ಯಶಸ್ವಿ ಪ್ರತಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಎಂಬ ಮಾತಿದೆ. ರಿಷಬ್ ಶೆಟ್ಟಿ ಇದು ಸತ್ಯವೇ ಆಗಿದೆ. ರಿಷಬ್ ಶೆಟ್ಟಿಯ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ತಮ್ಮ ಪತಿಯ ಹಿಂದೆ ಅಲ್ಲ ಬದಲಾಗಿ ಪಕ್ಕದಲ್ಲಿ ನಿಂತು ಹೆಗಲಿಗೆ-ಹೆಗಲು ಕೊಟ್ಟು ಕೆಲಸ ಮಾಡುತ್ತಾರೆ. ಚಿತ್ರರಂಗ ಎಂಬುದು ತಮಗೆ ಸಂಪೂರ್ಣ ಹೊಸ ಜಗತ್ತಾದರೂ ಸಹ ಪತಿಗೆ ಬೆಂಬಲವಾಗಿ ನಿಲ್ಲಬೇಕು ಬಟ್ಟೆ ವಿನ್ಯಾಸ ಸೇರಿದಂತೆ ಇನ್ನೂ ಕೆಲವು ವಿಭಾಗಗಳನ್ನು ಅವರು ನಿಭಾಯಿಸಿ ‘ಕಾಂತಾರ: ಅಧ್ಯಾಯ 1’ ಅಂಥಾ ಅದ್ಭುತ ಸಿನಿಮಾ ನಿರ್ದೇಶಿಸಲು ರಿಷಬ್ ಗೆ ಜೊತೆಯಾಗಿ ನಿಂತಿದ್ದಾರೆ.
ಇದೀಗ ಪ್ರಗತಿ ಶೆಟ್ಟಿ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ‘ಕಾಂತಾರ: ಅಧ್ಯಾಯ 1’ ಅನುಭವ, ಸಿನಿಮಾಗಳಿಂದ ತಮ್ಮ ಕುಟುಂಬ ಮತ್ತು ಖಾಸಗಿ ಜೀವನದ ಮೇಲೆ ಆಗಿರುವ ಪ್ರಭಾವ, ರಿಷಬ್ ಶೆಟ್ಟರು ಅನುಭವಿಸುವ ಒತ್ತಡ, ಅವರನ್ನು ಶಾಂತವಾಗಿರಿಸಲು ಅವರು ಮಾಡುವ ಪ್ರಯತ್ನ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
‘ನಾನು ಬಂದ ಮೇಲೆ ರಿಷಬ್ ಗೆ ಲಕ್ ಅಂತ ಹೇಳ್ತಾರೆ, ಆದರೆ ರಿಷಬ್ ಒಬ್ಬ ಕೆಲಸವನ್ನ ತಪಸ್ಸಿನ ರೀತಿ ಮಾಡ್ತಾರೆ. ಒಂದು ಕನಸು ಕಂಡು ಅದರ ಬೆನ್ನಟ್ಟಿ ಹೋಗುತ್ತಾರೆ. ಏಕೆಂದರೆ ಅವರು ಅಂದುಕೊಂಡಿದ್ದು ಆಗುತ್ತದೆ. ಅವರದ್ದು ಅದೃಷ್ಟ ಅಲ್ಲ ಬದಲಾಗಿ ಶ್ರಮ’ ಎಂದರು ಪ್ರಗತಿ ಶೆಟ್ಟಿ. ಮುಂದುವರೆದು ಮಾತನಾಡಿ, ‘ನಾನು ತುಂಬಾ ಅದೃಷ್ಟವಂತರು, ಈ ರೀತಿಯ ಸಿನಿಮಾ ಮಾಡ್ತೀವಿ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ಕೆಲಸ ಮಾಡಬೇಕು ಎಂಬ ಹಸಿವು ಇತ್ತು. ನಾನು ಇವತ್ತು ಇದೆಲ್ಲ ಮಾಡುತ್ತಿದ್ದೀನಿ ಅಂದರೆ ರಿಷಬ್ ಅವರೇ ಗುರು, ಅವರ ಎನರ್ಜಿ ನೋಡಿ ನಾನು ಅಷ್ಟೇ ಎನರ್ಜಿ ಇಂದ ಕೆಲಸ ಮಾಡ್ತೀನಿ ಮ್ಯಾಚ್ ಮಾಡೋಕೆ ನೋಡ್ತೀನಿ’ ಎಂದು ಪತಿಯನ್ನು ಕೊಂಡಾಡಿದರು.
ಇದನ್ನೂ ಓದಿ:’ಕಾಂತಾರ: ಅಧ್ಯಾಯ 1′ ನೋಡಿ ರಿಷಬ್ ನ ಹಗ್ ಮಾಡಿ ಅತ್ತ ಪ್ರಗತಿ ಶೆಟ್ಟಿ
‘ನನಗೆ ಅವಕಾಶ ಕೊಟ್ಟರೂ ರಿಷಬ್ ಎಲ್ಲಾ ಹ್ಯಾಂಡಲ್ ಮಾಡಿಕೊಂಡು ಬಂದರು. ಇದು ಮಾಡ್ತಿನ ಅಂತ ಟೆನ್ಷನ್ ಇತ್ತು ರಿಷಬ್ ಸ್ಪೂರ್ತಿ. ನಾನು ಮಾಡಿದರೂ ಸಹ ರಿಷಬ್ ಅವರನ್ನು ನೋಡಿ ಕಲಿತಿರೋದು. ರಿಷಬ್ ನನ್ನ ಒಂದು ದಿನ ಬಿಸಿಲಲ್ಲಿ ರೆಡ್ ಆಗಿರೋದು ನೋಡಿ ಎಂ ಸಿ ಕಂಪನಿಯಲ್ಲಿ ಆರಾಮವಾಗಿ ಎಂದಿದ್ದೆ ಇಲ್ಲಿ ಇಷ್ಟು ಕಷ್ಟ ಪಡುತ್ತಿದ್ದೀಯ ಅಂದರು. ಶೂಟಿಂಗ್ ಬಗ್ಗೆ ಮಾತನಾಡಿದ ಅವರು, ‘ನಮ್ಮದು ಈಗ ಕೆಎಫ್ ಸಿ ಆಗಿದೆ (ಕೆರಾಡಿ ಫಿಲ್ಮ್ ಸಿಟಿ). ನಾವು ಮಾಡಿರೋ ಕೆಲಸ ದುಡ್ಡು 70% ಅಲ್ಲೇ ಹೋಗಿದೆ. ಟೂರಿಸಮ್ ಇಂಪ್ರೂವ್ ಆಗಿದೆ ನಮ್ಮನ್ನ ನೋಡಿ ಬೇರೆಯವರು ಮತ್ತೆ ಅವರಿಗೆ ಬರುತ್ತಿದ್ದಾರೆ ಎಂದರು.
ಕಾಂತಾರದಲ್ಲಿ ಹಲವಾರು ತಂತ್ರಜ್ಞರು ನಮ್ಮ ಜೊತೆಗೆ ಕೆಲಸ ಮಾಡಿದ್ದಾರೆ, ಯಾವ ಡಿಸೈನರ್ ಗೂ ಇದು ಡ್ರೀಮ್ ಪ್ರಾಜೆಕ್ಟ್. ವಸ್ತ್ರ ವಿನ್ಯಾಸದ ಮೂರು ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದ್ದೀನಿ ಟ್ರೈಬಲ್, ಕಿಂಗ್ಡೆಮ್ ಅಂತೆಲ್ಲ ಮಾಡಿದ್ದೀನಿ. ಆಕ್ಷನ್ ಸೀಕ್ವೆನ್ಸ್ ಮಾಡೋವಾಗ ನಾನು ಅಂತ ಹೇಳ್ತಿದ್ದೆ ಯಾಕಂದ್ರೆ ನನಗೆ ಟೆನ್ಷನ್ ಆಗ್ತಿತ್ತು ರಥದ ಶೂಟಿಂಗ್ ಅಲ್ಲಿ ಚಿಕ್ಕ ಆಕ್ಸಿಡೆಂಟ್ ಆಗುತ್ತೆ ಅವರು ಹಾಸ್ಪಿಟಲ್ ಗೆ ಹೋಗ್ತಿದ್ದೀನಿ ಅಂತ ಕೇಳಿ ಭಯ ಆಗ್ತಿದ್ದಂತೆ ಜ್ವರ ಬಂದರೂ ಅವರು ಹೋಗಿ ನೋಡಿದ್ಮೇಲೆ ನಂಗೆ ಸಮಾಧಾನ ಆಗುತ್ತೆ. ಅದನ್ನು ನೋಡಿ ನಾನು ಫೈಟ್ ಶೂಟಿಂಗ್ ಗೆ ಬರಬಾರದು ಎಂದು ಹೇಳಿದರು, ಎಂದು ನೆನಪು ಮಾಡಿಕೊಂಡರು.
ರಿಷಬ್ ಪಟ್ಟ ಶ್ರಮದ ಬಗ್ಗೆ ಮಾತನಾಡಿದ ಪ್ರಗತಿ ಶೆಟ್ಟಿ, ‘ರಿಷಬ್ ಅವರಿಗೆ ಅವರೇ ಸರಿಸಾಟಿ ಯಾಕಂದ್ರೆ ಬೆಳಿಗ್ಗೆ ಬೇಗ ಎದ್ದು ವರ್ಕ್ ಔಟ್ ಮಾಡಿ ಶೂಟ್ ಮಾಡಿ ಮತ್ತೆ ಬಂದು ಕಲರಿ ಪಯಟ್ಟು ಪ್ರಾಕ್ಟೀಸ್ ಮಾಡಿ ನಂತರ ಮುಂದಿನ ದಿನದ ಶೂಟಿಂಗ್ ಪ್ಲಾನಿಂಗ್ ಮಾಡುತ್ತಿದ್ದರು. ಸೆಟ್ ನಲ್ಲಿ ಪ್ರತಿ ನಿಮಿಷ ದುಡ್ಡು ಖರ್ಚು ಆಗುತ್ತಿಲ್ಲ ಅವರು ಯಾವಾಗಲೂ ಕೆಲಸ ಮಾಡುತ್ತಿದ್ದರು. ಆರೋಗ್ಯವನ್ನೇ ಮರೆತು ಕೆಲಸ ಮಾಡಿದರು. ಈಗ ಪ್ರಚಾರದಿಂದ ಬಂದ ಬಳಿಕ ಮತ್ತೆ ಆರೋಗ್ಯದ ಕಡೆ ಗಮನ ಕೊಡಬೇಕು. ಅಡುಗೆಯನ್ನೇ ಮಾಡಿಲ್ಲ ನಾವು, ರಿಷಬ್ ಬಂದ ಮೇಲೆ ಅಡುಗೆ ಮಾಡಿ ತಿನ್ನಬೇಕು’ ಪ್ರಗತಿ.
ವಸ್ತ್ರ ವಿನ್ಯಾಸದ ಬಗ್ಗೆ ಮಾತನಾಡಿ, ‘ಇದಕ್ಕಾಗಿ ಆರು ತಿಂಗಳ ಕಾಲ ಮಾಡಿದೆ. ರುಕ್ಮಿಣಿ ವಸಂತ್ ಲುಕ್ ತುಂಬಾ ಕ್ರೇಜ್ ಗಳಿಸಿಕೊಂಡಿದೆ. ಕುಲಶೇಖರ ಪಾತ್ರಕ್ಕೆ ಕಿರೀಟ ಮಾಡೋವಾಗ ತಲೆ ಕೆಡುಸ್ಕೊಡಿವಿ ರಿಷಬ್ ಒಂದಷ್ಟು ಹೇಳಿದ್ರು ಅದು ರಿಸಲ್ಟ್ ಬರುತ್ತಾ ಅಂತ ತಲೆ ಕೆಡುಸ್ಕೊಂಡ್ವಿ ಅಂದ್ರೆ ರಿಷಬ್ ಇಂಚಿಚು ಚೆಕ್ ಮಾಡ್ತಿದ್ರು. ಕ್ರೌನ್ ವರ್ಕ್ ಮಾಡಿರೋರು ಕಮ್ಮಿ ಇದಾರೆ ಇಲ್ಲಿ ತುಂಬಾ ದೊಡ್ಡ ಸಿನಿಮಾಗೆ ಕೆಲಸ ಮಾಡಿರೋರು ಕುಂದಾಪುರಕ್ಕೆ ಬರೋದಕ್ಕೆ ರೆಡಿ ಇಲ್ಲಾ ಲೋಕಲ್ ನಲ್ಲಿ ಓಡಾಡಿ ಮಾಡೋರಿಗೆ ಕೊಟ್ವಿ ಅವ್ರು ನೋಡಿದ್ರೆ ಸರಿಯಾಗಿ ಮಾಡಿ ಕೊಟ್ಟಿಲ್ಲ ಮತ್ತೆ ತಂದ್ರು ನೋಡಿದ್ರೆ ಸಾಯಿಜ್ ದೊಡ್ಡದು ತಂದ್ರು ಲಾಸ್ಟ್ ಮಿನಿಟ್ ಅಲ್ಲಿ ಮತ್ತೆ ಆಗಾಗ ವೆಲ್ಡಿಂಗ್ ಮಾಡ್ಸಿ ಏನೇನೋ ಮಾಡಿದ್ವಿ ಸಬೀನಾ ದಲ್ಲಿ ಎಷ್ಟು ವೆಲ್ಡಿಂಗ್ ಮಾಡ್ಸಿರೋ ನಶ್ ಕೊಟ್ಟಿರೋ ನಶ್ ಕೊಟ್ಟಿದ್ದಾರೆ ರಾತ್ರಿ ಗೋಲ್ಡ್ ವಾಶ್ ಮಾಡಿಸಿದ್ದು ತುಂಬಾ ತಲೆ ನೋವು ಕೊಡ್ತು’ ಎಂದು ನೆನಪು ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ