Headlines

ದೂರತರಂಗ ಶಿಕ್ಷಣ ಘಟಕದ ಉದ್ಘಾಟನೆ

ದೂರತರಂಗ ಶಿಕ್ಷಣ ಘಟಕದ ಉದ್ಘಾಟನೆ

ದೂರತರಂಗ ಶಿಕ್ಷಣ ಯೋಜನೆ

ದಿನಾಂಕ: 03-07-2025 ರಂದು ಪಾವಗಡದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಸ್ಥಾಪಿಸಿದ ದೂರತರಂಗ ಶಿಕ್ಷಣ ಘಟಕದ ಉದ್ಘಾಟನೆ ನೆರವೇರಿತು. ಈ ಘಟಕದ ಪ್ರಾಯೋಜಕರು ಇನ್ಫೋಸಿಸ್ ಫೌಂಡೇಷನ್. ಈ ಘಟಕವು ಅತ್ಯಾಧುನಿಕ ಕಂಪ್ಯೂಟರೀಕೃತ ಬೃಹತ್ ಪರದೆಯನ್ನು ಹೊಂದಿರುವ ಘಟಕವಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಈ ತೆರನಾದ ಸರಿಸುಮಾರು 33 ದೂರತರಂಗ ಶಿಕ್ಷಣ ಘಟಕಗಳನ್ನು ತುಮಕೂರು ಜಿಲ್ಲೆಯಾದ್ಯಂತ ನೀಡಲಾಗಿದೆ. ಪ್ರತಿಯೊಂದು ಘಟಕವೂ ರೂ.6.00 ಲಕ್ಷ ವೆಚ್ಚದ್ದಾಗಿರುತ್ತದೆ.

ಶ್ರೀ ರಾಮಕೃಷ್ಣ ಸೇವಾಶ್ರಮ ಸ್ಥಾಪಿಸಿದ ದೂರತರಂಗ ಶಿಕ್ಷಣ ಘಟಕದ ಉದ್ಘಾಟನೆ ನೆರವೇರಿತು.

ಇದರಲ್ಲಿ ವ್ಯೂಸೋನಿಕ್ 75 ಇಂಚಿನ ವಿಶಾಲ ಪರದೆ ಹಾಗೂ ಯು.ಪಿ.ಎಸ್. ಸೌಲಭ್ಯವನ್ನು ಹೊಂದಿರುತ್ತದೆ (Viewsonic Touch Interactive Panel (IFP 7532 with OPS). ಮುಖ್ಯವಾಗಿ ಗ್ರಾಮಾಂತರ ವಿಭಾಗದ ಪ್ರದೇಶಗಳಿಗೆ ನೀಡಲಾಗಿದ್ದು ಅತ್ಯಂತ ಗಡಿ ಪ್ರದೇಶದಲ್ಲಿರುವ ಸರ್ಕಾರಿ ವಿದ್ಯಾಕೇಂದ್ರಗಳಿಗೆ ನೀಡಲಾಗಿದೆ. ನೂರಾರು ಕಾರ್ಯಕ್ರಮಗಳನ್ನು ಹೊಂದಿರುವ ಈ ಘಟಕದಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹೆಚ್ಚಿನ ಮಾಹಿತಿಗಳು ಹಾಗೂ ಶಿಕ್ಷಣದ ನೂತನ ವಿಚಾರಧಾರೆಗಳನ್ನು ಪರಿಚಯಪಡಿಸಲಾಗುತ್ತಿದೆ. ಇಂದು ಪಾವಗಡದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಈ ಒಂದು ಘಟಕವನ್ನು ನೀಡಲಾಯಿತು. ತನ್ಮೂಲಕ ಅತ್ಯಾಧುನಿಕ ರೀತಿಯ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರಧಾರೆಗಳನ್ನು ಅತಿ ಶೀಘ್ರದಲ್ಲಿಯೇ ತಿಳಿಯುವಂತಾಗುತ್ತದೆ. ಇದರ ಜೊತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ನಾನಾ ರೀತಿಯ ಪಠ್ಯಗಳನ್ನು ತಮ್ಮ ತಮ್ಮ ವಿದ್ಯಾಕೇಂದ್ರಗಳಲ್ಲಿಯೇ ಪಡೆಯಬಹುದಾಗಿದೆ ಎಂದು ಉದ್ಘಾಟನಾ ಭಾಷಣದಲ್ಲಿ ಈ ಯೋಜನೆಯ ರೂವಾರಿಯಾಗಿರುವ ಪರಮ ಪೂಜ್ಯ ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ನೆರೆದ ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶಿವಾನಂದಯ್ಯ, ಪ್ರಾಂಶುಪಾಲರು ಹಾಗೂ ನಿಕಟಪೂರ್ವ ಪ್ರಾಂಶುಪಾಲರಾದ ಶ್ರೀ ಮಾರಪ್ಪ ಹಾಗೂ ಭೋಧಕ ವರ್ಗದ ಸಿಬ್ಬಂದಿಯವರು ಉಪಸ್ಥಿತರಿದ್ದರು. ಡಾ.ಕೆ.ಸಣ್ಣಹೊನ್ನಯ್ಯ ಕಂಟಲಗೆರೆ, ಕಾರ್ಯದರ್ಶಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ರವರು ಸಹ ಉಪಸ್ಥಿತರಿದ್ದರು. ಶಿರಾ ತಾಲ್ಲೂಕಿನಿಂದ ಹಿಡಿದು, ಮಧುಗಿರಿ, ತುಮಕೂರು, ಪಾವಗಡ, ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮುಂತಾದ ತಾಲ್ಲೂಕುಗಳ ಆಯ್ದ ಸರ್ಕಾರಿ ವಿದ್ಯಾ ಕೇಂದ್ರಗಳಿಗೆ ಈ ಸೌಲಭ್ಯವನ್ನು ಪೂಜ್ಯ ಸ್ವಾಮೀಜಿಯವರು ಒದಗಿಸಿರುತ್ತಾರೆ. ಒಟ್ಟಿನಲ್ಲಿ ಗ್ರಾಮಾಂತರ ವಿಭಾಗದಲ್ಲಿಯೂ ಶಿಕ್ಷಣ ಕ್ಷೇತ್ರದ ಕ್ರಾಂತಿಯನ್ನು ತಂದಂತಾಗಿದೆ. ಕಾರ್ಯಕ್ರಮದಲ್ಲಿ ಮಹಿಳಾ ಕಾಲೇಜಿನ ಪರವಾಗಿ ಎಲ್ಲ ಗಣ್ಯ ವ್ಯಕ್ತಿಗಳು ಪೂಜ್ಯ ಸ್ವಾಮೀಜಿಯವರಿಗೆ ಗೌರವ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *