ಅಪ್ಪು ಅಪ್ಲಿಕೇಶನ್ ಪ್ರೋಮೊಗೆ ಸುದೀಪ್ ದನಿ: ಅಪ್ಲಿಕೇಶನ್ ವಿಶೇಷತೆ ಏನು?

ಅಪ್ಪು ಅಪ್ಲಿಕೇಶನ್ ಪ್ರೋಮೊಗೆ ಸುದೀಪ್ ದನಿ: ಅಪ್ಲಿಕೇಶನ್ ವಿಶೇಷತೆ ಏನು?


ಪುನೀತ್ ರಾಜ್ ಕುಮಾರ್ ಕಾಲವಾಗಿ 4 ವರ್ಷಗಳಾಗುತ್ತಾ ಬಂತು. ಪ್ರಸ್ತುತ ಪುನೀತ್ ಅವರ ಅಭಿಮಾನಿಗಳು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅಪ್ಪು ಅವರ ಸಿನಿಮಾಗಳಿಂದ ಅವರ ಅದ್ಭುತ ವ್ಯಕ್ತಿತ್ವ, ಸೇವೆಯ ಕಾರಣಗಳಿಂದ ಅವರು ಕೋಟ್ಯಂತರ ಜನರಿಗೆ ಹತ್ತಿರವಾಗಿದ್ದರು. ಅವರು ಮಾಡಿದ ಸೇವೆ, ಸಹಾಯದಿಂದ ಅವರು ಅಜರಾಮರ ಮಾಡಿದರು. ಇದೀಗ ಅಪ್ಪು ಅವರನ್ನು ಸದಾ ಅಮರರಾಗಿಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾರ್ಯ ಕೈಗೊಂಡಿದ್ದಾರೆ. ಅಪ್ಪು ಆಪ್ ಹೊರತರಲು ಮುಂದಾಗಿದ್ದು, ಅಪ್ಪು ಆಪ್ ಟೀಸರ್ ಗೆ ಸುದೀಪ್ ಧ್ವನಿ ನೀಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ, ಅದನ್ನು ಅಕ್ಟೋಬರ್ 25 ರಂದು ಬಿಡುಗಡೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಆಪ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದೀಗ ಆ್ಯಪ್ ನ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯರೂ ಆಗಿದ್ದ ಸುದೀಪ್ ಅವರು ಧ್ವನಿ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಕೆಲವು ಚಿತ್ರಗಳನ್ನು ಬಳಸಿ ಅವಕ್ಕೆ ಎಐ ಮೂಲಕ ಅದ್ಭುತ ರೂಪ ನೀಡಿ ಪ್ರೋಮೋ ವಿಡಿಯೋ ಬಿಡುಗಡೆ ಮಾಡಿದರು, ವಿಡಿಯೋದಲ್ಲಿ ಸುದೀಪ್ ಅವರು ಧ್ವನಿ ನೀಡಿದ್ದಾರೆ. ಅಪ್ಪು ಅವರ ಜೀವನ ಪಯಣ, ಸಿನಿಮಾ, ಖಾಸಗಿ ಜೀವನ, ಅವರ ಸೇವೆ, ನಿಧನದ ಎಲ್ಲದರ ಬಗ್ಗೆ ಸುದೀಪ್ ಅವರು ಹೇಳಿದ್ದು, ಕನ್ನಡ ಭಾರತದ ಪಾಲಿಗೆ ಇದೊಂದು ಅಪರೂಪದ ಆಪ್ ಆಗಿರುತ್ತದೆ. ಈ ಆಪ್ ಮೂಲಕ ಅಪ್ಪು ಅವರ ಸೇವೆ, ಕೆಲಸಗಳನ್ನು ಜನರಿಗೆ ತಲುಪಿಸುವ ಜೊತೆಗೆ ಇತರರಿಗೆ ಸ್ಪೂರ್ತಿ ತುಂಬುವ, ಅವಕಾಶ ನೀಡುವ ಅಪ್ಲಿಕೇಶನ್ ಆಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಪ್ಪು ಸ್ಮರಣೆಯಲ್ಲಿ ಜನಸ್ನೇಹಿ ಅಪ್ಲಿಕೇಶನ್, ಶೀಘ್ರವೇ ಬಿಡುಗಡೆ

ಪ್ರೋಮೋನಲ್ಲಿ ಇರುವಂತೆ ಪಿಆರ್‌ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಾಂಟೆಂಟ್ ಕ್ರಿಯೇಟರ್‌ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರತಿ ಅಭಿಮಾನಿಯ ಹೃದಯದಿಂದ – ಪ್ರತಿ ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ… ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊದಲ ಫ್ಯಾನ್ ಡಮ್ ಆಪ್ ಆಗಿದೆ. ಈ ಅಪ್ಲಿಕೇಶನ್ ಅಕ್ಟೋಬರ್ 25 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:49 pm, ಶನಿ, 18 ಅಕ್ಟೋಬರ್ 25





Source link

Leave a Reply

Your email address will not be published. Required fields are marked *