Horoscope Today 19 October : ಇಂದು ಈ ರಾಶಿಯವರ ಮನೋವಾಂಛೆಯನ್ನು ಅನ್ಯರು ಪೂರೈಸುವರು

Horoscope Today 19 October : ಇಂದು ಈ ರಾಶಿಯವರ ಮನೋವಾಂಛೆಯನ್ನು ಅನ್ಯರು ಪೂರೈಸುವರು


Horoscope Today 19 October : ಇಂದು ಈ ರಾಶಿಯವರ ಮನೋವಾಂಛೆಯನ್ನು ಅನ್ಯರು ಪೂರೈಸುವರು

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಶರದ್, ಚಂದ್ರ ಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ತ್ರಯೋದ ಸೂರ್ಯಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಶುಕ್ಲ, ೬ಸ್ತೋದಯ : ೧. 05 – 57 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:29 – 17:57, ಗುಳಿಕ ಕಾಲ 15:01 – 16:29, ಯಮಗಂಡ ಕಾಲ 12:40 – 13:33

ಮೇಷ ರಾಶಿ :

ನೀವು ಕೊಟ್ಟಷ್ಟು ಹಣ ಸಿಗದೇ ಇದ್ದರೂ ಬರುವಷ್ಟಕ್ಕೆ ಬೇಡ ಎನುವುದು ಬೇಡ. ಹಂಚಿಕೊಂಡು ಬದುಕುವುದು ಗೊತ್ತಿರಲಿ. ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಉದ್ಯೋಗವು ಮಂದಗತಿಯಲ್ಲಿ ಸಾಗಲಿದೆ. ಮಾನಸಿಕ ಜಾಡ್ಯವು ನಿಮ್ಮ ಎಲ್ಲ ಕೆಲಸವೂ ಹಿಂದುಳಿಯುವುದು. ಹಿರಿಯರಿಗೆ ಅಗೌರವವನ್ನು ಕೊಡುವುದು ಬೇಡ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇತರರಿಗೆ ದಾನವಾಗಿ ಕೊಡುವಿರಿ. ನಿಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಿ. ಆಗದಿರುವ ಕಾರ್ಯವನ್ನು ಒಪ್ಪಿಕೊಂಡು ಸಂಕಟಪಡುವಿರಿ. ಸೂಕ್ಷ್ಮವಾದ ವ್ಯವಹಾರವನ್ನು ಅರ್ಥೈಸಿಕೊಳ್ಳಲಾರಿರಿ. ಅನಧಿಕೃತ ವ್ಯವಹಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಮಿತ್ರರನ್ನು ಭೇಟಿಯಾಗಿದ್ದೇನೆ. ವಿವಾಹದ ಮಾತುಕತೆ ನಡೆಯಬಹುದು. ನಿಮಗಾದ ಅಪಮಾನಕ್ಕೆ ಪ್ರತಿಕಾರ ಬೇಡ. ನಿಮ್ಮ ದೌರ್ಬಲ್ಯವನ್ನು ನೀವು ಸಹಕರಾತ್ಮಕವಾಗಿ ಬಯಸಿದರೆ ಮುನ್ನಡೆ.

ವೃಷಭ ರಾಶಿ :

ನಿಮ್ಮ ಮಾತಿಗೆ ಎದುರಿನಿಂದ ವಿರೋಧ ಬರದಿದ್ದರೂ ಮಾತಿಗೆ ಮಾತು ಬೆಳೆಯಬಹುದು. ಅದನ್ನು ನಿಭಾಯಿಸುವ ಕಲೆ ಗೊತ್ತಿರಲಿ. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ನಿಮ್ಮ ಬಗ್ಗೆ ಕುಟುಂಬಕ್ಕೆ ಕನಿಕರ ಬರಬಹುದು. ಉದ್ಯೋಗಕ್ಕೆ ಬಂಧುಗಳಿಂದ ಸಹಾಯ ದೊರೆಯುವುದು. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಕೆಲಸಗಳಿಗೆ ನಿಮ್ಮ ಮೇಲೆ ಒತ್ತಡ ಬರಬಹುದು. ಸ್ನೇಹಿತರ ಮಧ್ಯದಲ್ಲಿ ಅನ್ಯರ ಪ್ರವೇಶವು ಆಗಬಹುದು. ನಿಮ್ಮ ವೈಫಲ್ಯವನ್ನು ನೀವು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುತ್ತೀರಿ. ಪರಿಶೀಲನೆಗೆ ಬಹಳ ಸಮಯ ನಿಮಗೆ ಸಿಗಲಿದೆ, ಸರಿಯಾದ ಫಲಿತಾಂಶವನ್ನು ನೀಡಿ. ನಿರುದ್ಯೋಗದಿಂದ ನಿಮಗೆ ಬಿಡುಗಡೆ ಸಿಗುವುದು. ಹೆಚ್ಚಿನ ಕಡಿವಾಣ ಹಾಕುವ ನಿರ್ಧಾರವನ್ನು ಮಾಡುವಿರಿ. ಉದರಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ಮನೆಯಲ್ಲಿಯೇ ಸೂಕ್ತ ಔಷಧಿಗಳನ್ನು ಮಾಡಿಕೊಳ್ಳಿ. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನೀವು ಯಾರಿಗೂ ಭಾರವಾಗದಂತೆ ಇರಿ.

ಮಿಥುನ ರಾಶಿ :

ಶತ್ರುಗಳ ಉಪಟಳಕ್ಕೆ ಪೂರ್ಣವಿರಾಮ ಬರಲಿದೆ. ವಿದೇಶದ ವ್ಯಾಪಾರದಲ್ಲಿ ಸ್ಥಿರತೆ ಸಾಧಿಸುವುದು ಕಷ್ಟವಾದೀತು. ಇಂದು ಸಹೋದರನ ನಡತೆ ನಿಮಗೆ ಸಂಶಯ ತರಬಹುದು. ನಿಮ್ಮ ಕಾರ್ಯಗಳಿಗೆ ತಕ್ಷಣ ಫಲವನ್ನು ನಿರೀಕ್ಷಿಸುವ ಅಗತ್ಯವಿಲ್ಲ. ನಿಮ್ಮ ಕಾರ್ಯದಲ್ಲಿ ನಿಷ್ಠೆಯಿಂದ ಇರಲಿ. ಜನರಿಗೆ ಸಹಾಯವನ್ನು ಮಾಡುವ ಮನಸ್ಸಾಗುವುದು. ಮಕ್ಕಳಿಂದ ಶುಭಸಮಾಚಾರವು ಬರಲಿದೆ. ಸ್ವಂತ ಲಾಭವನ್ನು ಮಾಡುವ ಹಪಹಪಿಕೆ ಇರುವುದು. ಪ್ರೀತಿಯ ತಪ್ಪು ವಾರ್ತೆಗಳು ಎಲ್ಲಕಡೆ ಪಸರಿಸಬಹುದು. ತಪ್ಪಿಲ್ಲದೇ ಇದ್ದರೂ ತಲೆ ತಗ್ಗಿಸಬೇಕಾದ ಸ್ಥಿತಿಯು ಬರಬಹುದು. ಸಾಹಸ ಕಾರ್ಯಗಳಿಗೆ ಹೋಗುವುದು ಬೇಡ. ಇಟ್ಟ ಹೆಜ್ಜೆ ಸರಿಯಾಗಿದೆಯೇ ನೋಡಿಕೊಳ್ಳಿ. ಸಿಟ್ಟಾಗಲು ಇಂದು ನಿಮಗೆ ಬಹಳ ಅವಕಾಶಗಳು ಸಿಗಲಿವೆ. ನಿಮ್ಮ ವರ್ತನೆಯ ಮೇಲೆ ಮುಂದಿನದು ನಿರ್ಣಯ. ಉದ್ಯಮವನ್ನು ಬಹಳ ಯೋಜನೆಯಿಂದ ನಡೆಸಬೇಕು. ಒತ್ತಡದಿಂದ ಮುಕ್ತರಾಗುವ ಸಂದರ್ಭ ಬರಬಹುದು. ಇಂದಿನ ಒತ್ತಡವನ್ನು ಸಹಿಸಿಕೊಂಡು ಕಷ್ಟವಾಯಿತು.

ಕರ್ಕಾಟಕ ರಾಶಿ :

ಮನೆಯವರ ಟೀಕೆಗಳು ನಿಮಗೆ ಅಸಹನೀಯ ಪ್ರದರ್ಶನ. ಯಾರದೋ ಕೆಲಸವನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಪ್ರಭಾವದಿಂದ ಇತರರಿಗೆ ಸಹಾಯ ಸಿಗಲಿದೆ. ಯಾರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಔಚಿತ್ಯದ ಕೊರತೆಯು ಕಾಣಿಸುವುದು. ವ್ಯಾಪಾರದಲ್ಲಿ ಇದು ಬಹಳ ಮುಖ್ಯವಾಗಿ ಬೇಕಾಗಬಹುದು. ಸ್ತ್ರೀಯರ ಮಾತಿಗೆ ನಿಮ್ಮ ಬೆಂಬಲವಿರಲಿದೆ. ನಿಮ್ಮ ಮಾತು ವಿಶ್ವಾರ್ಹವಾಗಿರಲಿ. ಆಕಸ್ಮಿಕ ಧನಲಾಭವು ನಿಮಗೆ ಗೊಂದಲವನ್ನೂ ಸಂತೋಷವನ್ನೂ ತರುವುದು. ಇನ್ನೊಬ್ಬರ ಸುಖವನ್ನು ಕಸಿದುಕೊಳ್ಳುವ ಪ್ರಯತ್ನ ಒಳ್ಳೆಯದಲ್ಲ. ಸಂಗಾತಿಯ ಜೊತೆ ಅಕಾರಣವಾಗಿ ಕಲಹವಾಗಬಹುದು. ಮನೆಯಿಂದ ದೂರದಲ್ಲಿ ವಾಸ ಮಾಡುವ ಸ್ಥಿತಿ ಬರಬಹುದು. ಆಪ್ತರನ್ನು ದೂರ ಮಾಡಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಯೋಜನೆ ನೀವಂದುಕೊಂಡಂತೆ ನಡೆಸಲಾಗದು. ಅಸಭ್ಯ ಮಾತಿನಿಂದ ನಿಮ್ಮ ಕೆಲಸವು ಹಾಳಾಗುವುದು.

ಸಿಂಹ ರಾಶಿ :

ಮಕ್ಕಳ ಕ್ರಿಯಾಶೀಲತೆಯನ್ನು ನಿಯಂತ್ರಿಸುವಿರಿ. ಅನಪೇಕ್ಷಿತ ಮಾತನ್ನು ಬಿಡುವುದು ಒಳ್ಳೆಯದು. ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆಯಿದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳಿರಿ. ಸಂಗಾತಿಯ ನಡುವೆ ಅತಿಯಾದ ಕಲಹ ಆಗಬಹುದು. ಆಸ್ತಿಯ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ನ್ಯಾಯಾಲಯದಿಂದ ದಂಡನೆ ಸಿಗುವ ಸಾಧ್ಯತೆ ಇದೆ. ಯಾರದೋ ಮನಸ್ಸಿಗೂ ನೋವಾಗುವಂತೆ ಮಾತನಾಡುವಿರಿ. ನಿಮ್ಮ ಆರೋಗ್ಯದ ರಕ್ಷಣೆಯ ಬಗ್ಗೆ ನಿಮಗೇ ನಂಬಿಕೆ ಸಾಲದು. ನಿರ್ಲಕ್ಷ್ಯದಿಂದ ನೀವು ಹಣವನ್ನು ಕಳೆದುಕೊಳ್ಳುವಿರಿ. ವಿದ್ಯಾರ್ಥಿಗಳೂ ಹಿನ್ನಡೆಯನ್ನು ಸಾಧಿಸುವರು. ಉದ್ಯೋಗದಲ್ಲಿ ಹೃದಯ ಕಂದರವನ್ನು ದೊಡ್ಡ ಮಾಡಿಕೊಳ್ಳುವಿರಿ. ಮಾರ್ಗದರ್ಶನದ ಕೊರತೆಯು ಕಾಣಿಸುವುದು. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿದರು.’ ಹೆದರಿದಷ್ಟೂ ನೀವು ಅಶಕ್ತರಾಗುವಿರಿ. ಗೆಲುವಿಗಾಗಿ ಅಧಿಕ ಶ್ರಮದ ಅವಶ್ಯಕತೆ ಇರಲಿದೆ.

ಕನ್ಯಾ ರಾಶಿ :

ಆರ್ಥಿಕ ಅಗತ್ಯತೆಯ ಅರಿವು. ಅಧಿಕಾರವಿಲ್ಲದೇ ಉಭಯಸಂಕಟದ ಸ್ಥಿತಿ ಬರಬಹುದು. ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ವ್ಯಾಮೋಹದಿಂದ ಕೆಲವನ್ನು ನೀವು ಬಿಡುವುದು ಕಷ್ಟವಾದೀತು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರೆನಿಸಕೊಂಡವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ನಿಮ್ಮನ್ನು ಬಳಸುವವರ ಬಗೆಗೆ ಎಚ್ಚರಿಕೆ ಅಗತ್ಯ. ನೋವಿಗೆ ಬೇಕಾದ ಚಿಕಿತ್ಸೆ ಮಾಡಬೇಕಾಗುವುದು. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಿ. ತಂದೆಯಿಂದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ದೂರ ವಾಹನದಲ್ಲಿ ಸಂಚಾರ ಮಾಡುವುದು ಹಿತವಾಗದು. ನಿಮ್ಮ ಬಳಿ ಬಂದವರಿಗೆ ಸಾಂತ್ವನದ ಸುಖವು ಬೇಕಾಗಿರಬಹುದು.

ತುಲಾ ರಾಶಿ :

ಭಾವನಾತ್ಮಕವಾಗಿ ನಿಮ್ಮನ್ನು ಕಟ್ಟಿಹಾಕುತ್ತಾರೆ. ಇಂದು ನಿಮ್ಮ ಎಂತಹ ಎಚ್ಚರಿಕೆಯೂ ಹಾದಿ ತಪ್ಪಿಸಿತು. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಸ್ಥಿರಾಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ಯಾವುದೇ ಸಂದರ್ಭ ಬಂದರೂ ಅದನ್ನು ಧೈರ್ಯದಿಂದ ಎದುರಿಸುವಿರಿ. ನಿಮಗೆ ಅಭದ್ರತೆಯು ಕಾಡಬಹುದು. ಸ್ನೇಹಿತರ ಸಹವಾಸದಿಂದ ನಿಮಗೆ ಅಪವಾದ ಬರಬಹುದು. ಮಕ್ಕಳಿಂದ ಸಂತೋಷವು ಸಿಗಲಿದೆ. ನೀವೇ ಹೆಣೆದ ಬೇಲಿಯಲ್ಲಿ ಸಿಕ್ಕಿಬೀಳುವಿರಿ. ನಿಮ್ಮ ಸಮಯವು ಬೇರೆಯವರ ಕಾರಣಕ್ಕೆ ದುರಪಯೋಗವಾಗಿದೆ. ಯಾವ ತೊಂದರೆ ಎಂದು ಏನನ್ನೂ ಮಾಡದೇ ಇರುವುದು ಬೇಡ. ಪ್ರೇಮಿಗಳು ಒಟ್ಟಾಗಿ ಬಹುಕಾಲ ಇರುವುದನ್ನು ತಪ್ಪಿಸಿಕೊಳ್ಳಿ. ಹೊಸ ವಸ್ತುವನ್ನು ಖರೀದಿಸುವಾಗ ಪರೀಕ್ಷಿಸಿ. ನಿಮ್ಮ ನಿಲುವು ಸ್ಪಷ್ಟವಾಗಿರಿ. ಅನಗತ್ಯ ಖರ್ಚಿಗೆ ಅವಕಾಶವನ್ನು ಕೊಟ್ಟು ಸಂಕಟಪಡುವಿರಿ. ನಿಮಗಿರುವ ಹೊಣೆಗಾರಿಕೆ ತಪ್ಪಬಹುದು. ನಿಮ್ಮ ಉತ್ಸಾಹವು ಯಾರನ್ನೂ ಏನೂ ಮಾಡಲಿಲ್ಲ. ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ.

ವೃಶ್ಚಿಕ ರಾಶಿ :

ಪ್ರಭಾವಿತರನ್ನು ಬೆಂಬಲಿಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ. ಜನರನ್ನು ಗೆಲ್ಲಲು ಖುಷಿಗಾಗಿ ಆಟವಾಡಿ. ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಆಲಸ್ಯದಿಂದಾಗಿ ನಿಮಗೆ ಸಿಗುವ ಅವಕಾಶಗಳನ್ನು ಕಳೆದುಕೊಳ್ಳುವಿರಿ. ವಸ್ತುಗಳನ್ನು ಹೆಚ್ಚು ಬಳಕೆ ಮಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿರುವುದು. ನಿಮ್ಮ ಅಸೂಯೆಯೇ ನಿಮಗೆ ಮಾರಕವಾಗುವುದು. ಹಳೆಯ ಸ್ನೇಹಿತರ ಬಗ್ಗೆ ನಿಮಗೆ ಅಸಮಾಧಾನವಿದೆ. ಪುಣ್ಯಕ್ಷೇತ್ರಕ್ಕೆ ಕುಟುಂಬದ ಜೊತೆ ಹೋಗುವಿರಿ. ಸಾಹಿತ್ಯಾಸಕ್ತರಿಗೆ ಪ್ರಶಂಸೆಯು ಸಿಗುವುದು. ಎಲ್ಲ ಸಮಯವೂ ಒಂದೇ ರೀತಿಯಲ್ಲಿ ಇರಲಾರದು. ಮಂತ್ರಕ್ಕಿಂತ ಜಾಸ್ತಿ ಎನ್ನಿಸುವುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಷ್ಟವಾಗುವುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು. ಕೆಲವನ್ನು ನೀವು ಸಣ್ಣವರಿಂದ ಕಲಿಯಬೇಕಾಗುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳುವ ನೋವು ಕಾಣಿಸಿಕೊಳ್ಳಬಹುದು. ಸಹೋದ್ಯೋಗಿಗಳ ಜೊತೆ ಆಪ್ತವಾಗಿ ಮಾತನಾಡಿದರು.

ಧನು ರಾಶಿ :

ಕೈಯಲ್ಲಿರುವ ಹಣವನ್ನು ನೀವು ಉಳಿಸಿಕೊಳ್ಳದೇ ಯಾವುದಾದರೊಂದು ರೀತಿಯಲ್ಲಿ ಹೋಗುತ್ತದೆ. ಎರಡು ದೋಣಿಯಲ್ಲಿ ಕಾಲು ಹಾಕಿ ಸಾಗಲಾಗದು. ಖರ್ಚನ್ನು ನಿಭಾಯಿಸುವ ಕೌಶಲವನ್ನು ಅನುಭವಿಗಳಿಂದ ಪಡೆಯಬೇಕು. ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ನಿಮ್ಮ ಹಳೆಯ ವಸ್ತುಗಳ ಆರ್ಥಿಕ ಸಮಸ್ಯೆಯಿಂದಾಗಿ ಮಾರಾಟ ಮಾಡುವಿರಿ. ಸ್ಥಿರಾಸ್ತಿಯನ್ನೂ ಕಳೆದುಕೊಳ್ಳುವ ಸ್ಥಿತಿಯು ಬರಬಹುದು. ನಿಮ್ಮದೆನ್ನುವ ಪ್ರತಿಷ್ಠೆಯು ಮುರಿದುಹೋದೀತು. ಬೇಕು ಎನಿಸಿದವರಿಗೆ ಸಹಾಯವನ್ನು ಮಾಡುವಿರಿ. ನೀವು ನಂಬಿಕೆಯನ್ನು ಒಂದು ಮಾತಿನಿಂದ ಕಳೆದುಕೊಂಡಿರಿ. ಆಕಸ್ಮಿಕವಾಗಿ ಅಶುಭವಾರ್ತೆಯು ಬರಲಿದೆ. ಕಾರ್ಯದ ಒತ್ತಡವನ್ನು ನೀವು ಕಡಿಮೆ ಮಾಡಿಕೊಳ್ಳುವಿರಿ. ಸೋಲಿನಿಂದ ವಿದ್ಯಾರ್ಥಿಗಳು ದುರ್ಬಲರಾಗುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಇರಲಿದೆ. ಹೂಡಿಕೆಯನ್ನು ತಾಳ್ಮೆಯಿಂದ ಮಾಡಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಪೋಷಕರ ಸಹಕಾರ ಸಿಗಲಿದೆ.

ಮಕರ ರಾಶಿ :

ಇತರರಿಗೆ ಹೋಲಿಸಿಕೊಂಡರೆ ಸಂಪತ್ತು, ವಿದ್ಯೆ, ಅಧಿಕಾರ ಎಲ್ಲವೂ ಕಡಿಮೆಯೇ. ಜಾಣ ಕಿವುಡುತನವನ್ನು ತೋರಿಸುತ್ತದೆ.’ ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಹಿಂದೆ ಮಾಡಿದ ಹೂಡಿಕೆಯಿಂದ ಇಂದು ಪ್ರಯೋಜನವಾಗುವುದು. ಸ್ವಂತ ವ್ಯವಹಾರವು ಲಾಭದಾಯಕವಾಗುವುದು. ಮನೆಯನ್ನು ಬದಲಾಯಿಸಬಹುದು. ಅನ್ಯಾಯದ ವಿರುದ್ಧ ನಿಲ್ಲುವುದು ಕಷ್ಟಕರವೆನಿಸುತ್ತದೆ. ಯಂತ್ರೋಪಕರಣಗಳ ತಯಾರಿಯಲ್ಲಿ ಹಿನ್ನಡೆ ಸಾಧ್ಯತೆಯಿದೆ. ಕಛೇರಿಯ ಒತ್ತಡದಿಂದ ಕುಟುಂಬದ ಜೊತೆ ಕಳೆಯುವುದು ಆಗದು. ಯಾರದೋ ವಿಚಾರಕ್ಕೆ ನಿಮ್ಮನ್ನು ತೋರಿಸುತ್ತದೆ. ಕೊಟ್ಟ ಕೆಲಸವನ್ನು ನಿಶ್ಚಿಂತೆಯಿಂದ ಮಾಡಲು ಬಿಡದು. ನೀವು ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಪಡುವಿರಿ. ಕೆಲವು ಉದ್ವೇಗದ ಮಾತುಗಳು ಗೊತ್ತಿಲ್ಲದಂತೆ ಆಡುವಿರಿ. ನಿದ್ರೆಯಿಂದ ಸುಖವು ಸಿಗಲಿದೆ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ.

ಕುಂಭ ರಾಶಿ :

ನಿಮ್ಮ ಯೋಜನೆಯು ವಿಶ್ರಾಂತಿಗಾಗಿ ಇರಲಿ. ಎಲ್ಲದಕ್ಕೂ ಅಸ್ತು ಎಂದರೆ ಅನಂತರ ಕಷ್ಟಪಡುವವರು ನೀವೇ. ಸ್ಥಿರಾಸ್ತಿಯಿಂದ ಕೆಲವು ಲಾಭಗಳೂ ಆಗಲಿವೆ. ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ವೃತ್ತಿಯ ಸ್ಥಳದಲ್ಲಿ ನಿಮಗೆ ಕಿರಿಕಿರಿ ಆಗಬಹುದು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಸಿಲುಕುತ್ತಾರೆ. ದೇವರ ಮೇಲೆ ಪೂರ್ಣ ಭಾರ ಹಾಕಿ ಕೈಕಟ್ಟಿ ಕೂರಬಾರದು. ಅಪರಿಚಿತರ ಜೊತೆ ಮಾತನ್ನು ಕಡಿಮೆ ಮಾಡಿ. ನಿಮ್ಮ ವಸ್ತುವೇ ಆದರೂ ಅದನ್ನು ಬಳಸಬೇಕು. ಸಂಗಾತಿಯ ಮಾತು ನಿಮಗೆ ಇಷ್ಟವಾಗದೆ ಹೋಗಬಹುದು. ಪ್ರೇಮದಿಂದ ಹೊರಬರುವುದು ನಿಮಗೆ ಕಷ್ಟ ಎನಿಸಬಹುದು. ರಾಜಕಾರಣಿಗಳು ಹಿನ್ನಡೆಯನ್ನು ಪಡೆಯುವರು. ನಿಮ್ಮ ಮಾತಿಗೆ ವಿರೋಧ ಬರುವುದು. ಯಾವ ಪ್ರಚೋದನೆಗೂ ಸಿಲುಕುವುದು ಬೇಡ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ. ಇಂದು ಸಂತೋಷದಿಂದ ಕಳೆಯಿರಿ. ಧಾರ್ಮಿಕ ಮತ್ತು ತಮ್ಮ ನಿಲುವನ್ನು ಗಟ್ಟಿಮಾಡಿಕೊಳ್ಳಿ.

ಮೀನ ರಾಶಿ :

ಇಂದು ಭಾಗವಹಿಸುವ ವಿಚಾರ ಗೋಷ್ಠಿಗಳು ನಿಮ್ಮ ಜ್ಞಾನವನ್ನು ಹೆಚ್ಚು ಮಾಡುತ್ತವೆ. ಕೆಡುಕಿನ ಆಲೋಚನೆಯಿಂದಲೇ ನೀವು ದೂರವಾಗುವುದು ಉತ್ತಮ. ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ನಿಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ. ಸಂಗಾತಿಯನ್ನು ಹೆಚ್ಚು ಇಷ್ಟಪಡುವಿರಿ. ಯಾವುದಾದರೂ ಉಡುಗೊರೆಯನ್ನು ಕೊಡುವಿರಿ. ಸ್ವಯಂ ಆತ್ಮಸ್ಥೈರ್ಯವನ್ನು ತುಂಬಿಕೊಳ್ಳುವ ಪ್ರಯತ್ನವನ್ನು ಮಾಡಲೇಬೇಕು. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆ ಬರುವುದು. ಮಿತ್ರರ ಸಹಾಯದಿಂದ ವಾಹನವನ್ನು ಖರೀದಿಸಿ. ಆರ್ಥಿಕ ಮೂಲದ ಬಗ್ಗೆ ಜಿಜ್ಞಾಸೆ ಮಾಡುವಿರಿ. ವಿದೇಶೀಯ ವ್ಯಾಪಾರದಿಂದ ಲಾಭವಾಗುವುದು.’ ನಿಮ್ಮ ವಿರುದ್ಧ ಯಾರಾದರೂ ಮಾತು ಕೇಳಬಹುದು. ಹಿತಶತ್ರುಗಳಿರುವ ಕಾರಣ ವ್ಯವಹಾರದ ಬಗ್ಗೆ ಗಮನವು ಅವಶ್ಯಕ. ಅಪರಿಚಿತರ ಕರೆಯನ್ನು ನಿರ್ಲಕ್ಷಿಸಿ. ದೂರ ಪ್ರಯಾಣವನ್ನು ಮಾಡಿರಿ. ಕಛೇರಿಯಲ್ಲಿ ಅನಿರೀಕ್ಷಿತವಾಗಿ ಒತ್ತಡಕ್ಕೆ ಸಿಲುಕುವಿರಿ. ಸಂಸ್ಥೆಯಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ.

– ಲೋಹಿತ ಹೆಬ್ಬಾರ್ – 8762924271 (What’s app only)



Source link

Leave a Reply

Your email address will not be published. Required fields are marked *