ಬೆಂಗಳೂರು, ಅಕ್ಟೋಬರ್ 18: ರಾಜ್ಯ ಸರ್ಕಾರ ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಆರಂಭಿಸಿದಿಂದಲೂ, ಗಣತಿ ಜಟಾಪಟಿ ನಡೀತಾನೆ ಇದೆ. ಮೊನ್ನೆಯಷ್ಟೇ ಇನ್ಫೋಸಿಸ್ ಸುಧಾಮೂರ್ತಿ ದಂಪತಿ ಸಮೀಕ್ಷೆಗೆ ನಿರಾಕರಿಸಿದ್ದರು. ಇದು ಹಿಂದುಳಿದವರ ಸಮೀಕ್ಷೆ.. ನಾವು ಭಾಗವಹಿಸಲ್ಲ ಅನ್ನೋ ಹಿಂಬರಹ ಬರೆದು ಕಳಿಸಿದ್ದರು. ಇದೆ ವಿಚಾರ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ, ಇದು ಹಿಂದುಳಿದವರ ಸಮೀಕ್ಷೆಯಲ್ಲ. ಸುಧಾಮೂರ್ತಿ ದಂಪತಿ ತಪ್ಪು ತಿಳಿದಿದ್ದಾರೆ. ಇದು ಕೇವಲ ಹಿಂದುಳಿದವರ ಸಮೀಕ್ಷೆ ಅನ್ನೋ ಭಾವನೆ ತಪ್ಪು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.