ಅವಳು ಚೆಂದುಳ್ಳಿ ಚೆಲುವೆ, ಇವನು ಪುಡಿ ರೌಡಿ! ಅವಳನ್ನ ಕೊಲ್ಲಲು ವಾಟ್ಸಪ್​ ಗ್ರೂಪನ್ನೇ ಕ್ರಿಯೇಟ್​​ ಮಾಡಿದ್ದ!

ಅವಳು ಚೆಂದುಳ್ಳಿ ಚೆಲುವೆ, ಇವನು ಪುಡಿ ರೌಡಿ! ಅವಳನ್ನ ಕೊಲ್ಲಲು ವಾಟ್ಸಪ್​ ಗ್ರೂಪನ್ನೇ ಕ್ರಿಯೇಟ್​​ ಮಾಡಿದ್ದ!

ಆಕೆ ಬಡವರ ಮನೆ ಹೆಣ್ಣುಮಗಳು.. ಅಪ್ಪ ದಿನಗೂಲಿ ಕೆಲಸಕ್ಕೆ ಹೋಗ್ತಿದ್ರೆ ಅಮ್ಮ ಮನೆಗೆಲಸಕ್ಕೆ ಹೋಗ್ತಿದ್ರು. ಇಂಥ ಮನೆಯಲ್ಲಿ ಹುಟ್ಟಿದ ಹೆಣ್ಣುಮಗಳಿಗೆ ಚೆನ್ನಾಗಿ ಓದಿ ಹೆತ್ತವರನ್ನ ನೋಡಿಕೊಳ್ಳಬೇಕು ಅಂತ ಕನಸು ಕನಸಿತ್ತು.. ಹೀಗಾಗಿ ಬಿ ಫಾರ್ಮಸಿಗೆ ಸೇರಿಕೊಂಡಿದ್ಲು.. ತಾನಾಯ್ತು.. ತನ್ನ ಓದಾಯ್ತು ಅಂತ ಇದ್ದವಳು. ಆದ್ರೆ ಆವತ್ತೊಂದು ದಿನ ಎಕ್ಸಾಂ ಇದೆ ಅಂತ ಬೆಳಗ್ಗೆ 7 ಗಂಟೆಗೆ ಮನೆ ಬಿಡ್ತಾಳೆ. ಮಧ್ಯಾಹ್ನದ ಹೊತ್ತಿಗೆ ಆಕೆ ವಾಪಸ್​​ ಅಗಬೇಕಿತ್ತು.. ಆದ್ರೆ ಬಂದಿದ್ದು ಆಕೆಯ ಸಾವಿನ ಸುದ್ದಿ.. ಆಕೆಯನ್ನ ಕಿರಾತಕನೊಬ್ಬ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದ… ಇನ್ನೂ ಕೇಸ್​ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ರು. ಆಗಲೇ ನೋಡಿ ಅಲ್ಲೊಬ್ಬ ಪರಮಪಾಪಿಯ ಹೆಸರು ಬರೋದು.. ಅಷ್ಟಕ್ಕೂ ಯಾರು ಆ ಕಿರಾತಕ..? ಈ ಹೆಣ್ಣುಮಗಳನ್ನ ಆತ ಕೊಂದಿದ್ದೇಕೆ..? ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​​​.ಐ.ಆರ್

ಅವನು ಎದುರು ಮನೆಯ ಹುಡುಗ… ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು.. ಆದ್ರೆ ಒಂದು ವರ್ಷದಿಂದ ಯಾಮಿನಿಗೆ ಆತ ಲವ್​ ಮಾಡುವಂತೆ ಪೀಡಿಸುತ್ತಿದ್ದ.. ಆದ್ರೆ ಆ ಯುವತಿಗೆ ಲವ್​ ಮಾಡೋ ಮನಸ್ಸಿರಲಿಲ್ಲ.. ಆಕೆ ನೋ ಅಂತ ಹೇಳಿದ್ಲು.. ಆದ್ರೂ ಈತ ಅವಳ ಹಿಂದೆ ಹೋಗೋದನ್ನ ಬಿಟ್ಟಿರಲಿಲ್ಲ.. ಒಮ್ಮೆ ಪೋಷಕರನ್ನ ಕರೆದುಕೊಂಡು ಹೋಗಿ ಆಕೆಯ ಮನೆಯಲ್ಲಿ ಹೆಣ್ಣು ಕೇಳಿದ್ದ.. ಅವರು ಬಿಲ್​ಕುಲ್​ ಆಗಲ್ಲ ಅಂದಿದ್ರು.. ಕಾರಣ ಅವನೊಬ್ಬ ಪುಡಿ ರೌಡಿ.. ಆದ್ರೂ ಈತ ಆಕೆಯನ್ನ ಪೀಡಿಸುತ್ತಿದ್ದ.. ನೋಡೋವರೆಗೂ ನೋಡಿ ಯುವತಿ ಹೆತ್ತವರು ಪೊಲೀಸ್​​ ಠಾಣೆ ಮೆಟ್ಟಿಲೇರಿದ್ರು.. ಆಗ ಈತ ಇನ್ಮುಂದೆ ಅವಳ ಸಹವಾಸಕ್ಕೆ ಹೋಗಲ್ಲ ಅಂತ ಬರೆದುಕೊಟ್ಟಿದ್ದ.. ಆದ್ರೆ ಇವತ್ತು ಇದ್ದಕ್ಕಿದ್ದಂತೆ ಬಂದು ಅವಳ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ.

Source link

Leave a Reply

Your email address will not be published. Required fields are marked *