ಪ್ರಪಂಚವೇ ಮೆಚ್ಚಿಕೊಂಡ ನಿರ್ದೇಶಕ ರಾಜಮೌಳಿ. ಅವ್ರ ಆಫರ್ ಸಿಕ್ಕಿದರೆ ಸಾಕು ಅಂತ ಸ್ಟಾರ್‌ಗಳೇ ಕಾಯುತ್ತಾರೆ. ಆದರೆ, ರಾಜಮೌಳಿ ಸ್ವತಃ ಎರಡೆರಡು ಬಾರಿ ಸಿನಿಮಾ ಆಫರ್ ಕೊಟ್ಟರೂ, ತಿರಸ್ಕರಿಸಿದ ನಟಿಗೆ ಈಗ ಆಫರ್‌ಗಳೇ ಕಡಿಮೆಯಾಗೋಯ್ತು.

ದೊಡ್ಡ ದೊಡ್ಡ ಆರ್ಟಿಸ್ಟ್‌ಗಳೇ ರಾಜಮೌಳಿ ಸಿನಿಮಾ ಅಂದರೆ ಖುಷಿಪಡ್ತಾರೆ. ಆದರೆ ಒಬ್ಬ ಸ್ಟಾರ್ ನಟಿ ಮಾತ್ರ ಜಕ್ಕಣ್ಣ ಆಫರ್‌ನ್ನ ರಿಜೆಕ್ಟ್ ಮಾಡಿದ್ದರು. ಆ ನಟಿ ಯಾರು ಅಂತ ಗೊತ್ತಾ?

ಆ ನಟಿ ಯಾರು ಸೌತ್ ಇಂಡಿಯಾದ ಆಗಿನ ಸ್ಟಾರ್ ನಟಿ ತ್ರಿಷಾ ಕೃಷ್ಣನ್. ಸ್ಟಾರ್ ನಟಿಯಾಗಿದ್ದ ತ್ರಿಷಾ, ರಾಜಮೌಳಿ ಸಿನಿಮಾದ ಆಫರ್ ಅನ್ನು ಯಾಕೆ ರಿಜೆಕ್ಟ್ ಮಾಡಿದರು ಅಂತ ನಿಮಗೆ ಅನುಮಾನ ಇರಬಹುದು. ಅದಕ್ಕೆ ದೊಡ್ಡ ಕಾರಣವೇ ಇದೆ.

ತ್ರಿಷಾ ಆಗಿನ ಕಾಲದಲ್ಲೇ ಸ್ಟಾರ್ ನಟಿ ಆಗಿದ್ದರಿಂದ, ಒಬ್ಬ ಹಾಸ್ಯ ನಟನನ್ನು ಹೀರೋ ಮಾಡಿ ಆತನೊಂದಿಗೆ ಹೀರೋಯಿನ್ ಆಗಿ ನಟಿಸು ಎಂದರೆ ಸಾಧ್ಯವಿಲ್ಲ. ಹಾಸ್ಯನಟ ಸುನಿಲ್ ಜೊತೆ ಹೀರೋಯಿನ್ ಆಗಿ ನಟಿಸೋಕೆ ಇಷ್ಟ ಪಡುವುದಿಲ್ಲ ಎಂದು ನೇರವಾಗಿ ಹೇಳಿಬಿಟ್ಟರು. ಈ ಸಿನಿಮಾದಲ್ಲಿ ನಟಿಸಿದರೆ ಸ್ಟಾರ್ ನಟರೊಂದಿಗೆ ನಟಿಸುವ ತಮ್ಮ ಕೆರಿಯರ್‌ಗೆ ತೊಂದರೆ ಆಗಬಹುದು ಎಂಬ ಭಯದಿಂದಲೇ ಆಫರ್ ರಿಜೆಕ್ಟ್ ಮಾಡುತ್ತಿರುವುದಾಗಿ ಹೇಳಿದ್ದರಂತೆ.

ಈ ಸಿನಿಮಾ ಸುನೀಲನಿಗೆ ಜಾಕ್‌ಪಾಟ್ ಆಗಬೇಕಿತ್ತು. ಅವರ ನಿರೀಕ್ಷೆಯಂತೆ ಸಿನಿಮಾ ಏನೋ ಸೂಪರ್ ಹಿಟ್ ಆಗಿ, ದೊಡ್ಡ ಕಮಾಯಿ ಕೂಡ ಮಾಡಿತು. ಆದರೆ, ಒಬ್ಬ ಹಾಸ್ಯ ನಟನನ್ನು ತೆರೆಯ ಮೇಲೆ ಹೀರೋ ಆಗಿ ತೋರಿಸುವ ರಾಜಮೌಳಿ ಪ್ರಯೋಗವೂ ಯಶಸ್ವಿಯಾಯಿತು.

ಇದಾದ ನಂತರ ಸುನೀಲ್‌ನನ್ನು ಹೀರೋ ಆಗಿ ತೋರಿಸಲು ಚಿತ್ರರಂಗದವರೇ ಮುಂದಾಗಲಿಲ್ಲ. ಜನರು ಸುನೀಲ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರೂ, ಹೆಚ್ಚು ಸಿನಿಮಾ ಆಫರ್‌ಗಳು ಬರಲೇ ಇಲ್ಲ. ಇದೀಗ ಸುನಿಲ್ ಖಳನಾಯಕನಾಗಿ ತಮ್ಮ ಇನ್ನಿಂಗ್ಸ್ ಆರಂಭಿಸಿ ಯಶಸ್ವಿ ಆಗಿದ್ದಾರೆ.

ರಾಜಮೌಳಿ ಸುನಿಲ್ ಜೊತೆ ಸಿನಿಮಾ ಮಾಡುತ್ತಾರೆ ಅಂದಾಗ ಎಲ್ಲರೂ ಶಾಕ್ ಆಗಿದ್ದರು. ಆದರೆ ಜಕ್ಕಣ್ಣ ಹಿಟ್ ಕೊಟ್ಟೇ ಬಿಟ್ಟರು.

ಸುನಿಲ್‌ಗೆ ಈ ಸಿನಿಮಾ ದೊಡ್ಡ ಹಿಟ್. ಆದರೆ ಆಮೇಲೆ ಅವರ ಕೆರಿಯರ್ ನಿಲ್ಲೋ ಹಾಗೆ ಆಯ್ತು. ರಾಜಮೌಳಿ ಮಾತ್ರ ಪ್ಯಾನ್ ವರ್ಲ್ಡ್ ಡೈರೆಕ್ಟರ್ ಆದರು.

ಇನ್ನು ಸುನಿಲ್ ಇದೀಗ ಖಳನಾಯಕನಾಗಿ ಯಶಸ್ವಿಯಾಗಿದ್ದು, ಪುಷ್ಪ ಸಿನಿಮಾದ ನಂತರ ಕನ್ನಡದ ಮ್ಯಾಕ್ಸ್ ಸಿನಿಮಾದಲ್ಲಿಯೂ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Source link
ರಾಜಮೌಳಿ ಸಿನಿಮಾ ಆಫರ್ ತಿರಸ್ಕರಿಸಿದ ಸೌತ್ ನಟಿ, ಈಗ ಚಾನ್ಸೇ ಕಡಿಮೆಯಾಗೋಯ್ತು!