Headlines

ಆರ್‌ಎಸ್‌ಎಸ್‌ ಬಿಸಿಬಿಸಿ ಚರ್ಚೆಗೆ ಕಿಚ್ಚು ಹಚ್ಚಿದ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ | Who Support Rss Are Anti Nationals Minister Shivraj Tangadagi Controversy Gow

ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಆರ್ ಎಸ್ ಎಸ್ ಬೆಂಬಲಿಸುವವರು ದೇಶ ವಿರೋಧಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ನವರು ಗಾಂಧಿ, ಬಸವಣ್ಣ, ಅಂಬೇಡ್ಕರ್, ರಾಷ್ಟ್ರ ಧ್ವಜವನ್ನು ಒಪ್ಪುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕೊಪ್ಪಳ: ರಾಜ್ಯದಲ್ಲಿ ಈಗ ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವೆ ಬಿಸಿಬಿಸಿ ಚರ್ಚೆಯ ಮಧ್ಯೆಯೇ ಸಚಿವ ಶಿವರಾಜ್ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾರೂ ಆರ್ ಎಸ್ ಎಸ್ ಒಪ್ಕೋತಾರೆ ಅವರು ದೇಶ ವಿರೋಧಿಗಳು ಎಂದು ಕೊಪ್ಪಳದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ ಎಸ್ ಎಸ್ ದೇಶಭಕ್ತಿ ಸಂಘಟನೆ ಅಂತಾ ಯಾವ ಮೂಲದಿಂದ ಒಪ್ಕೋತಿರಿ. ಇವರು ಗಾಂಧಿ, ಬಸವಣ್ಣ, ಬುದ್ದ ಯಾರನ್ನೂ ಒಪ್ಪಲ್ಲ. ಬಸವಣ್ಣರನ್ನ ಎಲ್ಲರೂ ಒಪ್ಕೋತಾರೆ. ಆದ್ರೆ ಆರ್ ಎಸ್ ಎಸ್ ನವರು ಒಪ್ಪಲ್ಲ. ಇವರು ಅಂಬೇಡ್ಕರ್ ಅವರನ್ನು ಒಪ್ಪಲ್ಲ, ರಾಷ್ಟ್ರ ದ್ವಜ ಒಪ್ಪಲ್ಲ, ರಾಷ್ಟ್ರಗೀತೆ ಒಪ್ಪಲ್ಲ. ಮೋದಿ, ಅಶೋಕ, ಯತ್ನಾಳ ಎಲ್ಲರೂ ಆರ್ ಎಸ್ ಎಸ್ ಅಂತಾರೆ‌. ಯಾವ ಮೂಲೆಯಿಂದ ನಾವು ರಾಷ್ಟ್ರಭಕ್ತ ಸಂಘಟನೆ ಅಂತಾ ಹೇಳ್ತೀರಿ. ಬೇರೆ ಯಾರಾದರೂ ಆಯುಧ ಹಿಡಿದುಕೊಂಡು ಓಡಾಡಿದ್ರೆ ಎಫ್ ಐ ಆರ್ ಮಾಡ್ತೀರೀ. ಇವರು ಬಡಿಗೆ ದೊಣ್ಣೆ ಹಿಡಿದು ಕೊಂಡು ಓಡಾಡಿದ್ರೆ ಯಾಕೆ ಎಫ್ ಐ ಆರ್ ಮಾಡಬಾರದು ಎಂದು ತಂಗಡಗಿ ಪ್ರಶ್ನಿಸಿದ್ದಾರೆ.

ಸಮೀಕ್ಷೆ ಬಗ್ಗೆ ಸಿಎಂ ಸಭೆ ನಂತರ ತೀರ್ಮಾನ ಮಾಡ್ತೀವಿ

ಸಮೀಕ್ಷೆ ವಿಚಾರಕ್ಕೆ ನಾಳೆ ಸಿಎಮ್ ಸಭೆ ಕರೆದಿದ್ದಾರೆ. ನಾಳೆ ಸಿಎಂ ಸಭೆ ನಂತರ ತೀರ್ಮಾನ ಮಾಡ್ತೀವಿ ಎಂದ ತಂಗಡಗಿ, ಸುಧಾ ಮೂರ್ತಿ ಅವರೇ ಮಾಹಿತಿ ಬಹಿರಂಗ ಮಾಡಿದ್ದಾರೆ. ಇದು ಹಿಂದುಳಿದ ವರ್ಗಗಳ ಸಮೀಕ್ಷೆ ಅಲ್ಲ. ಎಲ್ಲ ಸಮುದಾಯವರ ಸಮೀಕ್ಷೆ. ಸುಧಾ ಮೂರ್ತಿ ಬ್ರಾಹ್ಮಣ ಸಮುದಾಯದವರು. ಬ್ರಾಹ್ಮಣ ಸಮುದಾಯದಲ್ಲಿ ಬಡವರ ಇಲ್ವಾ? ಸುಧಾ ಮೂರ್ತಿ, ಜೋಶಿ ಅವರು ಸಮೀಕ್ಷೆ ವಿಫಲ ಮಾಡಲು ಹೊರಟಿದ್ದಾರೆ. ಜನ ಬುದ್ದಿವಂತರಿದ್ದಾರೆ ಎಂದು ತಂಗಡಗಿ ಹೇಳಿಕೆ ನೀಡಿದ್ದಾರೆ.

Source link

Leave a Reply

Your email address will not be published. Required fields are marked *