ಬ್ಯಾಂಕಾಕ್, ಅಕ್ಟೋಬರ್ 19: ಭಾರತ ಮೂಲದ ವ್ಯಕ್ತಿ ಬ್ಯಾಂಕಾಕ್‌ನಲ್ಲಿ ಪಿಸ್ತೂಲ್ ಆಕಾರದ ಲೈಟರ್ ಜನರನ್ನು ಹಿಡಿದು ಬೆದರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಆರೋಪಿ ವ್ಯಕ್ತಿಯನ್ನು ಬಂಧಿಸಿದ್ದಾರೆ.ಆತನನ್ನು ಸಾಹಿಲ್ ರಾಮ್ ಥಡಾನಿ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಆತ ರಸ್ತೆಯಲ್ಲಿ ನೃತ್ಯ ಮಾಡುತ್ತಾ ದಾರಿಹೋಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬರುತ್ತದೆ.ಜನರ ಮೇಲೆ ಕೂಗುತ್ತಾ ಪಿಸ್ತೂಲ್ ಆಕಾರದ ಲೈಟರ್ ಅನ್ನು ಅವರ ಕಡೆಗೆ ತೋರಿಸಿದ್ದಾನೆ. ಎಳೆದೊಯ್ಯುವಾಗ ಆತ ಅಳುತ್ತಾ ಕ್ಷಮೆಯಾಚಿಸುತ್ತಿರುವುದು ಕಂಡುಬರುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ