ಮೈಸೂರು, ಅಕ್ಟೋಬರ್ 18: ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಮುಖಂಡ (ಕಾಂಗ್ರೆಸ್ ನಾಯಕ) ಲೋಹಿತ್ ಅಲಿಯಾಸ್ ರಾಜಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಆಗಿರುವಂತಹ ಘಟನೆ ನಡೆದಿದೆ. ವೈಯಕ್ತಿಕ ಲಾಭಕ್ಕಾಗಿ ಮಕ್ಕಳೊಂದಿಗೆ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಾಗಿ ತಂದೆ (ತಂದೆ) ದೂರು ನೀಡಿದ್ದು, ಕಾಂಗ್ರೆಸ್ ಮುಖಂಡನ ವಿರುದ್ಧ ನಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?
ಎ. 16ರಂದು ರಾತ್ರಿ 9:20 ಗಂಟೆಗೆ ಸೋಮೇಗೌಡ ಬಿನ್ ಲೇಟ್ ಮಲೇಗೌಡ ಎಂಬುವರ ದೂರಿನ ಸಾರಾಂಶವೆನೆಂದರೆ, ನಾನು ವ್ಯವಸಾಯ ಕಸುಬನ್ನು ಮಾಡಿಕೊಂಡಿರುತ್ತೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಮೂರು ತಿಂಗಳ ಹಿಂದೆ ಹೊಳೆನರಸೀಪುರ ತಾಲ್ಲೂಕಿನ ಮರಹಳ್ಳಿ ಗ್ರಾಮದ ವ್ಯಕ್ತಿ ಜೊತೆಗೆ ಮಗಳ ಮದುವೆ ಮಾಡುತ್ತೇನೆ. ನನ್ನ ಮಗಳು ಮತ್ತು ಅಳಿಯ ಅನ್ಯೂನ್ಯವಾಗಿದ್ದರು.
ಇದನ್ನೂ ಓದಿ: ಪರಸ್ತ್ರೀಯರ ಜೊತೆ ಪತಿ ಸರಸ ಸಲ್ಲಾಪ: ಗಂಡನ ರಾಸಲೀಲೆ ವಿಡಿಯೋ ನೋಡಿ ಹೆಂಡ್ತಿ ಶಾಕ್
ದೀಪಾವಳಿ ಹಬ್ಬದ ಹಿನ್ನೆಲೆ ನನ್ನ ಮಗಳು ನಮ್ಮ ಮನೆಗೆ ಬಂದಿದ್ದಳು. ಹೀಗಿರುವಾಗ ಅ 16ರಂದು ಬೆಳಿಗ್ಗೆ 10 ಗಂಟೆಗೆ ನನ್ನ ನಂತರ ನಮ್ಮ ಜಮೀನಿನ ಬಳಿ ಸಿಕ್ಕು, ನಿಮ್ಮ ಮಗಳು ಮತ್ತು ನಿಮ್ಮೂರಿನ ಲೋಹಿತ್ ಅಲಿಯಾಸ್ ರಾಜಿ ಇಬ್ಬರ ಅಶ್ಲೀಲ ವಿಡಿಯೋ ಮಲ್ಲಿಕಾರ್ಜುನ್ ಎಂಬುವವರ ವಾಟ್ಸಾಪ್ ನಂಬರ್ ಗೆ ಬಂದಿದ್ದು, ಆತನು ನನ್ನ ವಾಟ್ಸಾಪ್ ನಂಬರ್ ಗೆ ಕಳುಹಿಸಿದ್ದು, ಏನೆಂದು ವಿಡಿಯೋ ನೋಡಲಾಗಿ ನಿಮ್ಮ ಮಗಳು ಮತ್ತು ಲೋಹಿತ್ ವಿಡಿಯೋ ಮಾಡುತ್ತಿದ್ದಾರೆ. ಬಳಿಕ ಡಿಲೀಟ್ ಮಾಡ ನನಗೆ ಹೇಳಿದ್ದಾರೆ.
ನಮಗೂ ನಮ್ಮೂರಿನ ಲೋಹಿತ್ ಎಂಬುವನಿಗೂ ಜಮೀನು ದಾರಿಯಲ್ಲಿ ಆಗಾಗ ಗಲಾಟೆ ಕಂಡು, ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಒಂದು ಗತಿ ಕಾಣಿಸುತ್ತೇನೆ ನೋಡು, ಒಂದಲ್ಲ ಒಂದು ದಿನ ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದನು.
ಇದನ್ನೂ ಓದಿ: ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಸಹಜ ಕ್ರಿಯೆಗೆ ಒತ್ತಾಯಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವಿದ್ಯಾರ್ಥಿಯ ಬಂಧನ
ಈ ದ್ವೇಷದಿಂದ ನನ್ನ ಮಗಳು ಮತ್ತು ನಮ್ಮ ಕುಟುಂಬದ ಮಾನಮರ್ಯಾದೆಯನ್ನು ಬೀದಿ ಪಾಲು ಮಾಡುವ ಉದ್ದೇಶದಿಂದ ನನ್ನ ಮಗಳೊಂದಿಗೆ ತೊಡಗಿದ ವಿಡಿಯೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಎಲ್ಲರಿಗೂ ವಾಟ್ಸಾಪ್ ನಲ್ಲಿ ಕಳುಹಿಸಿ, ನನ್ನ ಮಗಳು ಮತ್ತು ನಮ್ಮ ಸಂಸಾರವನ್ನು ಹಾಳು ಮಾಡುತ್ತಾನೆ. ಆದ್ದರಿಂದ ಲೋಹಿತ್ ಅಲಿಯಾಸ್ ರಾಜಿ ಎಂಬುವನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ಮತ್ತು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 10:22 am, ಶನಿ, 18 ಅಕ್ಟೋಬರ್ 25