ಕಾಫಿನಾಡಿನ ಪಶ್ಚಿಮ ಘಟ್ಟಗಳ ಸಾಲು ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಆರಂಭವಾಗಿದೆ. ಆದರೂ ಸಮುದ್ರ ಮಟ್ಟದಿಂದ 6 ಸಾವಿರ ಅಡಿ ಎತ್ತರದ ಬೆಟ್ಟವನ್ನೇರಿ ಕುಳಿತಿರುವ, ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮನನ್ನು ನೋಡಲು ಜನರು ಕಾತುರದಿಂದ ಇದ್ದಾರೆ. ಈ ಬಾರಿ ಎರಡು ದಿನ ಅವಕಾಶವಿದ್ದು, ರಾತ್ರಿ ಬೆಟ್ಟವನ್ನೇರೋಕೆ ನಿರ್ಬಂಧ ಹೇರಲಾಗಿದೆ.