ಚಪ್ಪಲಿನ ಶಾಲಲ್ಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್

ಚಪ್ಪಲಿನ ಶಾಲಲ್ಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್


ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಹಾರಾಟ ಜೋರಾಗಿದೆ. ಇವರಿಬ್ಬರೂ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ರಕ್ಷಿತಾ ಅವರಿಗೆ ತಮ್ಮ ಮಾತುಗಳಿಂದ ಕಿರುಕುಳ ಹೇಳಿದೆ. ಈ ವಿಚಾರದಲ್ಲಿ ಗಿಲ್ಲಿ ನಟ ಅವರಿಗೆ ಕೋಪ ಇದೆ. ಅವರು ಅಶ್ವಿನಿ ಹಾಗೂ ಜಾನ್ವಿಗೆ ಕಂಡ ಕಂಡಲ್ಲಿ ತಿರುಗೇಟು ಕೊಡುತ್ತಿದ್ದಾರೆ. ಇದರಿಂದ ಇಬ್ಬರೂ ಗಪ್-ಚುಪ್ ಆಗಿದ್ದಾರೆ.

ಹಾಡಿನ ಮೂಲಕ ಟೀಕೆ

ಜಾನ್ವಿ ಅವರು ರಕ್ಷಿತಾ ಅವರನ್ನು ಟೀಕಿಸಿದ ವಿಚಾರಕ್ಕೆ ಹಾಡಿನ ಮೂಲಕವೇ ಜಾನ್ವಿಗೆ ತಿರುಗೇಟು ಕೊಟ್ಟಿದ್ದಾರೆ. ‘ಗೆಜ್ಜೆ ಚೈನು ಕೈಯಾಗ, 12 ಗಂಟೆ ರಾತ್ರಿಯಾಗ..’ ಎಂದು ಹಲವು ಸಾಲುಗಳನ್ನು ಬರೆದು ಹಾಡಿದ್ದಾರೆ. ಈ ಹಾಡನ್ನು ಕೇಳಿ ಜಾನ್ವಿಗೆ ಮಾತೇ ಬರದಂತೆ ಆಯಿತು.

ಇದನ್ನೂ ಓದಿ

ಅಶ್ವಿನಿಗೂ ಖಡಕ್ ಉತ್ತರ

ಬಿಗ್ ಬಾಸ್ ಮನೆಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿದೆ. ನಾಮಿನೇಟ್ ಆದ ಸ್ಪರ್ಧಿಗಳು ತಾವು ಸಮರ್ಥಿಸಿಕೊಳ್ಳಬೇಕಿತ್ತು. ಫಿನಾಲೆ ಸ್ಪರ್ಧಿಗಳು ಪತ್ರಕರ್ತರ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳಬೇಕಿತ್ತು. ಈ ವೇಳೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದ್ದಾರೆ. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಸುದ್ದಿಗೋಷ್ಠಿ: ಬಾಣಂತನದಂತಹ ಪ್ರಶ್ನೆಗಳಿಗೆ ತತ್ತರಿಸಿ ಹೋದ ರಕ್ಷಿತಾ ಶೆಟ್ಟಿ

‘ಏನು ದಬಾಕಿದೀರಾ ಹೇಳಿ’ ಎಂದು ಅಶ್ವಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ‘ಸ್ನಾನ ಮಾಡಿದ ಬಕೆಟ್‌ನ ತಿರುಗಿ ಹಾಕಿದ್ದೇನೆ’ ಎಂದು ಹೇಳಿದರು. ‘ಬನಿಯನ್ ಹಾಕ್ಕೊಂಡೇ ಹೊರಡ್ತೀಯಲ್ಲ, ಹೊರಗೆ ಯಾವುದಾದರೂ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದೀಯಾ’ ಎಂದು ಅಶ್ವಿನಿ ಪ್ರಶ್ನೆ ಮಾಡಿದರು. ‘ಕೆಲವರು (ಅಶ್ವಿನಿ) ಸೀರೆ ಉಟ್ಟಿಕೊಂಡೇ ಹುಡುಕ್ತಾರೆ. ಹಾಗಂತ ಅವರು ಯಾವುದೋ ಸ್ಯಾರಿ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದಾರೆ ಎಂದು ಹೇಳಲು ಸಾಧ್ಯವೇ’ ಎಂದು ಅಶ್ವಿನಿಗೆ ತಿರುಗೇಟು ಕೊಟ್ಟರು.

ಪದೇ ಪದೇ ಜಾನ್ವಿ ಕಾಲೆಳೆದ ಗಿಲ್ಲಿ

ನಾಮಿನೇಟ್ ಸ್ಪರ್ಧಿಗಳು ನೀಡಿದ ಸಮರ್ಥನೆಗಾಗಿ ಆದ ಒಬ್ಬರನ್ನು ನಾಮನಿರ್ದೇಶನದಿಂದ ಹೊರಗೆ ಇಡಲಾಗಿತ್ತು. ಇದನ್ನು ಫಿನಾಲೆ ಸ್ಪರ್ಧಿಗಳೇ ನಿರ್ಧರಿಸಬೇಕಿತ್ತು. ನಾಲ್ವರು ಫಿನಾಲೆ ಸ್ಪರ್ಧಿಗಳು ಒಳಗೆ ಹೋಗುತ್ತಿರುವಾಗ ಗಿಲ್ಲಿ ಅವರು, ‘ಜಾನ್ವಿ ಅವರೇ ಸರ್ಕಾರ ನಿಮ್ಮದೇ. ನೀವೇ ಸೇವ್ ಆಗ್ತೀರಾ ಬಿಡಿ’ ಎಂದಾಗ ಜಾನ್ವಿಗೆ ಮಾತೇ ಬರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *