ಡಿಸಿಎಂ ಡಿಕೆಶಿ ಜೊತೆಗೆ ಸಭೆ: ಗುತ್ತಿಗೆದಾರರ ಹೋರಾಟಕ್ಕೆ ಜಯ, ಶೇ.10 ಎಫ್‌ಡಿಆರ್ ವಾಪಸ್ಸು ಕೊಡುವ ಭರವಸೆ | Karnataka Govt Has Finally Agreed To Return The Fdr To Bbmp Contractors Gow

ಡಿಸಿಎಂ ಡಿಕೆಶಿ ಜೊತೆಗೆ ಸಭೆ: ಗುತ್ತಿಗೆದಾರರ ಹೋರಾಟಕ್ಕೆ ಜಯ, ಶೇ.10 ಎಫ್‌ಡಿಆರ್ ವಾಪಸ್ಸು ಕೊಡುವ ಭರವಸೆ | Karnataka Govt Has Finally Agreed To Return The Fdr To Bbmp Contractors Gow



ಡಿಸಿಎಂ ಡಿಕೆಶಿ ಜೊತೆಗೆ ಸಭೆ: ಗುತ್ತಿಗೆದಾರರ ಹೋರಾಟಕ್ಕೆ ಜಯ, ಶೇ.10 ಎಫ್‌ಡಿಆರ್ ವಾಪಸ್ಸು ಕೊಡುವ ಭರವಸೆ | Karnataka Govt Has Finally Agreed To Return The Fdr To Bbmp Contractors Gow

ಗುತ್ತಿಗೆದಾರರ ಸಂಘದ ತೀವ್ರ ಒತ್ತಡದ ನಂತರ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ 10% ಎಫ್‌ಡಿಆರ್ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಾಕಿ ಹಣ ಬಿಡುಗಡೆ ಮತ್ತು ಟೆಂಡರ್ ಪ್ಯಾಕೇಜ್ ಸಿಸ್ಟಮ್ ಬಗ್ಗೆಯೂ ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಕಂಟ್ರಾಕ್ಟರ್ ಅಸೋಸಿಯೇಷನ್ ಭಾರೀ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಬಿಬಿಎಂಪಿಯಲ್ಲಿ ಇಟ್ಟಿರುವ 10% FDR ವಾಪಸ್ಸು ಕೊಡಲು ಒಪ್ಪಿಗೆ ಸೂಚಿಸಿದೆ. ಡಿಸೆಂಬರ್ ಒಳಗೆ ಬಿಬಿಎಂಪಿ ವ್ಯಾಪ್ತಿಯ ಕಂಟ್ರಾಕ್ಟರ್ FDR ವಾಪಸ್ಸು ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ಮಾಡಿದ್ದಾರೆ. ಈ ಹಿಂದೆ ಬಾಕಿ ಹಣ ಪಾವತಿಸುವಂತೆ ಸರ್ಕಾರವನ್ನ ಸಾಕಷ್ಟು ಬಾರಿ ಕಂಟ್ರಾಕ್ಟರ್ ಅಸೋಸಿಯೇಷನ್ ಒತ್ತಾಯಿಸಿತ್ತು. ವಿವಿಧ ಸಮಸ್ಯೆಗಳನ್ನ ಮುಂದಿಟ್ಟು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಗೂ ಪತ್ರ ಅಸೋಸಿಯೇಷನ್ ಬರೆದಿತ್ತು. ಆದ್ರು ಕಂಟ್ರಾಕ್ಟರ್ ಅಸೋಸಿಯೇಷನ್ ಬೇಡಿಕೆಯನ್ನು ಸರ್ಕಾರ ಈಡೇರಿಸಿರಲಿಲ್ಲ. ಇದ್ರ ಬೆನ್ನಲ್ಲೇ ಸರ್ಕಾರದ ವಿರುದ್ದ ಕಂಟ್ರಾಕ್ಟರ್ ಅಸೋಸಿಯೇಷನ್. ಆಕ್ರೋಶ ವ್ಯಕ್ತಪಡಿಸಿತ್ತು.

ಕೊನೆಗೂ ಸಭೆಗೆ ಬಂದ ಡಿಸಿಎಂ

ಹೀಗಾಗಿ ಸಂಜೆ 4.30 ಕ್ಕೆ ಕಂಟ್ರಾಕ್ಟರ್ ಅಸೋಸಿಯೇಷನ್ ಜೊತೆ ಡಿಸಿಎಂ ತಮ್ಮ ಸರ್ಕಾರಿ ನಿವಾಸದಲ್ಲಿ ಸಭೆ ಕರೆದಿದ್ದರು. ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಭೇಟಿಗೆ 4.30 ಕ್ಕೆ ಸಮಯ ನೀಡಿದ್ದ ಡಿಸಿಎಂ ಡಿಕೆಶಿ, ಒಂದುವರೆ ಗಂಟೆ ಕಳೆದರೂ ಸರ್ಕಾರಿ ನಿವಾಸಕ್ಕೆ ಆಗಮಿಸಿರಲಿಲ್ಲ. ಕೊನೆಗೂ ಸುಮಾರು 6 ಗಂಟೆಗೆ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಸಭೆಗೆ ಡಿಸಿಎಂ ಡಿಕೆಶಿವಕುಮಾರ್ ಆಗಮಿಸಿ ಸಭೆ ನಡೆಸಿದರು.

ಡಿಸೆಂಬರ್ ತಿಂಗಳೊಳಗೆ ಬಾಕಿ ಹಣ ಬಿಡುಗಡೆ ಭರವಸೆ

ಸಭೆ ಬಳಿಕ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಹೇಳಿಕೆ ನೀಡಿ, ಡಿಸೆಂಬರ್ ತಿಂಗಳೊಳಗೆ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ. ಇನ್ನೆರಡು ದಿನದಲ್ಲಿ ಸಿಎಂ ಜೊತೆ ಸಭೆ ಮಾಡುತ್ತೇನೆ ಎಂದಿದ್ದಾರೆ. ಇದ್ರ ಜೊತೆಗೆ ಪ್ಯಾಕೇಜ್ ಸಿಸ್ಟಮ್ ಇರುವ ಟೆಂಡರ್ ತೆಗೆಯುವ ಬಗ್ಗೆ ಸಿಎಂ ಜೊತೆ ಚರ್ಚಿಸುವ ಬಗ್ಗೆ ಹೇಳಿದ್ದಾರೆ. ನಾವು ಕಮೀಷನ್ ಬಗ್ಗೆ ಮಾತನಾಡಿಲ್ಲ. 80% ಕಮೀಷನ್ ಇದೆ ಅಂತ ಹೇಳುತ್ತಿದ್ದಾರೆ ಅಂತ ಡಿಸಿಎಂ ಕೇಳಿದ್ರು. ರಾಜಕೀಯ ಪ್ರೇರಿತ ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳಿದ್ದೇವೆ. ಕೋರ್ಟ್ ಗೆ ಹೋಗಿ ಅಂತ ಸಿಎಂ ಹೇಳಿದ್ದಾರೆ. ನಾವು ಕೋರ್ಟಿಗೂ ಹೋಗಲ್ಲ ಎಲ್ಲಿಗೂ ಹೋಗಲ್ಲ ನಾವು ಇಲ್ಲಿಯೇ ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಮತ್ತು ಹೈಕಮಾಂಡ್ ನ್ನ ಭೇಟಿ ಮಾಡುತ್ತೇವೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ 50 ಲಕ್ಷದ ಪೇಮೆಂಟ್ ನೀಡುತ್ತೇನೆ ಎಂದಿದ್ದಾರೆ. 33 ಸಾವಿರ ಕೋಟಿ ಕೊಡಲಿಲ್ಲ ಅಂದ್ರೆ ಹೋರಾಟ ಮಾಡುವುದಾಗಿ ಡಿಸಿಎಂಗೆ ತಿಳಿಸಿದ್ದೇವೆ. ಜನವರಿಯಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಅಂತ ಡಿಸಿಎಂ ಹೇಳಿದ್ರು. ನಾವು ಡಿಸೆಂಬರ್ ಗೆ ಬಿಡುಗಡೆ ಮಾಡಿ ಅಂತ ಕೇಳಿದ್ವೀ ಒಪ್ಪಿದ್ದಾರೆ. ನೀರಾವರಿಯ 4 ನಿಗಮಗಳಿಗೆ ಸಂಬಂಧಪಟ್ಟ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *