ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುವರೆ? ತಮ್ಮದೇ ಸರ್ಕಾರದ ನಡೆಗೆ ರಾಜಣ್ಣ ಬೇಸರ

ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುವರೆ? ತಮ್ಮದೇ ಸರ್ಕಾರದ ನಡೆಗೆ ರಾಜಣ್ಣ ಬೇಸರ


ತುಮಕೂರು, (ಅಕ್ಟೋಬರ್ 18): ಪಕ್ಷಕ್ಕೆ ಇರುಸು ಮುರುಸು ಮಾಡಿದ ಸಂಬಂಧ ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ನಾಯಕ ಕೆಎನ್ ರಾಜಣ್ಣ (ಕೆ.ಎನ್.ರಾಜಣ್ಣ) ಇದೀಗ ಸರ್ಕಾರಕ್ಕೆ ಮುಜುಗರವಾಗುಂತ ಮತ್ತೊಂದು ಹೇಳಿಕೆ. ಹೌದು…ಆರ್ ಎಸ್ ಎಸ್ (ಆರ್ಎಸ್ಎಸ್)ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಲೆಂದೇ ಸರ್ಕಾರಿ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಪಡೆಯಬೇಕೆಂಬ ನಿಯಮ ಜಾರಿಗೆ ತರಲು ಮುಂದಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ಹಿಡಿದು ರಾಜ್ಯ ಮಟ್ಟದ ನಾಯಕರೂ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಕೈ ಹಿರಿಯ ನಾಯಕ ಕೆಎನ್ ರಾಜಣ್ಣ ಮಾತ್ರ ಪರೋಕ್ಷವಾಗಿ ಆರ್ ಎಸ್ ಎಸ್ ಪರ ಬ್ಯಾಟಿಂಗ್ ಮಾಡಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜಣ್ಣ ಮತ್ತೊಮ್ಮೆ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡುತ್ತಿರುವಂತೆ ಹೇಳಿಕೆ ನೀಡಿದ್ದಾರೆ.

ಸರ್ಕಾರಿ ಜಾಗದಲ್ಲಿ RSS ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಪರ್ಮಿಷನ್ ತಗೊಂಡು ಮಾಡಿ ಅಂತಾ ಹೇಳಿದ್ದಾರೆ ಆರ್ ಎಸ್ ಎಸ್ ಬ್ಯಾನ್ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ಸರ್ಕಾರಿ ಜಾಗದಲ್ಲಿ RSS ಆಗಲಿ ಬೇರೆ ಯಾವುದೇ ಸಂಘಟನೆ ಆಗಲಿ ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಎಂದು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗುತ್ತೆ ಎನ್ನುವುದನ್ನು ನೋಡೋಣ. ಈದ್ಗಾ ಮೈದಾನದಲ್ಲಿ ರಸ್ತೆಯಲ್ಲೇ ನಮಾಜ್ ಮಾಡುತ್ತಾರೆ. ಅವರು (ಮುಸ್ಲಿಂ) ಪರ್ಮಿಷನ್ ತೆಗೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅನುಮತಿಯಿಲ್ಲದೆ ನಡೆಯುವ ನಮಾಜ್ ನಿಷೇಧಿಸಿ: ಸಿಎಂಗೆ ಶಾಸಕ ಯತ್ನಾಳ್ ಪತ್ರ

ರಸ್ತೆಯಲ್ಲಿ ನಮಾಜ್ ಮಾಡಲು ಪರ್ಮಿಷನ್ ಕೊಡಿ ಎಂದು ಅವರು ಬರ್ತಾರಾ? ಅಥವಾ ಪರ್ಮಿಷನ್ ತೆಗೆದುಕೊಂಡಿದೆ ಎಂದು ಹೇಳುತ್ತೀವಾ? ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ ಎಂದು ಆರ್ ಎಸ್ ಎಸ್ ನಿರ್ಬಂಧ ಹಾಕುವ ಸರ್ಕಾರದ ಧೋರಣೆಗೆ ರಾಜಣ್ಣ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಗಾಗಿ ಕಾರ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಸಿಎಂಗೆ ಪತ್ರ ಬರೆದು ಮನವಿ ಮಾಡಿದರು. ಇದರ ಬೆನ್ನಲ್ಲೇ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅನುಮತಿ ಪಡೆಯಲು ನಿಯಮ ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಹಿಂದೂ ಸಂಘಟನೆ ಹಾಗೂ ಬಿಜೆಪಿ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ತಿರುಗೇಟು ನೀಡಿದ್ದಾರೆ. ಆದರೆ, ಕಾಂಗ್ರೆಸ್ ನಾಯಕ ರಾಜಣ್ಣ ಮಾತ್ರ ಪರೋಕ್ಷವಾಗಿ ಆರ್ ಎಸ್ ಎಸ್ ಎಸ್ ಪರ ಬ್ಯಾಟಿಂಗ್ ಮಾಡಿದ್ದು, ಸ್ವಪಕ್ಷದ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.



Source link

Leave a Reply

Your email address will not be published. Required fields are marked *