಿ ಸ್ವಲ್ಪ ತೊಡಗುವಿರಿ. ನಿಮ್ಮ ಸ್ವಭಾವವನ್ನು ಬಿಟ್ಟು ಎಲ್ಲರ ಜೊತೆ ಹೊಂದಾಣಿಕೆಯಿಂದ ಇರಬೇಕಾಗುವುದು ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುತ್ತದೆ.

ಧನು ರಾಶಿ :

ಸಹೋದ್ಯೋಗಿಗೆ ಗೊತ್ತಿಲ್ಲದೇ ಅಸಂಬದ್ಧ ಮಾಹಿತಿ ಕೊಡುವಿರಿ. ಆಂತರಿಕ ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿಯಾಗಿದೆ. ನಿಮ್ಮ ಉದ್ಯೋಗವು ಮೇಲಿರುವ ದೀಪದಂತೆ ಇರುವುದು. ನಿಮ್ಮ ಸಾಮಾಜಿಕ ಕಾರ್ಯದಲ್ಲಿ ತೊಡಕುಗಳು ಬರಬಹುದು. ಆರೋಗ್ಯದ ಸಮಸ್ಯೆಯು ಗಂಭೀರವಾಗಿರಲಿದೆ. ನಿಮ್ಮ ಇಷ್ಟದವರ ಭೇಟೆಯಿಂದ ಖುಷಿಯಾಗಲಿದೆ. ಕಡಿಮೆ ಖರ್ಚಾದರೂ ದೈಹಿಕ ಶ್ರಮವು ಹೆಚ್ಚಾಗುವುದು. ಸರ್ಕಾರಿ ಉದ್ಯೋಗವನ್ನು ಮಾಡುತ್ತಿರುವ ಒತ್ತಡವು ನಿಮಗೆ ಅಧಿಕ ಪ್ರದರ್ಶನ. ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಲು ಹೆಚ್ಚು ಹಣವನ್ನು ಖರ್ಚುಮಾಡುವಿರಿ. ಸೋಮಾರಿತನದ ವಿಳಂಬ ಮಾಡುವುದು ಬೇಡ. ದುಸ್ಸಾಧ್ಯವಾದ ಕೆಲಸಗಳಿಗೆ ನೀವು ಪ್ರಯತ್ನಶೀಲರಾಗುವುದು ಬೇಡ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸುತ್ತಾರೆ. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು.

ಮಕರ ರಾಶಿ :

ಸಮಯ ಪಾಲನೆಗೆ ಕೊಡುವ ಮಹತ್ತ್ವಕ್ಕೆ ಸೂಕ್ತ ಬಹುಮಾನ. ಇಂದಿನ ನಿಮ್ಮ ತೀರ್ಮಾನವು ಯೋಗ್ಯವಾಗಿ ಇರುವುದು. ನೀವು ಇಂದು ಅನಗತ್ಯವಾದ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುತ್ತದೆ. ನಿಮಗೆ ಅಸಾಧ್ಯ ಎಂದು ಗೊತ್ತಿದ್ದರೂ ಬೇರೆಯವರ ಒತ್ತಾಯಕ್ಕೆ ಕೆಲಸ ಮಾಡಿರಿ. ನಿಮ್ಮ ನೈಜ ಸ್ವಭಾವವು ನಿಮಗೆ ತಿಳಿಯಲಿದೆ. ನಿಮ್ಮ ಅಭಿಪ್ರಾಯವನ್ನು ತಿಳಿಸಲು ನಿಮಗೆ ಯಾವ ಅಡ್ಡಿಯೂ ಇರುವುದಿಲ್ಲ. ಕುಟುಂಬದ ಜೊತೆ ಕಳೆಯಲು ಇಚ್ಛಿಸಿದರೂ ಕೆಲಸಕ್ಕೆ ತೆರಳಬೇಕಾದ ಸ್ಥಿತಿ ಇರುವುದು. ಆದಾಯದ ಬಗ್ಗೆ ನಿಮಗೆ ಅಸಮಧಾನವು ಇರಲಿದೆ. ಆಕ್ರಮಣಕಾರಿ ಭಾಷಣದಿಂದ ತೊಂದರೆಗೆ ಸಿಕ್ಕಿಬೀಳುವಿರಿ. ವಿದ್ಯಾಭ್ಯಾಸದಲ್ಲಿ ನೀವು ಅಂದುಕೊಂಡಂತೆ ಆಗದು. ಯಾರ ವಿಚಾರಕ್ಕೆ ನೀವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ನಿದ್ರೆಯಲ್ಲಿ ದುಃಸ್ವಪ್ನಗಳು ನಿಮ್ಮ ಆಲೋಚನೆಯ ದಿಕ್ಕನ್ನು ತಪ್ಪಿಸಬಹುದು. ಸಂಗಾತಿಯ ಜೊತೆ ವಿಹಾರವನ್ನು ಮಾಡುವಿರಿ.

ಕುಂಭ ರಾಶಿ :

ದೈಹಿಕ ಸಮಸ್ಯೆಗೆ ಪರಿಹಾರ ಗೊತ್ತಾಗಲಿದೆ. ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಪ್ರಾರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತುಗಳು ಬಹಳ ಇರಲಿ. ಭವಿಷ್ಯದ ಬಗ್ಗೆ ನಿಮಗೆ ಮಾರ್ಗದರ್ಶನ ಮಾಡಬಹುದು. ಒತ್ತಡವನ್ನು ನೀವಾಗಿಯೇ ತಂದುಕೊಳ್ಳುತ್ತಿದ್ದೇನೆ. ಉದ್ಯೋಗಕ್ಕೆ ಹತ್ತಾರು ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮರಿಗೆ ನೀವು ಬೆಲೆಯನ್ನು ಕೊಡುವಿರಿ. ಕಣ್ತಪ್ಪಿನ ದೋಷದಿಂದ ಎಚ್ಚರಿಕೆಯಿಂದ ಇರಬೇಕು. ಸಾಧ್ಯವಾದಷ್ಟು ಎಲ್ಲರ ಜೊತೆ ಬೆರೆಯುವ ಮನಃಸ್ಥಿತಿಯನ್ನು ಇಟ್ಟುಕೊಳ್ಳಿ. ನಿಮ್ಮ ಮೂಗಿನ ನೇರಕ್ಕೆ ಆಗಬೇಕು ಎಲ್ಲವು ಎಂಬ ಧೋರಣೆ ಸರಿಯಾಗದು. ಪರಿಣಾಮಕಾರಿಯಾದ ಯೋಜನೆ ಸಫಲಗೊಳಿಸುವಿರಿ. ಸ್ವೇಚ್ಛೆಯಿಂದ ಇಂದಿನ ದಿನವನ್ನು ಕಳೆಯಿರಿ. ಅವಶ್ಯಕತೆ ಇರುವ ವಸ್ತುಗಳನ್ನು ಯಾರಿಂದಲೂ ಕೇಳಿ ಪಡೆಯಲಾರಿರಿ. ಮಕ್ಕಳ ಮಾತುಗಳು ನಿಮಗೆ ಹಾಸ್ಯದಂತೆ ಕಾಣಿಸುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಚುಚ್ಚಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಹುಡುಕುವಿರಿ.

ಮೀನ ರಾಶಿ :

ಪ್ರಯಾಣದಲ್ಲಿ ಉಂಟಾದ ತಡೆಗೆ ಅನ್ಯ ಮಾರ್ಗವನ್ನು ಆಶ್ರಯಿಸುವಿರಿ. ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳಿ. ಕಲೆಯಲ್ಲಿ ಅಭಿರುಚಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಸರಿಯಿದ್ದರೂ ನೆಮ್ಮದಿಯು ಸರಿಯಾಗಿರದು. ನಿಮ್ಮ ವರ್ತನೆಯನ್ನು ಕೈ ಮಾಡಿ ತೋರಿಸಬಹುದು. ಅತಿಯಾದ ಮಾತು ಇತರರಿಗೆ ತೊಂದರೆ ಕೊಡಬಹುದು. ಹಿತಶತ್ರುಗಳ ಪೀಡೆಯು ಉತ್ಸಾಹವು ಕುಗ್ಗಬಹುದು ಅಥವಾ ಅನ್ಯ ಕೆಲಸಗಳನ್ನು ಮಾಡಲು ಅವಕಾಶಗಳನ್ನು ಕೊಡದೆ ಹೋಗಬಹುದು. ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದೆ. ನಷ್ಟವನ್ನು ಭರಿಸಿಕೊಳ್ಳಲಾಗದು. ಬರಹಗಾರರಿಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಬಹುದು. ಯಾವ ವಿಚಾರಗಳಿಗೆ ಅತಿಯಾದ ಚಿಂತೆಯ ಅವಶ್ಯಕತೆ ಇರದು. ನಂಬಿಕೆ ಇಡುವುದಾದರೆ ಪೂರ್ಣವಾಗಿ ಇಡಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು.

– ಲೋಹಿತ ಹೆಬ್ಬಾರ್ – 8762924271 (ಏನು ಅಪ್ಲಿಕೇಶನ್ ಮಾತ್ರ)



Source link

Leave a Reply

Your email address will not be published. Required fields are marked *