Bigg Boss Kannada 12 First Finale Winner: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ಬಾರಿಗೆ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆದಿದೆ. ಇದು ಕನ್ನಡ ಇತಿಹಾಸದಲ್ಲಿ ಮೊದಲು. ಈ ಫಿನಾಲೆಯ ವಿಜೇತರನ್ನು ಕೂಡ ಘೋಷಣೆ ಮಾಡಲಾಗಿದೆ.

ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ರಾಶಿಕಾ ಶೆಟ್ಟಿ ಅವರು ಫೈನಲಿಸ್ಟ್ ಆಗಿದ್ದರು. ಇವರಲ್ಲಿ ಒಬ್ಬರು ವಿಜೇತರಾಗಿದ್ದಾರೆ. ಹಾಗಾದರೆ ಅವರು ಯಾರು?

ನಾಲ್ವರು ಫೈನಲಿಸ್ಟ್ ಆಗಿದ್ದರೆ, ಉಳಿದವರು ಎಲ್ಲರೂ ನಾಮಿನೇಟ್ ಆಗಿದ್ದರು. ನಾಮಿನೇಟ್ ಆದವರಲ್ಲಿ ಮಂಜು ಭಾಷಿಣಿ, ಅಶ್ವಿನಿ ಎಸ್ ಎಸ್ ಅವರು ಎಲಿಮಿನೇಟ್ ಆಗಿದ್ದರು.

ಫೈನಲಿಸ್ಟ್ ಆಗಿದ್ದ ಸ್ಪರ್ಧಿಗಳಿಗೆ ಐದು ಪಾಯಿಂಟ್ಸ್‌ಗಳನ್ನು ಇಡಲಾಗಿತ್ತು. ಅಲ್ಲಿ ಕಾಕ್ರೋಚ್ ಸುಧಿ ಅವರಿಗೆ ಐದು ಪಾಯಿಂಟ್ಸ್ ಸಿಕ್ಕಿತ್ತು. ಹೀಗಾಗಿ ಅವರು ವಿಜೇತರಾಗಿದ್ದಾರೆ.

ಅಂದಹಾಗೆ ವಿಜೇತರಾದ ಕಾಕ್ರೋಚ್ ಸುಧಿಗೆ ಒಂದು ವಿಶೇಷ ಪವರ್ ಕೂಡ ಸಿಕ್ಕಿದೆ. ಈ ಮನೆಯಲ್ಲಿ ಉಳಿದುಕೊಳ್ಳಲು ಈ ಪವರ್ ನಿಜವಾಗಿಯೂ ಸಹಾಯ ಆಗುವುದು. ಹಾಗಾದರೆ ಏನದು?

ಹೌದು, ಯಾವ ವೀಕ್ ನಾನು ಎಲಿಮಿನೇಟ್ ಆಗ್ತೀನಿ ಎಂದು ಭಯ ಇರುತ್ತದೆಯೋ ಆಗ ಅವರು ಈ ಪವರ್ ಬಳಸಿ ಉಳಿಸಿಕೊಳ್ಳಬಹುದು, ಅಥವಾ ಬೇರೆಯವರನ್ನು ಕೂಡ ಉಳಿಸಬಹುದು.

Source link
BBK 12 ಮೊದಲ ಫಿನಾಲೆ ವಿನ್ನರ್‌ಗೆ ಸಿಗ್ತು ಭರ್ಜರಿ ಪವರ್; ಇದು ಸ್ಪರ್ಧಿಗಳಿಗೆ ಕೊಹಿನೂರ್ ವಜ್ರದಷ್ಟೇ ಅಮೂಲ್ಯ